How to Make Churumuri Barfi:ಚುರುಮುರಿಯಿಂದ ವಿವಿಧ ಪ್ರಕಾರದ ಸಿಹಿ ತಿನಿಸುಗಳನ್ನು ಸಿದ್ಧಪಡಿಸಲಾಗುತ್ತದೆ. ಚುರುಮುರಿಯಿಂದ ಯಾವುದೇ ರೆಸಿಪಿಯು ತುಂಬಾ ರುಚಿಯಾಗಿರುತ್ತದೆ. ಖಾರದಿಂದ ಮಾಡಿದ ತಿಂಡಿಗಳ ಜೊತೆಗೆ ಸಿಹಿತಿಂಡಿಗಳನ್ನು ಸವಿಯಲು ಸಖತ್ ಮಜಾ ಬರುತ್ತದೆ. ಈ ಚುರುಮುರಿ ಬರ್ಫಿಯನ್ನು ಕೆಲವೇ ನಿಮಿಷಗಳಲ್ಲಿ ರೆಡಿ ಮಾಡಬಹುದು. ರುಚಿ ಕೂಡ ಅದ್ಭುತವಾಗಿರುತ್ತದೆ. ಇದಲ್ಲದೆ ಈ ಸಿಹಿತಿಂಡಿಗೆ ಹೆಚ್ಚಿನ ಪದಾರ್ಥಗಳ ಅಗತ್ಯವಿಲ್ಲ. ಮತ್ತು ಈ ಬರ್ಫಿಗೆ ಬೇಕಾಗುವ ಪದಾರ್ಥಗಳೇನು? ತಯಾರಿಸುವ ವಿಧಾನ ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ..
ಚುರುಮುರಿ ಬರ್ಫಿಗೆ ಬೇಕಾಗುವ ಪದಾರ್ಥಗಳೇನು?
- ಚುರುಮುರಿ - 2 ಕಪ್
- ಗೋಡಂಬಿ - 15
- ಸಕ್ಕರೆ - ಅರ್ಧ ಕಪ್
- ಏಲಕ್ಕಿ - 4
- ಕುದಿಸಿ ತಣ್ಣಗಾದ ಹಾಲು - ಕಾಲು (1/4) ಕಪ್
- ಪಿಸ್ತಾ - 5
- ಬಾದಾಮಿ - 5