IRCTC Maha Kumbh Punya Kshetra Yatra:ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಅತಿ ದೊಡ್ಡ ಆಧ್ಯಾತ್ಮಿಕ ಹಬ್ಬವಾದ ಮಹಾ ಕುಂಭಮೇಳಕ್ಕೆ ಪ್ರಯಾಗ್ರಾಜ್ ಸಜ್ಜಾಗುತ್ತಿದೆ. ಈ ಮಹಾ ಕುಂಭಮೇಳ ಜನವರಿ 13 ರಿಂದ ಫೆಬ್ರವರಿ 26 ರವರೆಗೆ 45 ದಿನಗಳ ಕಾಲ ನಡೆಯಲಿದೆ. ಕುಂಭಮೇಳದ ಸಮಯದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂಬುದು ಅನೇಕ ಭಕ್ತರು ನಂಬಿಕೆಯಾಗಿದೆ.
ಇದರಿಂದ ಪವಿತ್ರ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಸ್ನಾನ ಮಾಡಲು ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ನೀವು ಸಹ ಮಹಾ ಕುಂಭಮೇಳಕ್ಕೆ ಹೋಗಲು ಬಯಸುತ್ತೀರಾ? ನಿಮಗಾಗಿ ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ ಗುಡ್ನ್ಯೂಸ್ ನೀಡಿದೆ. ಕುಂಭಮೇಳಕ್ಕೆ ಪ್ರವಾಸವು ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ನಡೆಯಲಿದೆ. ಈ ಪ್ರವಾಸ ಯಾವಾಗ ಪ್ರಾರಂಭವಾಗುತ್ತದೆ? ಪ್ರವಾಸದ ದರ ಎಷ್ಟು? ಯಾವ ತಾಣಗಳನ್ನು ವೀಕ್ಷಿಸಬಹುದು ಎಂಬುದರ ವಿವರಗಳನ್ನು ತಿಳಿಯೋಣ.
IRCTC 'ಮಹಾ ಕುಂಭ ಪುಣ್ಯಕ್ಷೇತ್ರ ಯಾತ್ರೆ' ಎಂಬ ಪ್ರವಾಸದ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಈ ಟೂರ್ ಪ್ಯಾಕೇಜ್‌ನ ಒಟ್ಟು ಅವಧಿಯು 7 ರಾತ್ರಿಗಳು ಮತ್ತು 8 ಹಗಲು ಆಗಿರುತ್ತದೆ. ಸಿಕಂದರಾಬಾದ್, ಕಾಜಿಪೇಟ್, ವಾರಂಗಲ್, ಖಮ್ಮಂ, ವಿಜಯವಾಡ, ಎಲೂರು, ರಾಜಮಂಡ್ರಿ, ತುನಿ, ದುವ್ವಾಡ, ವಿಜಿಯನಗರಂ ನಿಲ್ದಾಣಗಳಲ್ಲಿ ಯಾತ್ರಾರ್ಥಿಗಳು ಈ ಟ್ರೈನ್ನ್ನು ಹತ್ತಬಹುದು. ಪ್ರವಾಸವನ್ನು ಪೂರ್ಣಗೊಳಿಸಿದ ನಂತರ, ನೀವು ಆಯಾ ನಿಲ್ದಾಣಗಳಲ್ಲಿ ಹಿಂತಿರುಗಬಹುದು. ಮಹಾಕುಂಭ ಮೇಳದ ಜೊತೆಗೆ ವಾರಣಾಸಿ ಮತ್ತು ಅಯೋಧ್ಯೆಗೆ ಭೇಟಿ ನೀಡಬಹುದು.
ಪ್ರವಾಸದ ಮಾಹಿತಿ:
1ನೇ ದಿನ:ಭಾರತ್ ಗೌರವ್ ಪ್ರವಾಸಿ ರೈಲು ಮೊದಲ ದಿನ ಮಧ್ಯಾಹ್ನ 12ಕ್ಕೆ ಹೈದರಾಬಾದ್ನ ಸಿಕಂದರಾಬಾದ್‌ನಿಂದ ಹೊರಡಲಿದೆ. ಕಾಜಿಪೇಟ್, ವಾರಂಗಲ್, ಖಮ್ಮಂ, ವಿಜಯವಾಡ, ಏಲೂರು, ರಾಜಮಂಡ್ರಿಯಲ್ಲಿ ನೀವು ರೈಲು ಹತ್ತಬಹುದು.
2ನೇ ಮತ್ತು 3ನೇ ದಿನ:ಎರಡನೇ ದಿನ ತುನಿ, ದುವ್ವಾಡ, ಪೆಂಡುರ್ತಿ, ವಿಜಿಯನಗರಂ ಮಾರ್ಗವಾಗಿ ಸಂಚರಿಸಿ ಮೂರನೇ ದಿನ ಮಧ್ಯಾಹ್ನ ವಾರಣಾಸಿ ತಲುಪಲಿದೆ. ಅಲ್ಲಿಂದ ಹೋಟೆಲ್‌ಗೆ ಹೋಗಿ ಅಲ್ಲಿ ಚೆಕ್-ಇನ್ ಮಾಡಿ ಫ್ರೆಶ್ಅಪ್ ಆಗಬೇಕು. ಸಂಜೆ ವಾರಣಾಸಿಯಲ್ಲಿ ಗಂಗಾ ಆರತಿಯನ್ನು ವೀಕ್ಷಿಸಿ ಮತ್ತು ರಾತ್ರಿ ಅಲ್ಲಿ ಉಳಿದುಕೊಳ್ಳಬೇಕಾಗುತ್ತದೆ.
4ನೇ ದಿನ:ನಾಲ್ಕನೇ ದಿನ ಉಪಹಾರದ ನಂತರ, ಪ್ರಯಾಗರಾಜ್‌ಗೆ ಹೋಗಲಾಗುವುದು. ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿದ ಬಳಿಕ ಊಟ ಮಾಡಿ, ಕುಂಭಮೇಳಕ್ಕೆ ತೆರಳಲಾಗುವುದು. ಆ ದಿನ ಪೂರ್ತಿ ಅಲ್ಲಿಯೇ ಉಳಿಯಬೇಕಾಗುತ್ತದೆ. ಆ ರಾತ್ರಿ ಪ್ರಯಾಗರಾಜ್ನ ಟೆಂಟ್ ಸಿಟಿಯಲ್ಲಿ ವಾಸ್ತವ್ಯ ಹೂಡಲಾಗುವುದು.