IRCTC Magical Madhya Pradesh Tour:ನೀವು ಮಧ್ಯಪ್ರದೇಶದ ಪ್ರಸಿದ್ಧ ವಿವಿಧ ಪ್ರವಾಸಿ ಸ್ಥಳಗಳು ಹಾಗೂ ದೇವಾಲಯಗಳಿಗೆ ಭೇಟಿ ನೀಡಲು ಬಯಸುತ್ತೀರಾ? IRCTC ನಿಮಗಾಗಿ ಹೊಸ ಪ್ಯಾಕೇಜ್ ತಂದಿದೆ. ಕೈಗೆಟುಕುವ ಬೆಲೆಯಲ್ಲಿ ಮಧ್ಯಪ್ರದೇಶದ ವಿವಿಧ ತಾಣಗಳ ಸೌಂದರ್ಯವನ್ನು ವೀಕ್ಷಿಸಲು ಇದು ಅದ್ಭುತ ಅವಕಾಶವಾಗಿದೆ. ಹಾಗಾದರೆ, ಈ ಪ್ರವಾಸದ ಪ್ಯಾಕೇಜ್ ಯಾವಾಗ ಲಭ್ಯವಿರುತ್ತದೆ? ಟೂರ್ನ ಶುಲ್ಕ ಎಷ್ಟು? ಯಾವ ಸ್ಥಳಗಳನ್ನು ವೀಕ್ಷಣೆ ಮಾಡಬಹುದು ಎಂಬುದರ ವಿವರಗಳನ್ನು ಇಲ್ಲಿ ತಿಳಿಯೋಣ.
ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) "ಮ್ಯಾಜಿಕಲ್ ಮಧ್ಯಪ್ರದೇಶ" ಎಂಬ ಹೆಸರಿನಲ್ಲಿ ಪ್ರವಾಸದ ಪ್ಯಾಕೇಜ್ನ್ನು ಘೋಷಿಸಿದೆ. ಪ್ರವಾಸವು ಒಟ್ಟು 5 ರಾತ್ರಿ ಹಾಗೂ 6 ಹಗಲು ಆಗಿರುತ್ತದೆ.
ಪ್ರವಾಸದ ವಿವರ ಹೀಗಿದೆ...
1ನೇ ದಿನ:ಮೊದಲ ದಿನ ನಿಮ್ಮ ಪ್ರವಾಸವು ಹೈದರಾಬಾದ್ನ ಕಾಚಿಗುಡ ರೈಲು ನಿಲ್ದಾಣದಲ್ಲಿ 4 ಗಂಟೆ 40 ನಿಮಿಷಕ್ಕೆ ಆರಂಭವಾಗುತ್ತದೆ. ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ನಲ್ಲಿ ಇಡೀ ರಾತ್ರಿಯ ಪ್ರಯಾಣ ಮುಂದುವರಿಯುತ್ತದೆ (ರೈಲು ಸಂಖ್ಯೆ- 12707).
2ನೇ ದಿನ:ಎರಡನೇ ದಿನದಂದು ಬೆಳಗ್ಗೆ 8.15ಕ್ಕೆ ಭೋಪಾಲ್ ತಲುಪಲಾಗುವುದು. ನಂತರ, ಮೊದಲೇ ಬುಕ್ ಮಾಡಿದ ಹೋಟೆಲ್‌ಗೆ ತೆರಳಲಾಗುತ್ತದೆ. ಹೋಟೆಲ್‌ನಲ್ಲಿ ಚೆಕ್-ಇನ್ ಹಾಗೂ ರಿಫ್ರೆಶ್‌ಮೆಂಟ್ ಆದ ನಂತರ ಸಾಂಚಿ ಸ್ತೂಪಕ್ಕೆ ಭೇಟಿ ನೀಡಲಾಗುವುದು. ಇದಾದ ಬಳಿಕ ಭೋಜೇಶ್ವರ ಮಹಾದೇವ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯುವುದು. ದರ್ಶನ ಮಾಡಿದ ಬಳಿಕ ಮತ್ತೆ ಭೋಪಾಲ್‌ಗೆ ಹಿಂತಿರುಗಲಾಗುವುದು. ಬುಡಕಟ್ಟು ವಸ್ತುಸಂಗ್ರಹಾಲಯಕ್ಕೆ ಸಂಜೆ ಭೇಟಿ ಕೊಡಲಾಗುವುದು. ಅಂದು ರಾತ್ರಿ ಭೋಪಾಲ್ನಲ್ಲಿ ತಂಗುವ ವ್ಯವಸ್ಥೆ ಮಾಡಲಾಗುತ್ತದೆ.
3ನೇ ದಿನ:ಮೂರನೇ ದಿನದ ಉಪಹಾರ ಸೇವಿಸಿದ ನಂತರ, ಪಚ್ಮರ್ಹಿಗೆ ಪ್ರಯಾಣ ಪ್ರಾರಂಭವಾಗುತ್ತದೆ. ಇಲ್ಲಿ ತಲುಪಿ, ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿದ ನಂತರ, ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಇಲ್ಲಿವ ವಿವಿಧ ಸ್ಥಳಗಳಿಗೆ ಭೇಟಿ ನೀಡಬಹುದು. ನಂತರ ರಾತ್ರಿ ಅದೇ ಹೋಟೆಲ್‌ನಲ್ಲಿ ಉಳಿಯಲಾಗುವುದು.
4ನೇ ದಿನ:ನಾಲ್ಕನೇ ದಿನದ ಉಪಹಾರದ ಬಳಿಕ, ಪಂಚ ಪಾಂಡವ್ ಗುಹೆಗಳು ಮತ್ತು ಜಟಾ ಶಂಕರ್ ದೇವಾಲಯಕ್ಕೆ ಭೇಟಿ ನೀಡಲಾಗುತ್ತದೆ . ಅದೇ ರೀತಿ.. ಬೀ ಫಾಲ್ಸ್, ಸನ್ ಸೆಟ್ ಪಾಯಿಂಟ್ ನಂತಹ ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡಲಾಗುವುದು. ನಂತರ, ಅವರು ಹೋಟೆಲ್‌ಗೆ ಹಿಂತಿರುಗಿ ರಾತ್ರಿ ಅಲ್ಲಿಯೇ ಉಳಿಯಬೇಕಾಗುತ್ತದೆ.
5ನೇ ದಿನ:ಐದನೇ ದಿನ, ಬೆಳಗ್ಗೆ ಉಪಹಾರದ ಬಳಿಕ, ನೀವು ಜಬಲ್ಪುರಕ್ಕೆ ಪ್ರಯಾಣ ಪ್ರಾರಂಭಿಸುತ್ತೀರಿ. ಅಲ್ಲಿ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿದ ನಂತರ, ಮಧ್ಯಾಹ್ನ ಮಾರ್ಬಲ್ ರಾಕ್ಸ್ ಮತ್ತು ಧುಂಧರ್ ಜಲಪಾತಗಳಿಗೆ ಭೇಟಿ ಕೊಡಲಾಗುವುದು. ಬಳಿಕ ಜಬಲ್‌ಪುರ ರೈಲು ನಿಲ್ದಾಣಕ್ಕೆ ತೆರಳಲಾಗುವುದು. ಅಲ್ಲಿಂದ ಸಿಕಂದರಾಬಾದ್‌ಗೆ ಹಿಂದಿರುಗುವ ಪ್ರಯಾಣವು ಮಧ್ಯರಾತ್ರಿ 2 ಗಂಟೆಗೆ ಪ್ರಾರಂಭವಾಗುತ್ತದೆ.
6ನೇ ದಿನ:ಆರನೇ ದಿನ, ನಿಮ್ಮ ಪ್ರವಾಸವು ಸಿಕಂದರಾಬಾದ್‌ಗೆ ರಾತ್ರಿ 9.30ಕ್ಕೆ ಆಗಮನದೊಂದಿಗೆ ಕೊನೆಗೊಳ್ಳಲಿದೆ.
ಪ್ಯಾಕೇಜ್ ಬೆಲೆ ವಿವರಗಳು:
- 1ರಿಂದ 3 ಪ್ರಯಾಣಿಕರಿಗೆ..
- ಕಂಫರ್ಟ್(3AC)ನಲ್ಲಿ ಡಬಲ್ ಸೀಟು ಹಂಚಿಕೆ (ವ್ಯಕ್ತಿಯೊಬ್ಬರಿಗೆ)- ₹24,150
- ಮೂರು ಸೀಟು ಹಂಚಿಕೆ- ಒಬ್ಬರಿಗೆ ₹18,440
- 5 ರಿಂದ 11 ವರ್ಷದ ಮಕ್ಕಳಿಗೆ ಹಾಸಿಗೆಯೊಂದಿಗೆ ₹13,550 ಶುಲ್ಕ ನಿಗದಿಪಡಿಸಲಾಗಿದೆ.
- ಸ್ಟ್ಯಾಂಡರ್ಡ್ (SL) ನಲ್ಲಿ ಡಬಲ್ ಸೀಟ್ ಹಂಚಿಕೆಗಾಗಿ ₹21,750,
- ಮೂರು ಸೀಟು ಹಂಚಿಕೆಗೆ ₹16,050
- 5ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಹಾಸಿಗೆ ಸಹಿತ ₹11,150 ಶುಲ್ಕ ನಿಗದಿಪಡಿಸಲಾಗಿದೆ.
- 4 ರಿಂದ 6 ಪ್ರಯಾಣಿಕರಿಗೆ.
- ಕಂಫರ್ಟ್ (3AC) ಡಬಲ್ ಹಂಚಿಕೆ (ವ್ಯಕ್ತಿಯೊಬ್ಬರಿಗೆ) ₹20,350
- ಮೂರು ಸೀಟು ಹಂಚಿಕೆಗೆ ₹17,140
- ಸ್ಟ್ಯಾಂಡರ್ಡ್‌ನಲ್ಲಿ (SL) ಡಬಲ್ ಸೀಟು ಹಂಚಿಕೆಗೆ ₹17,950
- ಮೂರು ಸೀಟು ಹಂಚಿಕೆಗೆ ₹14,740 ಶುಲ್ಕ ಪಾವತಿಸಬೇಕು.
- IRCTC ನಿರ್ವಹಿಸುವ ಈ ಪ್ರವಾಸವು ಪ್ರತಿ ಶುಕ್ರವಾರ ಪ್ರವಾಸಿಗರಿಗೆ ಲಭ್ಯವಿದೆ.
- ಈ ಪ್ಯಾಕೇಜ್‌ನ ಸಂಪೂರ್ಣ ವಿವರಗಳಿಗೆ, ಪ್ಯಾಕೇಜ್ ಬುಕ್ಕಿಂಗ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಿ:https://www.irctctourism.com/pacakage_description?packageCode=SHR100