Ajwain Rasam Recipe: ಚಳಿಗಾಲದಲ್ಲಿ ಅನೇಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಶೀತ, ಕೆಮ್ಮು ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳು ಹೆಚ್ಚು ತೊಂದರೆ ಕೊಡುತ್ತವೆ. ಇಂತಹ ಸಮಯದಲ್ಲಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಈ ಅಜವಾನದ ರಸಂ ತಯಾರಿಸಿ ತಿಂದರೆ ಒಳ್ಳೆಯ ಫಲಿತಾಂಶ ಲಭಿಸುತ್ತದೆ. ಅದರಲ್ಲೂ ಮುಖ್ಯವಾಗಿ ನಾನ್ವೆಜ್ ಸೇವಿಸಿದ ನಂತರ, ಈ ರಸಂ ಸೇವಿಸಿದರೆ ಸಾಕು, ಆಹಾರ ಸಲೀಸಾಗಿ ಜೀರ್ಣವಾಗುವುದರ ಜೊತೆಗೆ ದೇಹವೂ ಹಗುರವಾಗುತ್ತದೆ.
ಅಲ್ಲದೆ ಅಜವಾನ ರಸಂ ತಿನ್ನುವುದರಿಂದ ನೆಗಡಿ, ಕೆಮ್ಮು, ವಾಕರಿಕೆ ಮುಂತಾದ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಇದಲ್ಲದೆ, ಈ ರಸಂ ತಯಾರಿಸಲು ನೀವು ಹೆಚ್ಚು ಸಮಯ ವಿನಿಯೋಗಿಸುವ ಅಗತ್ಯವಿಲ್ಲ. ಅತಿ ಕಡಿಮೆ ಸಮಯದಲ್ಲಿ ಈ ರಸಂ ಅನ್ನು ಸಿದ್ಧಪಡಿಸಬಹುದು. ಇದೀಗ ಈ ಆರೋಗ್ಯಕರ ಹಾಗೂ ಟೇಸ್ಟಿ ಅಜವಾನ ರಸಂ ರೆಡಿ ಮಾಡಲು ಬೇಕಾಗುವ ಪದಾರ್ಥಗಳೇನು? ಈ ರಸಂ ಉತ್ಪಾದನಾ ಪ್ರಕ್ರಿಯೆ ಹೇಗೆ ಎಂಬುದನ್ನು ನೋಡೋಣ.
ಅಜವಾನ ರಸಂ ರೆಡಿ ಮಾಡಲು ಬೇಕಾಗುವ ಪದಾರ್ಥಗಳು:
ಅಜವಾನ ರಸಂ ಪೌಡರ್ಗಾಗಿ:
- ಅಜವಾನ - 1 ಟೀಸ್ಪೂನ್
- ಒಣಮೆಣಸಿನಕಾಯಿ - 2
- ಕೊತ್ತಂಬರಿ - 1 ಟೀಸ್ಪೂನ್
- ಜೀರಿಗೆ - ಒಂದು ಟೀಸ್ಪೂನ್
ರಸಂ ಮಾಡಲು ಬೇಕಾಗುವ ಸಾಮಗ್ರಿ:
- ಎಣ್ಣೆ - 1 ಟೀಸ್ಪೂನ್
- ಮೆಂತ್ಯ - ಒಂದು ಟೀಸ್ಪೂನ್
- ಸಾಸಿವೆ - ಒಂದು ಟೀಸ್ಪೂನ್
- ಜೀರಿಗೆ - ಒಂದು ಟೀಸ್ಪೂನ್
- ಬೆಳ್ಳುಳ್ಳಿ ಎಸಳು - 4
- ಒಣಮೆಣಸಿನಕಾಯಿ - 1
- ಹಸಿಮೆಣಸಿನಕಾಯಿ - 2
- ಹುಣಸೆಹಣ್ಣು - ನಿಂಬೆ ಗಾತ್ರ
- ಅರಿಶಿನ - ಕಾಲು ಟೀಸ್ಪೂನ್
- ಕಲ್ಲು ಉಪ್ಪು - ರುಚಿಗೆ
- ಕರಿಬೇವಿನ ಎಲೆಗಳು - 2 ಚಿಗುರುಗಳು
ಅಜವಾನ ರಸಂ ತಯಾರಿಸುವ ವಿಧಾನ:
- ಇದಕ್ಕಾಗಿ ಮೊದಲು ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದಕ್ಕೆ ಜೀರಿಗೆ, ಕರಿಮೆಣಸು, ಕೊತ್ತಂಬರಿ ಸೊಪ್ಪು ಹಾಗೂ ಜೀರಿಗೆಯನ್ನು ಹಾಕಿ ಸಣ್ಣಗೆ ಪುಡಿ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ.
- ಈಗ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಸ್ವಲ್ಪ ಬಿಸಿಯಾದ ಬಳಿಕ ಸಾಸಿವೆ ಹಾಗೂ ಮೆಂತ್ಯ ಹಾಕಿ ಹುರಿಯಿರಿ. ಜೀರಿಗೆ, ರುಬ್ಬಿದ ಬೆಳ್ಳುಳ್ಳಿ ಎಸಳು ಹಾಗೂ ಒಣಮೆಣಸಿನಕಾಯಿ ಸೇರಿಸಿ ಸ್ವಲ್ಪ ಸಮಯ ಫ್ರೈ ಮಾಡಿಕೊಳ್ಳಿ.
- ಬಳಿಕ 250ಎಂಎಲ್ ಹುಣಸೆ ರಸ, ಅರಿಶಿನ, ಕಲ್ಲು ಉಪ್ಪು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
- ನಂತರ 250 ಮಿಲಿ ನೀರು ಮತ್ತು ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡ ಅಜವಾನ ರಸಂ ಪುಡಿಯನ್ನು ಸೇರಿಸಿ ಹಾಗೂ ಮಧ್ಯಮ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಬೇಕಾಗುತ್ತದೆ.
- ನಂತರ ಒಲೆ ಆಫ್ ಮಾಡಿ ಹಾಗೂ ಬಿಸಿಯಾಗಿ ಬಡಿಸಿ. ಆಗ ತುಂಬಾ ರುಚಿಯಾದ ಘಮಘಮಿಸುವ 'ವಾಮು ರಸಂ' ಸೇವಿಸಲು ಸಿದ್ಧ!
- ಈ ರಸಂ ಅನ್ನದೊಂದಿಗೆ ಬಿಸಿಬಿಸಿಯಾಗಿ ತಿನ್ನಬಹುದು ಇಲ್ಲವೇ, ನೇರವಾಗಿ ಕುಡಿಯಬಹುದು. ಅಜವಾನ ರಸಂ ತುಂಬಾ ರುಚಿಕರವಾಗಿರುತ್ತದೆ. ನಿಮಗೆ ಇಷ್ಟವಾದರೆ, ಒಮ್ಮೆ ಈ ರೆಸಿಪಿಯನ್ನು ಪ್ರಯತ್ನಿಸಿ ನೋಡಿ.