ಕರ್ನಾಟಕ

karnataka

ETV Bharat / lifestyle

'ರಾಮಾಯಣ'ದ ಪ್ರಸಿದ್ಧ ತಾಣಗಳ ವೀಕ್ಷಣೆಗೆ ಶ್ರೀಲಂಕಾ ಪ್ರವಾಸ: IRCTC ಭರ್ಜರಿ ಟೂರ್ ಪ್ಯಾಕೇಜ್! - IRCTC SRI LANKA RAMAYANA YATRA

IRCTC Sri Lanka Ramayana Yatra: ಪ್ರಸಿದ್ಧ ಮಹಾಕಾವ್ಯ ರಾಮಾಯಣದ ದಂತಕಥೆ ತಾಣಗಳ ವೀಕ್ಷಣೆಗಾಗಿ 6 ದಿನಗಳ ಶ್ರೀಲಂಕಾ ಪ್ರವಾಸದ ಭರ್ಜರಿ ಪ್ಯಾಕೇಜ್ ಅನ್ನು ಐಆರ್​ಸಿಟಿಸಿ ನಿಮಗಾಗಿ ತಂದಿದೆ. ಟೂರ್​ನ ಸಂಪೂರ್ಣ ವಿವರಗಳು ಇಲ್ಲಿವೆ.

IRCTC LATEST TOUR PACKAGES  IRCTC SRILANKA TOUR PACKAGE DETAILS  IRCTC SRI LANKA RAMAYANA YATRA  SRI LANKA RAMAYANA YATRA TOUR
ಸಂಗ್ರಹ ಚಿತ್ರಗಳು (ETV Bharat)

By ETV Bharat Lifestyle Team

Published : Oct 25, 2024, 6:51 PM IST

IRCTC Sri Lanka Ramayana Yatra:ಶ್ರೀಲಂಕಾ. ಇದು ರಾಮಾಯಣ ಕಾಲದ ಪ್ರಾಚೀನ ಇತಿಹಾಸವನ್ನು ಹೊಂದಿರುವ ದ್ವೀಪ ರಾಷ್ಟ್ರ. ರಮಣೀಯ ಭೂದೃಶ್ಯಗಳನ್ನು ನೀವು ನೋಡಬೇಕೆಂದು ಬಯಸುತ್ತಿದ್ದರೆ ಇದು ನಿಮಗೆ ಹೇಳಿ ಮಾಡಿಸಿದ ತಾಣ. ಇದಕ್ಕಾಗಿ ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್​ (IRCTC) ನಿಮಗಾಗಿ ಅದ್ಭುತ ಪ್ಯಾಕೇಜ್ ತಂದಿದೆ. ಈ ಪ್ಯಾಕೇಜ್ ಎಷ್ಟು ದಿನಗಳವರೆಗೆ ಇರುತ್ತದೆ? ಯಾವ ಸ್ಥಳಗಳನ್ನು ನೋಡಬಹುದು? ಪ್ರವಾಸಕ್ಕೆ ತಗಲುವ ವೆಚ್ಚವೆಷ್ಟು ಎಂಬುದರ ಸಂಪೂರ್ಣ ಮಾಹಿತಿ ಹೀಗಿದೆ.

IRCTC 'ಶ್ರೀಲಂಕಾ ರಾಮಾಯಣ ಯಾತ್ರೆ' ಎಂಬ ಪ್ಯಾಕೇಜ್ ಅನ್ನು ಶಂಕರಿ ದೇವಿ ಶಕ್ತಿ ಪೀಠದೊಂದಿಗೆ ನೀಡುತ್ತಿದೆ. ಈ ಪ್ರವಾಸದಲ್ಲಿ ಕೊಲಂಬೊ, ದಂಬುಲ್ಲಾ, ಕ್ಯಾಂಡಿ, ನುವಾರ ಎಲಿಯಾದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳಿಗೆ ನೀವು ಭೇಟಿ ನೀಡಬಹುದು. 5 ರಾತ್ರಿ ಮತ್ತು 6 ದಿನಗಳನ್ನು ಪ್ಯಾಕೇಜ್ ಒಳಗೊಂಡಿರುತ್ತದೆ. ಪ್ರವಾಸವನ್ನು ಹೈದರಾಬಾದ್‌ನಿಂದ ವಿಮಾನ ಪ್ರಯಾಣದ ಮೂಲಕ ನಿರ್ವಹಿಸಲಾಗುತ್ತದೆ.

1ನೇ ದಿನ:ಬೆಳಿಗ್ಗೆ 8 ಗಂಟೆಗೆ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಾಗುತ್ತದೆ. ವಿಮಾನದಲ್ಲಿ ಹೊರಟು ಮಧ್ಯಾಹ್ನ 2 ಗಂಟೆಗೆ ಶ್ರೀಲಂಕಾ ತಲುಪುವುದು. ಅಲ್ಲಿಂದ ದಂಬುಲಾಗೆ ತೆರಳುವುದು. ದಾರಿಯಲ್ಲಿ ಚಿಲಾವ್‌ನಲ್ಲಿರುವ ಮುನೀಶ್ವರಂ ದೇವಸ್ಥಾನಕ್ಕೆ ಭೇಟಿ. ಬಳಿಕ ಮನವೇರಿ ದೇವಸ್ಥಾನ ತಲುಪುವುದು. ಅಲ್ಲಿಂದ ದಂಬುಲಕ್ಕೆ ಪ್ರಯಾಣ. ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿ ಮತ್ತು ರಾತ್ರಿ ಅಲ್ಲಿಯೇ ಉಳಿಯವುದು.

2ನೇ ದಿನ:ಹೋಟೆಲ್‌ನಲ್ಲಿ ಉಪಹಾರದ ನಂತರ, ದಂಬುಲ್ಲಾ ಗುಹಾ ದೇವಾಲಯಕ್ಕೆ ಭೇಟಿ. ಊಟದ ನಂತರ ಟ್ರಿಂಕೋಮಲಿಗೆ ತೆರಳಿ ತಿರುಕೋಣೇಶ್ವರ ಮತ್ತು ಲಕ್ಷ್ಮೀನಾರಾಯಣ ಪೆರುಮಾಳ್ ದೇವಸ್ಥಾನಕ್ಕೆ ಭೇಟಿ ನೀಡಿ, ನಂತರ ದಂಬುಲ್ಲಾಗೆ ಹಿಂತಿರುಗುವುದು. ರಾತ್ರಿ ಇಲ್ಲಿಯೇ ಹೋಟೆಲ್​ನಲ್ಲಿ ಉಳಿದುಕೊಳ್ಳುವುದು.

3ನೇ ದಿನ: ಉಪಹಾರದ ನಂತರ ಕ್ಯಾಂಡಿಗೆ ಹೋಗುವುದು. ದಿನವಿಡೀ, ಜೆಮ್ಸ್ ಫ್ಯಾಕ್ಟರಿ/ಬಾಟಿಕ್ ಫ್ಯಾಕ್ಟರಿ, ಟೂತ್ ಟೆಂಪಲ್ (ವಿಶ್ವ ಪ್ರಸಿದ್ಧ ಗೌತಮ ಬುದ್ಧ ದೇವಸ್ಥಾನ)ನಂತಹ ಅನೇಕ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುವುದು. ಸಂಜೆಯ ವೇಳೆಯೂ ಹಲವು ಸ್ಥಳಗಳಿಗೆ ಭೇಟಿ ನೀಡುವುದು. ಕ್ಯಾಂಡಿಯಲ್ಲಿ ರಾತ್ರಿ ತಂಗುವುದು.

4ನೇ ದಿನ:ಬೆಳಗಿನ ಉಪಹಾರದ ನಂತರ ನುವಾರ ಎಲಿಯಾಗೆ ಹೋಗುವುದು. ಮಾರ್ಗಮಧ್ಯೆ ರಾಂಬೋದ ಹನುಮಾನ್ ದೇವಸ್ಥಾನಕ್ಕೆ ಭೇಟಿ. ನಂತರ ಸೀತಾ ಅಮ್ಮನ ದೇವಸ್ಥಾನ, ಸೀತಾ ಎಲಿಯಾ, ಅಶೋಕ ವಾಟಿಕಾಗೆ ಭೇಟಿ. ನಂತರ ಕ್ಯಾಂಡಿಗೆ ಹಿಂತಿರುಗುವುದು. ಕ್ಯಾಂಡಿ ಹೋಟೆಲ್‌ನಲ್ಲಿ ರಾತ್ರಿ ವಿಶ್ರಾಂತಿ.

5ನೇ ದಿನ:ಉಪಹಾರದ ನಂತರ ಹೋಟೆಲ್‌ನಿಂದ ಚೆಕ್​ಔಟ್​ ಮಾಡಿ ಪಿನ್ನವಾಲಾ ಆನೆ ಅನಾಥಾಶ್ರಮಕ್ಕೆ ಭೇಟಿ. ನಂತರ ಕೊಲಂಬೊ, ಪಂಚಮುಗ ಆಂಜನೇಯರ್ ದೇವಾಲಯ, ಕೆಲನಿಯಾ ಬುದ್ಧ ದೇವಾಲಯಕ್ಕೆ ಭೇಟಿ. ಸಂಜೆ ಕೊಲಂಬೊದಲ್ಲಿ ಶಾಪಿಂಗ್ ಮಾಡಿ ರಾತ್ರಿ ಅಲ್ಲೇ ಉಳಿದುಕೊಳ್ಳುವುದು.

6ನೇ ದಿನ:ಉಪಹಾರದ ನಂತರ ಹೋಟೆಲ್‌ನಿಂದ ಚೆಕ್​ಔಟ್ ಮಾಡಿ ಮಧ್ಯಾಹ್ನದವರೆಗೆ ಕೊಲಂಬೊದಲ್ಲಿ ಅನೇಕ ಸ್ಥಳಗಳಿಗೆ ಭೇಟಿ ನೀಡಬಹುದು. ನಂತರ ವಿಮಾನ ನಿಲ್ದಾಣಕ್ಕೆ ಪಯಣ. ಮಧ್ಯಾಹ್ನ 3 ಗಂಟೆಗೆ ಕೊಲಂಬೊದಿಂದ ಹೊರಟು ಸಂಜೆ ಹೈದರಾಬಾದ್ ತಲುಪುವ ಮೂಲಕ ಪ್ರವಾಸ ಪೂರ್ಣ.

ಪ್ರವಾಸದ ದರ ವಿವರ:

  • ಸಿಂಗಲ್ ಶೇರಿಂಗ್​ಗೆ ₹83,170
  • ಡಬಲ್ ಶೇರಿಂಗ್​ಗೆ ₹68,420
  • ಟ್ರಿಪಲ್ ಶೇರಿಂಗ್​ಗೆ ₹67,480.
  • ಹಾಸಿಗೆ ಇರುವ ಮಕ್ಕಳಿಗೆ ₹43,400, ₹41,160

ಪ್ಯಾಕೇಜ್ ಏನೆಲ್ಲ ಒಳಗೊಂಡಿದೆ?:

  • ವಿಮಾನ ಶುಲ್ಕಗಳು
  • ಹೋಟೆಲ್ ವಸತಿ
  • 5 ಉಪಹಾರಗಳು, 5 ಊಟಗಳು ಮತ್ತು 5 ರಾತ್ರಿಯ ಊಟಗಳು ಸೇರಿವೆ.
  • ಪ್ರವಾಸ ಮಾರ್ಗದರ್ಶಿ ಲಭ್ಯ.
  • ಪ್ಯಾಕೇಜ್ ನಮೂದಿಸಿದ ಸ್ಥಳಗಳ ಪ್ರವೇಶ ಶುಲ್ಕವನ್ನೂ ಒಳಗೊಂಡಿದೆ.
  • ಪ್ರಯಾಣ ವಿಮೆ ಲಭ್ಯ.
  • ಪ್ರಸ್ತುತ ಈ ಪ್ರವಾಸವು ನವೆಂಬರ್ 28ರಂದು ಲಭ್ಯ.
  • ಪ್ರವಾಸದ ಬಗ್ಗೆ ಸಂಪೂರ್ಣ ವಿವರ ಮತ್ತು ಪ್ಯಾಕೇಜ್ ಬುಕಿಂಗ್​ಗಾಗಿ ಲಿಂಕ್ ಕ್ಲಿಕ್ ಮಾಡಿ.

ಹೆಚ್ಚಿನ ಮಾಹಿತಿಗಾಗಿ ಐಆರ್​ಸಿಟಿಸಿ ವೆಬ್​ಸೈಟ್​ನ್ನು ಸಂಪರ್ಕಿಸಬಹುದು:https://www.irctctourism.com/pacakage_description?packageCode=SHO10

ಇವುಗಳನ್ನು ಓದಿ:

ABOUT THE AUTHOR

...view details