Tips to Prevent Excess Ice Forming in Freezer:ಫ್ರೀಜರ್‌ನಲ್ಲಿ ಮಂಜುಗಡ್ಡೆ ಉಂಟಾಗುವುದು ಸಹಜ. ಆದರೆ, ಕೆಲವು ರೆಫ್ರಿಜೆರೇಟರ್ಗಳಲ್ಲಿ ಇದು ಅಸಹಜವಾಗಿ ಮಂಜುಗಡ್ಡೆ ರೂಪುಗೊಳ್ಳುತ್ತದೆ. ಆಗಾಗ ತೆಗೆದರೂ ಫ್ರೀಜ್ಡ್ನಲ್ಲಿ ತುಂಬ ಮಂಜುಗಡ್ಡೆ ಕಟ್ಟಿಕೊಳ್ಳುತ್ತದೆ. ಇದು ಸಂಪೂರ್ಣ ಜಾಗವನ್ನು ಆಕ್ರಮಿಸುತ್ತದೆ. ಆದರೆ, ಇದನ್ನು ಹಾಗೆಯೇ ಬಿಟ್ಟರೆ ಅದರಲ್ಲಿ ಸಂಗ್ರಹವಾಗಿರುವ ಆಹಾರ ಪದಾರ್ಥಗಳ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು ಎಂಬುದು ತಜ್ಞರ ಸಲಹೆ. ವಿಶೇಷವಾಗಿ ಪದಾರ್ಥಗಳಿಂದ ತೇವಾಂಶವನ್ನು ತೆಗೆದುಹಾಕುವುದರಿಂದ ಒಣಗುತ್ತದೆ, ಗಟ್ಟಿಯಾಗುತ್ತದೆ ಮತ್ತು ಅವುಗಳು ತಮ್ಮ ಬಣ್ಣ ಮತ್ತು ರುಚಿಯನ್ನು ಕಳೆದುಕೊಳ್ಳುತ್ತವೆ.
ಎಷ್ಟು ತೆಗೆದರೂ ಫ್ರಿಡ್ಜ್ನಲ್ಲಿ ಐಸ್ ಕಟ್ಟಿಕೊಳ್ಳುತ್ತಾ?: ನೀವು ಇದೊಂದನ್ನು ಮಾಡಿ, ಸಮಸ್ಯೆಗೆ ಸಿಗುತ್ತೆ ಪರಿಹಾರ! - HOW TO STOP ICE BUILDUP IN FREEZER
Tips to Prevent Excess Ice Forming in Freezer: ಎಷ್ಟು ತೆಗೆದರೂ ಫ್ರೀಜರ್‌ನಲ್ಲಿ ಬಹಳ ಐಸ್ ಕಟ್ಟಿಕೊಳ್ಳುತ್ತಾ? ಜೊತೆಗೆ ರೆಫ್ರಿಜೆರೇಟರ್ ಸ್ವಚ್ಛವಾಗಿಡುವುದು ಅವಶ್ಯವಾಗಿದೆ. ಈ ಟಿಪ್ಸ್ ಅನುಸರಿಸಿದರೆ ಸಮಸ್ಯೆಗೆ ಪರಿಹಾರ ಲಭಿಸುತ್ತದೆ.
ಸಾಂದರ್ಭಿಕ ಚಿತ್ರ (ETV Bharat)
Published : Oct 23, 2024, 2:05 PM IST
ಇದಲ್ಲದೇ, ಫ್ರಿಡ್ಜ್ನಲ್ಲಿ ಐಸ್ ಸಂಗ್ರಹವಾಗುವುದರಿಂದ ರೆಫ್ರಿಜೆರೇಟರ್‌ನ ಕಾರ್ಯಕ್ಷಮತೆ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ ಮನೆಯಲ್ಲಿಯೂ ಇದೇ ರೀತಿಯ ಸಮಸ್ಯೆ ಇದ್ದರೆ, ಕೆಲವು ಸಣ್ಣ ಸಲಹೆಗಳನ್ನು ಅನುಸರಿಸಿ, ನೀವು ಪ್ರಿಡ್ಜ್ನಲ್ಲಿ ಸ್ವಚ್ಛವಾಗಿರಿಸಿಕೊಳ್ಳಬಹುದು. ಮತ್ತು ರೆಫ್ರಿಜೆರೇಟರ್ ಕಾರ್ಯಕ್ಷಮತೆ ಹೆಚ್ಚಿಸಬಹುದು. ಹಾಗಾದರೆ, ಈ ಕುರಿತ ಸಲಹೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
- ಕೆಲವರು ಆಗಾಗ ಫ್ರಿಡ್ಜ್ ಬಾಗಿಲು ತೆರೆಯುತ್ತಾರೆ. ಇನ್ನು ಕೆಲವರು ಬಹಳ ಹೊತ್ತು ಬಾಗಿಲು ತೆರೆದಿರುತ್ತಾರೆ. ಅಗತ್ಯವಿದ್ದಾಗ ಮಾತ್ರ ಫ್ರಿಡ್ಜ್ ಬಾಗಿಲು ತೆರೆದು ತಕ್ಷಣ ಮುಚ್ಚುವುದು ಉತ್ತಮ ಎನ್ನುತ್ತಾರೆ ತಜ್ಞರು.
- ಅದೇ ರೀತಿ.. ಬಾಗಿಲುಗಳ ಮೇಲಿನ ರಬ್ಬರ್ ಸೀಲಿಂಗ್ ಗ್ಯಾಸ್ಕೆಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ? ಅಥವಾ? ಪರಿಶೀಲಿಸುವುದು ಸಹ ಮುಖ್ಯವಾಗಿದೆ. ಅಗತ್ಯವಿದ್ದರೆ ನಿಮ್ಮ ಫ್ರಿಡ್ಜ್ ಕಂಪನಿಯನ್ನು ಅವಲಂಬಿಸಿ 2-5 ವರ್ಷಗಳ ನಡುವೆ ಇವುಗಳನ್ನು ಬದಲಾಯಿಸುವುದು ಉತ್ತಮ. ಇದರಿಂದ ಪ್ರಿಡ್ಜ್ ಕಾರ್ಯಕ್ಷಮತೆ ಸುಧಾರಿಸುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.
- ಅಲ್ಲದೇ, ನಿಮ್ಮ ರೆಫ್ರಿಜೆರೇಟರ್ ಮಾದರಿಯನ್ನು ಅವಲಂಬಿಸಿ, ಕೈಪಿಡಿಯಲ್ಲಿ ವಿವರಿಸಿದಂತೆ ಫ್ರೀಜರ್ ಥರ್ಮೋಸ್ಟಾಟ್‌ನಲ್ಲಿ ಸೂಕ್ತವಾದ ಸೆಟ್ಟಿಂಗ್‌ಗಳನ್ನು ಮಾಡುವ ಮೂಲಕ ನೀವು ಫ್ರೀಜರ್‌ನಲ್ಲಿ ಐಸ್ ಸಂಗ್ರಹವಾಗುವುದನ್ನು ತಡೆಯಬಹುದು.
- ಕೆಲವು ಫ್ರಿಜ್‌ಗಳು ಸ್ವಯಂ ಡಿಫ್ರಾಸ್ಟ್ ಆಯ್ಕೆ ಹೊಂದಿರುತ್ತವೆ. ಕೆಲವು ಪ್ರಿಡ್ಜ್ನಲ್ಲಿ ಇದು ಇಲ್ಲ. ಅಂತಹ ಸಂದರ್ಭಗಳಲ್ಲಿ, ಕೂಲಿಂಗ್ ಸಿಸ್ಟಮ್ ಲೆಕ್ಕಿಸದೆಯೇ, ನಿಯಮಿತ ಮಧ್ಯಂತರದಲ್ಲಿ ಡಿಫ್ರಾಸ್ಟ್ ಬಟನ್ ಅನ್ನು ಒತ್ತುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಅಲ್ಲಿಯವರೆಗೆ ಸಂಗ್ರಹವಾದ ಮಂಜುಗಡ್ಡೆ ಕರಗುತ್ತದೆ.
- ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿ, ಕೆಲವೊಮ್ಮೆ ಅವುಗಳ ಉಳಿಕೆಗಳು, ದ್ರಾವಣಗಳು, ಐಸ್ ಕ್ರೀಮ್ ಇತ್ಯಾದಿಗಳು ಪ್ರಿಡ್ಜ್ನಲ್ಲಿ ಇರುತ್ತವೆ. ಅಂತಹ ಸಮಯದಲ್ಲಿ ಕಾಲಕಾಲಕ್ಕೆ ಅವಶೇಷಗಳನ್ನು ತೆಗೆದುಹಾಕುವುದು ಉತ್ತಮ.
- ಅಲ್ಲದೆ, ನಿಯಮಿತ ಮಧ್ಯಂತರದಲ್ಲಿ ಬಿಸಿನೀರು ಮತ್ತು ಅಡುಗೆ ಸೋಡಾದ ಮಿಶ್ರಣದಿಂದ ಫ್ರೀಡ್ಜ್ /ಫ್ರೀಜರ್ ಅನ್ನು ಸ್ವಚ್ಛಗೊಳಿಸುವುದರಿಂದ ರೆಫ್ರಿಜೆರೇಟರ್ನಿಂದ ವಾಸನೆ ಬರದಂತೆ ನೋಡಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.
- ಎಲ್ಲಕ್ಕಿಂತ ಹೆಚ್ಚಾಗಿ, ಫ್ರಿಡ್ಜ್ ನಲ್ಲಿ ಅಗತ್ಯ ವಸ್ತುಗಳನ್ನು ಮಾತ್ರ ಇರಿಸಲು ಖಚಿತಪಡಿಸಿಕೊಳ್ಳಿ. ಮೇಲಾಗಿ.. ಜಾಗವಿಲ್ಲದೇ ಎಲ್ಲವನ್ನೂ ಅದರಲ್ಲಿ ಹಾಕಬಾರದು. ಫ್ರೀಜರ್ ಖಾಲಿಯಾದಷ್ಟೂ ಮಂಜುಗಡ್ಡೆ ಸಂಗ್ರಹವಾಗುತ್ತದೆ ಎಂದು ಹೇಳಲಾಗುತ್ತದೆ.
- ಹಾಗೆಯೇ.. ಫ್ರಿಡ್ಜ್ /ಫ್ರೀಜರ್ ಅನ್ನು ಕಿಟಕಿಗಳು ಮತ್ತು ಶಾಖ ಉತ್ಪಾದಿಸುವ ವಸ್ತುಗಳಿಂದ ದೂರವಿಡುವುದು ಉತ್ತಮ. ಏಕೆಂದರೆ.. ಫ್ರೀಜರ್ ನಲ್ಲಿ ಹೆಚ್ಚಿನ ಪ್ರಮಾಣದ ಮಂಜುಗಡ್ಡೆ ಸಂಗ್ರಹವಾಗುವುದನ್ನೂ ಇದು ತಡೆಯುತ್ತದೆ ಎನ್ನಲಾಗಿದೆ.
- ಇಲ್ಲವಾದರೆ.. ರೆಫ್ರಿಜೆರೇಟರ್ ರಿಪೇರಿ ಆಗುವವರೆಗೂ ಅನೇಕರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದಲ್ಲದೇ ವರ್ಷಕ್ಕೊಮ್ಮೆಯಾದರೂ ಫ್ರಿಡ್ಜ್ ಕಾಯಿಲ್ಗಳನ್ನು ಸ್ವಚ್ಛಗೊಳಿಸುವುದು. ಮತ್ತು ವಾಟರ್ ಫಿಲ್ಟರ್ಗಳನ್ನು ಬದಲಾಯಿಸುವುದು ಕಡ್ಡಾಯ ಎನ್ನುತ್ತಾರೆ ತಜ್ಞರು.
- ಇದು ಫ್ರಿಡ್ಜ್ ಅನ್ನು ಹೆಚ್ಚು ಸಮಯ ಇಡಲು ಸಹಾಯ ಮಾಡುತ್ತದೆ ಮತ್ತು ಫ್ರೀಜರ್‌ನಲ್ಲಿ ಐಸ್ ಸಂಗ್ರಹವಾಗುವುದಿಲ್ಲ ಎಂದು ಹೇಳಲಾಗುತ್ತದೆ.