ಕರ್ನಾಟಕ

karnataka

ETV Bharat / lifestyle

IRCTC ಭರಪೂರ ಟೂರ್ ಪ್ಯಾಕೇಜ್​; ಆಧ್ಯಾತ್ಮಿಕ ತಾಣಗಳಿಗೆ ಭೇಟಿ, ಸಮುದ್ರತೀರದಲ್ಲಿ ಮೋಜು ಮಸ್ತಿ! - IRCTC COASTAL KARNATAKA PACKAGE

IRCTC Coastal Karnataka Package: ನಿಮಗಾಗಿ ಕಡಿಮೆ ದರದಲ್ಲಿ IRCTC ಸೂಪರ್ ಟೂರ್ ಪ್ಯಾಕೇಜ್ ತಂದಿದೆ. ಆಧ್ಯಾತ್ಮಿಕ ತಾಣಗಳನ್ನು ವೀಕ್ಷಿಸುವುದರ ಜೊತೆಗೆ ಸಮುದ್ರತೀರದಲ್ಲಿ ಭರ್ಜರಿ ಮೋಜು ಮಸ್ತಿ ಮಾಡಬಹುದಾಗಿದೆ.

IRCTC LATEST TOUR PACKAGES  IRCTC COASTAL KARNATAKA PACKAGE  IRCTC KARNATAKA PACKAGE  IRCTC HYDERABAD KARNATAKA PACKAGE
ಕರಾವಳಿ ಕರ್ನಾಟಕದ ಭರಪೂರ ಟೂರ್ (ETV Bharat)

By ETV Bharat Lifestyle Team

Published : Nov 14, 2024, 4:03 PM IST

IRCTC Coastal Karnataka Package: ಹಲವರು ದೇಶದ ಪ್ರಸಿದ್ಧ ದೇವಾಲಯಗಳು, ಸುಂದರ ಸ್ಥಳಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ಲಾನ್ ಮಾಡುತ್ತಾರೆ. ಆದರೆ, ಅಲ್ಲಿಗೆ ಹೇಗೆ ಹೋಗಬೇಕೆಂಬುದು ತಿಳಿಯದೆ ಮತ್ತು ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ ಎಂದು ಅನೇಕ ಜನರು ಹಿಂದೇಟು ಹಾಕುತ್ತಾರೆ. ಹಾಗಾಗಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಇಂತಹವರಿಗೆ ವಿಶೇಷ ಆಫರ್​ ಟೂರ್​ ಪ್ಯಾಕೇಜ್​ ಘೋಷಿಸಿದೆ. ಕಡಿಮೆ ದರದಲ್ಲಿ ಕರ್ನಾಟಕದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲು ಈ ಪ್ರವಾಸದ ಪ್ಯಾಕೇಜ್​ನ್ನು ಘೋಷಿಸಿದೆ. ಈ ಟೂರ್​ ಪ್ಯಾಕೇಜ್​ಗೆ ಎಷ್ಟು ವೆಚ್ಚವಾಗುತ್ತದೆ? ಯಾವ ಸ್ಥಳಗಳನ್ನು ವೀಕ್ಷಿಸಬಹುದು ಎಂಬುದರ ವಿವರ ಇಲ್ಲಿದೆ..

'ಕರಾವಳಿ ಕರ್ನಾಟಕ' ಹೆಸರಿನ ಪ್ರಸಿದ್ಧ ಪ್ರವಾಸಿ ಸ್ಥಳಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡಲು IRCTC ಟೂರ್​ ಪ್ಯಾಕೇಜ್​ನ್ನು ಘೋಷಿಸಿದೆ. ಈ ಪ್ರವಾಸವು ಪ್ರತಿ ಮಂಗಳವಾರ ಹೈದರಾಬಾದ್‌ನಿಂದ ರೈಲು ಪ್ರಯಾಣದ ಮೂಲಕ ಸಾಗುತ್ತದೆ. ಪ್ರವಾಸದ ಒಟ್ಟು ಅವಧಿಯು 5 ರಾತ್ರಿ ಹಾಗೂ 6 ದಿನಗಳು. ಈ ಪ್ರವಾಸದ ಪ್ಯಾಕೇಜ್ ಉಡುಪಿ, ಶೃಂಗೇರಿ, ಮುರುಡೇಶ್ವರ ಮುಂತಾದ ಪ್ರದೇಶಗಳನ್ನು ಒಳಗೊಂಡಿದೆ. ಪ್ರಯಾಣದ ವಿವರಗಳನ್ನು ತಿಳಿಯೋಣ..

1ನೇ ದಿನ:ಮೊದಲ ದಿನ ಕಾಚಿಗುಡ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ- 12789) ರೈಲು ಕಾಚಿಗುಡ ನಿಲ್ದಾಣದಿಂದ ಬೆಳಗ್ಗೆ 6.05ಕ್ಕೆ ಹೊರಡಲಿದೆ. ಇಡೀ ದಿನ ಪ್ರಯಾಣದಲ್ಲಿ ಹೋಗುತ್ತದೆ.

2ನೇ ದಿನ:ಎರಡನೇ ದಿನ ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ಸ್ಟೇಷನ್ ತಲುಪಲಾಗುವುದು. ಅಲ್ಲಿಂದ ಉಡುಪಿಗೆ ಹೋಗಲಾಗುವುದು. ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿದ ನಂತರ ಶ್ರೀಕೃಷ್ಣ ದೇವಸ್ಥಾನ ಮತ್ತು ಮಲ್ಪೆ ಬೀಚ್‌ಗೆ ಭೇಟಿ ಇರಲಿದೆ. ಅಂದು ರಾತ್ರಿ ಉಡುಪಿಯಲ್ಲಿ ವಾಸ್ತವ್ಯ.

3ನೇ ದಿನ:ಮೂರನೇ ದಿನ ಉಪಹಾರ ಸೇವಿಸಿದ ನಂತರ ಕೊಲ್ಲೂರು ತೆರಳಲಾಗುವುದು. ಅಲ್ಲಿ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ನಂತರ ಕೊಲ್ಲೂರಿನಿಂದ ಮುರುಡೇಶ್ವರ ಪ್ರದೇಶಕ್ಕೆ ತಲುಪಲಾಗುವುದು. ಅಲ್ಲಿ ಶಿವನ ದೇವಾಲಯಕ್ಕೆ ಭೇಟಿ ಕೊಡಲಾಗುತ್ತದೆ. ಅಲ್ಲಿಂದ ಸಂಜೆ ಗೋಕರ್ಣಕ್ಕೆ ಹೊರಡಲಾಗುವುದು. ದೇವಾಲಯಕ್ಕೆ ಭೇಟಿ ನೀಡಿದ ನಂತರ, ನೀವು ಬೀಚ್​ನಲ್ಲಿ ಆನಂದಿಸಬಹುದು. ಆ ನಂತರ ಮತ್ತೆ ಉಡುಪಿಗೆ ಮರಳಲಾಗುವುದು. ಉಡುಪಿಯಲ್ಲಿ ರಾತ್ರಿ ವಾಸ್ತವ್ಯ ಹೂಡುವುದು.

4ನೇ ದಿನ:ನಾಲ್ಕನೇ ದಿನ ಉಡುಪಿಯಿಂದ ಚೆಕ್ ಔಟ್ ಮಾಡಿ ಹೊರನಾಡಿಗೆ ತೆರಳಲಾಗುವುದು. ಅಲ್ಲಿ ಅನ್ನಪೂರ್ಣ ದೇವಿ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು. ನಂತರ ಅಲ್ಲಿಂದ ಶೃಂಗೇರಿಗೆ ಪ್ರವಾಸ. ಅಲ್ಲಿನ ಶಾರದಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ, ಸಂಜೆ ಮಂಗಳೂರಿಗೆ ಹೋಗಲಾಗುವುದು. ಮಂಗಳೂರಿನಲ್ಲಿ ರಾತ್ರಿ ವಾಸ್ತವ್ಯ.

5ನೇ ದಿನ:ಐದನೇ ದಿನ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ಮತ್ತು ಮಂಗಳೂರಿನ ಮಂಗಳಾದೇವಿ ದೇವಸ್ಥಾನ ಮತ್ತು ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ. ಸಂಜೆ ತಣ್ಣೀರಭಾವಿ ಬೀಚ್ ಮತ್ತು ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಲಾಗುವುದು. ಸಂಜೆ 7 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪಬಹುದು. ರಾತ್ರಿ 8 ಗಂಟೆಗೆ ಹೈದರಾಬಾದ್‌ಗೆ ಮರಳಲಾಗುವುದು. ಇದು ರಾತ್ರಿಯ ಪ್ರಯಾಣವಾಗಿರುತ್ತದೆ.

6ನೇ ದಿನ:ಆರನೇ ದಿನ ರಾತ್ರಿ 11.40ಕ್ಕೆ ಕಾಚಿಗುಡ ತಲುಪುವ ಮೂಲಕ ಪ್ರವಾಸ ಕೊನೆಗೊಳ್ಳುತ್ತದೆ.

ಟಿಕೆಟ್ ದರಗಳು:

ಕಂಪರ್ಟ್​ ವರ್ಗದಲ್ಲಿ (3A) ಒಬ್ಬರಿಗೆ ₹39,140, ​​ಡಬಲ್ ಶೇರಿಂಗ್‌ಗೆ ₹22,710 ಮತ್ತು ಟ್ರಿಪಲ್ ಶೇರಿಂಗ್‌ಗೆ ₹18,180, 5ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಹಾಸಿಗೆಯೊಂದಿಗೆ ₹11,610 ಪಾವತಿಸಬೇಕಾಗುತ್ತದೆ.

ಸ್ಟ್ಯಾಂಡರ್ಡ್ ವರ್ಗದಲ್ಲಿ ಸಿಂಗಲ್ ಶೇರಿಂಗ್​ಗೆ ₹19,690, ಟ್ರಿಪಲ್ ಶೇರಿಂಗ್​ಗೆ ₹15,150, 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಹಾಸಿಗೆಯೊಂದಿಗೆ ₹8,590 ಗ್ರೂಪ್​ ಬುಕ್ಕಿಂಗ್​ ಅವಲಂಬಿಸಿ, ಟಿಕೆಟ್ ದರಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.

ಪ್ಯಾಕೇಜ್​ನಲ್ಲಿ ಏನೆಲ್ಲಾ ಇರುತ್ತದೆ?:

  • ರೈಲು ಟಿಕೆಟ್‌ಗಳು (ಸ್ಟ್ಯಾಂಡರ್ಡ್ ಮತ್ತು 3AC)
  • ಪ್ರಯಾಣದ ಪ್ಯಾಕೇಜ್ ಅವಲಂಬಿಸಿ AC ವಾಹನ
  • 3 ಉಪಹಾರಗಳೊಂದಿಗೆ ಹೋಟೆಲ್ ವಸತಿ
  • ಪ್ರಯಾಣ ವಿಮೆ:
  • ಈ ಟೂರ್ ಪ್ಯಾಕೇಜ್ ನವೆಂಬರ್ 19ರಿಂದ ಮಾರ್ಚ್ 25, 2025ರ ವರೆಗೆ ಲಭ್ಯವಿದೆ.
  • ಈ ಪ್ಯಾಕೇಜ್‌ನ ಸಂಪೂರ್ಣ ವಿವರ ಹಾಗೂ ಬುಕ್ಕಿಂಗ್​ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಿಬಹುದು:

https://www.irctctourism.com/pacakage_description?packageCode=SHR085

ಇವುಗಳನ್ನು ಓದಿ:

ಉತ್ತರಾಖಂಡದ ಸೌಂದರ್ಯ ವೀಕ್ಷಿಸುವ ಅದ್ಭುತ ಅವಕಾಶ: ಕಡಿಮೆ ವೆಚ್ಚದಲ್ಲಿ IRCTC ಭರ್ಜರಿ ಟೂರ್!

ಪ್ರಪಂಚದ ಪ್ರಸಿದ್ಧ ಹಿಂದೂ ದೇವಾಲಯಗಳಿವು: ಯಾವೆಲ್ಲಾ ದೇಶಗಳಲ್ಲಿ ಆಲಯಗಳಿವೆ ನಿಮಗೆ ಗೊತ್ತಾ?

IRCTC ಭರ್ಜರಿ ಟೂರ್ ಪ್ಯಾಕೇಜ್ - ಬಜೆಟ್​ ಕೂಡ ಅಗ್ಗ!

ವೈಜಾಗ್ ಟು ಅಂಡಮಾನ್ IRCTC ವಿಶೇಷ ಪ್ರವಾಸ: ಪೋರ್ಟ್ ಬ್ಲೇರ್, ರೋಸ್ ಐಲ್ಯಾಂಡ್ ಸೇರಿ ಹಲವು ತಾಣಗಳನ್ನು ನೋಡಿ..

ABOUT THE AUTHOR

...view details