ETV Bharat / bharat

ದೇಶದ ಜನರಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ - PM MODI GREETS NATION ON NEW YEAR

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಈ ವರ್ಷವು ಹೊಸ ಅವಕಾಶ, ಯಶಸ್ಸು ಮತ್ತು ನಿರಂತರ ಸಂತಸ ತರಲಿ ಎಂದು ಆಶಿಸುತ್ತೇನೆ ಎಂದು ಹಾರೈಸಿದ್ದಾರೆ.

president-murmu-and-pm-modi-greets-nation-on-new-year
ರಾಷ್ಟ್ರಪತಿ ದ್ರೌಪದಿ ಮುರ್ಮು- ಪ್ರಧಾನಿ ಮೋದಿ (ಐಎಎನ್​ಎಸ್​)
author img

By PTI

Published : Jan 1, 2025, 10:20 AM IST

ನವದೆಹಲಿ: ಇಂದು 2025ರ ಹೊಸ ವರ್ಷದ ಮೊದಲ ದಿನ. ಈ ಹಿನ್ನೆಲೆ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಭಾಶಯ ಕೋರಿದ್ದಾರೆ.

ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಈ ವರ್ಷವು ಹೊಸ ಅವಕಾಶ, ಯಶಸ್ಸು ಮತ್ತು ನಿರಂತರ ಸಂತಸ ತರಲಿ ಎಂದು ಆಶಿಸುತ್ತೇನೆ. 2025ರ ಹೊಸ ವರ್ಷದ ಶುಭಾಶಯಗಳು. ಎಲ್ಲರಿಗೂ ಅದ್ಭುತ ಆರೋಗ್ಯ ಮತ್ತು ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಹೊಸ ವರ್ಷದ ಶುಭಾಶವನ್ನು ಕೋರಿದ್ದು, ಈ 2025ರ ವರ್ಷ ನಿಮ್ಮೆಲ್ಲರಿಗೆ ಖುಷಿ, ಸಾಮರಸ್ಯೆ ಮತ್ತು ಸಮೃದ್ಧಿಯನ್ನು ತರಲಿ. ಈ ಶುಭ ಸಂದರ್ಭದಲ್ಲಿ ಭಾರತ ಮತ್ತು ಜಗತ್ತಿನ ಸುಸ್ಥಿರ ಭವಿಷ್ಯಕ್ಕೆ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ತೋರೋಣ ಎಂದು ಹೇಳಿದ್ದಾರೆ.

ಉಪ ರಾಷ್ಟ್ರಪತಿ ಜಗದೀಪ್​ ಧನ್​ಕರ್​ ಕೂಡ ಶಭಾಶಶಯ ತಿಳಿಸಿದ್ದು, 2025ಕ್ಕೆ ಎಲ್ಲಾ ನಾಗರಿಕರು ಪ್ರವೇಶ ಮಾಡುತ್ತಿದ್ದು, ಶುಭಾಶಯಗಳು. ರಾಷ್ಟ್ರ ಮೊದಲು ಎಂಬ ಸಂಕಲ್ಪದೊಂದಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪೋಷಿಸುತ್ತಾ ಮುನ್ನಡೆಯೋಣ. ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿ ಸಿಗಲೆಂದು ಹಾರೈಸುತ್ತೇನೆ.

ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ ಅನೇಕ ರಾಜಕೀಯ ನಾಯಕರು ದೇಶದ ಜನರಿಗೆ ಶುಭಾಶಯ ಕೋರಿದ್ದಾರೆ. ಬಿಎಸ್​ಪಿ ಮುಖ್ಯಸ್ಥೆ ಮಯಾವತಿ, ಕೇಂದ್ರ ಸಚಿವ ರಾಜನಾಥ್​ ಸಿಂಗ್​, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಸೇರಿದಂತೆ ಹಲವರು ದೇಶದ ಜನರಿಗೆ ನೂತನ ಸಂವತ್ಸರದ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: 2024ಕ್ಕೆ ಗುಡ್ ​​​​ಬೈ​, 2025ಕ್ಕೆ ವೆಲ್​ಕಮ್​ ಮಾಡಲು ಕ್ಷಣಗಣನೆ: ದೆಹಲಿಯಲ್ಲಿ ಭಾರಿ ಬಿಗಿ ಭದ್ರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.