ಕರ್ನಾಟಕ

karnataka

ETV Bharat / lifestyle

ಉದ್ದಿನಬೇಳೆ ನೆನೆಸದೆ ಸಾಫ್ಟ್​ ಇಡ್ಲಿ ಮಾಡೋದು ಹೇಗೆ? ಇಡ್ಲಿ ಮಿಕ್ಸ್ ಪೌಡರ್ ಇದ್ದರೆ ಸಾಕು, ಹತ್ತೇ ನಿಮಿಷದಲ್ಲಿ ಸಿದ್ಧ! - INSTANT IDLI MIX RECIPE

Instant Idli Mix Making Process: ಇಡ್ಲಿ ಮಿಕ್ಸ್ ಪೌಡರ್ ರೆಡಿ ಮಾಡಿ ಇಟ್ಟುಕೊಂಡರೆ, ನೀವು ಬಯಸಿದಾಗ ಕಲವೇ ನಿಮಿಷಗಳಲ್ಲಿ ಸಾಫ್ಟ್​ ಇಡ್ಲಿ ಸಿದ್ಧಪಡಿಸಬಹುದಾಗಿದೆ. ಇಡ್ಲಿ ಮಿಕ್ಸ್ ಪೌಡರ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

INSTANT IDLI MIX MAKING PROCESS  INSTANT IDLI RECIPE  HOW TO MAKE INSTANT IDLI MIX  INSTANT IDLI BATTER RECIPE
ಸಾಂದರ್ಭಿಕ ಚಿತ್ರ (ETV Bharat)

By ETV Bharat Lifestyle Team

Published : Jan 8, 2025, 1:39 PM IST

Instant Idli Mix Making Process:ಬಹುತೇಕ ಜನರ ಮನೆಗಳಲ್ಲಿ ಬೆಳಗಿನ ಉಪಹಾರ ಇಡ್ಲಿ ಇರುತ್ತದೆ. ರುಚಿಯ ಜೊತೆಗೆ ತಿನ್ನಲು ಸುಲಭ ಹಾಗೂ ಆರೋಗ್ಯಕ್ಕೆ ಒಳ್ಳೆಯದು ಎಂಬ ಉದ್ದೇಶದಿಂದ ಹೆಚ್ಚಿನ ಜನರು ಇಡ್ಲಿಯನ್ನೇ ಬೆಳಗಿನ ಉಪಾಹಾರವಾಗಿ ಸೇವಿಸುತ್ತಾರೆ. ಸಾಮಾನ್ಯವಾಗಿ ಇಡ್ಲಿಗಳನ್ನು ತಯಾರಿಸಲು, ಉದ್ದಿನಬೇಳೆ ಹಿಂದಿನ ರಾತ್ರಿ ನೆನೆಸಿ, ಮರುದಿನ ಬೆಳಿಗ್ಗೆ ಹಿಟ್ಟನ್ನು ರುಬ್ಬಿಕೊಳ್ಳಬೇಕಾಗುತ್ತದೆ. ಅದರೊಳಗೆ ನೆನೆಸಿದ ರವಾ ಸೇರಿಸಿ ಮತ್ತು ಕೆಲವು ಗಂಟೆಗಳ ಕಾಲ ಹುದುಗಿಸಬೇಕಾಗುತ್ತದೆ.

ಹಿಟ್ಟು ಸರಿಯಾಗಿ ಹುದುಗಿದ ನಂತರ ಇಡ್ಲಿಗಳನ್ನು ಮಾಡಬೇಕಾಗುತ್ತದೆ. ಇದು ಬಹಳ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಆದರೆ, ಉದ್ದಿನಬೇಳೆಯನ್ನು ನೆನೆಸಿ ರುಬ್ಬುವ ಗೊಡವೆಯಿಲ್ಲದೆ ತಮಗೆ ಬೇಕಾದಾಗ ಬಹಳ ಸುಲಭವಾಗಿ ಮೃದುವಾದ ಇಡ್ಲಿಗಳನ್ನು ತಯಾರಿಸಬಹುದು.

ನಿಮಗೆ ಸಮಯ ದೊರೆತಾಗ ಈ 'ಇಡ್ಲಿ ಮಿಕ್ಸ್ ಪೌಡರ್' ತಯಾರು ಮಾಡಿ ಇಡಬೇಕಾಗುತ್ತದೆ. ನಿಮಗೆ ಇಡ್ಲಿ ಸೇವಿಸಬೇಕು ಅನಿಸಿದಾಗ ಕಲವೇ ನಿಮಿಷಗಳಲ್ಲಿ ಸುಲಭವಾಗಿ ಇಡ್ಲಿಗಳನ್ನು ರೆಡಿ ಮಾಡಬಹುದು. ಮನೆಯಲ್ಲಿ ಇಡ್ಲಿ ಮಿಕ್ಸ್ ಪೌಡರ್ ರೆಡಿ ಮಾಡಲು ಬೇಕಾಗುವ ಪದಾರ್ಥಗಳು ಹಾಗೂ ತಯಾರಿಸುವ ಪ್ರಕ್ರಿಯೆ ಹೇಗೆ ಎಂಬುದನ್ನು ನೋಡೋಣ.

ಇಡ್ಲಿ ಮಿಕ್ಸ್ ಪೌಡರ್​ಗೆ ಬೇಕಾಗುವ ಪದಾರ್ಥಗಳು:

  • ಅಕ್ಕಿ ಹಿಟ್ಟು - 4 ಕಪ್
  • ಉದ್ದಿನಬೇಳೆ - 2 ಕಪ್
  • ಅವಲಕ್ಕಿ - 1 ಕಪ್
  • ಉಪ್ಪು - ರುಚಿಗೆ ಬೇಕಾಗುವಷ್ಟು
  • ಬೇಕಿಂಗ್​ ಸೋಡಾ - ಅರ್ಧ ಟೀಸ್ಪೂನ್

ಇಡ್ಲಿ ಮಿಕ್ಸ್ ಪೌಡರ್ ತಯಾರಿಸುವ ವಿಧಾನ:

  • ಮೊದಲು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಉದ್ದಿನಬೇಳೆ ಹಾಕಿ ಚೆನ್ನಾಗಿ ವಾಸನೆ ಬರುವವರೆಗೆ ಹುರಿಯಿರಿ. ನಂತರ ಅದನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ.
  • ಬಳಿಕ ಅದೇ ಪಾತ್ರೆಯಲ್ಲಿ ಅವಲಕ್ಕಿಯನ್ನು ಸ್ವಲ್ಪ ಹುರಿದು ಪಕ್ಕಕ್ಕೆ ತೆಗೆದುಕೊಂಡು ತಣ್ಣಗಾಗಲು ಬಿಡಬೇಕಾಗುತ್ತದೆ.
  • ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿದ ಹಾಗೂ ತಣ್ಣಗಾದ ಉದ್ದಿನಬೇಳೆ, ಅವಲಕ್ಕಿ ಸೇರಿಸಿ ಹಾಗೂ ನುಣ್ಣಗೆ ಪುಡಿಮಾಡಿ ಇಟ್ಟುಕೊಳ್ಳಬೇಕಾಗುತ್ತದೆ. ಅಗತ್ಯವಿದ್ದರೆ, ಸಾಣಿಗೆ ಹಿಡಿದುಕೊಳ್ಳಬೇಕಾಗುತ್ತದೆ. ಮತ್ತೆ ಮಿಶ್ರಣ ಮಾಡಿ.
  • ನಂತರ ಮಿಕ್ಸಿಂಗ್ ಬೌಲ್ ಅನ್ನು ತೆಗೆದುಕೊಂಡು ಅದರಲ್ಲಿ ಉದ್ದಿನಬೇಳೆ ಮತ್ತು ಅವಲಕ್ಕಿ ಹಿಟ್ಟಿಗೆ ಅಕ್ಕಿ ಹಿಟ್ಟು, ಬೇಕಿಂಗ್​ ಸೋಡಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಈ ಮಿಶ್ರಣವನ್ನು ಗಾಳಿಯಾಡದಂತೆ ಪಾತ್ರೆಯಲ್ಲಿ ಹಲವು ದಿನಗಳವರೆಗೆ ಸಂಗ್ರಹಿಸಿ ಇಡಬಹುದು.
  • ನೀವು ಇಡ್ಲಿಗಳನ್ನು ಮಾಡಲು ಬಯಸಿದರೆ, ನಂತರ ಎರಡು ಕಪ್ ಇಡ್ಲಿ ಮಿಕ್ಸ್ ಪೌಡರ್​, ಒಂದು ಕಪ್ ನೀರು ಮತ್ತು ಒಂದು ಕಪ್ ಮೊಸರನ್ನು ಮಿಶ್ರಣದ ಬಟ್ಟಲಿನಲ್ಲಿ ಸೇರಿಸಿ. ಮೃದುವಾದ ಇಡ್ಲಿ ಹಿಟ್ಟು ಮಾಡಲು ನಾಲ್ಕು ಬಾರಿ ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಇಡ್ಲಿ ತಟ್ಟೆಗಳಿಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಅದಕ್ಕೆ ಬೇಕಾದಷ್ಟು ಹಿಟ್ಟು ಹಾಕಿ ಸುಮಾರು 10 ರಿಂದ 15 ನಿಮಿಷಗಳ ಕಾಲ ಇಡ್ಲಿ ತಟ್ಟೆಯಲ್ಲಿ ಹಬೆಯಲ್ಲಿ ಬೇಯಿಸಿ. ಆಗ ತುಂಬಾ ರುಚಿಯಾದ ಇನ್‌ಸ್ಟಂಟ್ ಇಡ್ಲಿಗಳು ನಿಮ್ಮ ಮುಂದೆ ಸವಿಯಲು ಸಿದ್ಧವಾಗುತ್ತವೆ.

ಇವುಗಳನ್ನೂ ಓದಿ:

ABOUT THE AUTHOR

...view details