ಕರ್ನಾಟಕ

karnataka

ETV Bharat / lifestyle

ಸೂಪರ್ ಲಂಚ್ ಬಾಕ್ಸ್ ರೆಸಿಪಿ: ಚಿಟಿಕೆ ಹೊಡೆಯುವುದರೊಳಗೆ ಕರ್ನಾಟಕ ಸ್ಪೆಷಲ್ 'ವೈಟ್ ಚಿತ್ರಾನ್ನ' ರೆಡಿ! - KARNATAKA SPECIAL CHITRANNA RECIPE

Karnataka Special White Chitranna: ಬೆಳಿಗ್ಗೆ ಗಡಿಬಿಡಿಯಿಲ್ಲದೆ ಕೆಲವು ನಿಮಿಷಗಳಲ್ಲಿ ಈ ಲಂಚ್ ಬಾಕ್ಸ್ ರೆಸಿಪಿಯನ್ನು ರೆಡಿ ಮಾಡಬಹುದು. ಅದುವೇ ಕರ್ನಾಟಕ ಸ್ಪೆಷಲ್ 'ವೈಟ್ ಚಿತ್ರಾನ್ನ', ಮಕ್ಕಳು ಇದನ್ನು ಮಿಸ್​ ಮಾಡದೇ ತಿನ್ನುತ್ತಾರೆ.

WHITE CHITRANNA KARNATAKA STYLE  LUNCH BOX SPECIAL RECIPE  KARNATAKA SPECIAL CHITRANNA RECIPE  EASY AND HEALTHY LUNCH BOX RECIPE
ಕರ್ನಾಟಕ ಸ್ಪೆಷಲ್ 'ವೈಟ್ ಚಿತ್ರಾನ್ನ' (ETV Bharat)

By ETV Bharat Lifestyle Team

Published : Oct 22, 2024, 5:27 PM IST

Karnataka Special White Chitranna Recipe:ಇಂದಿನ ವೇಗದ ಜೀವನದಲ್ಲಿ ಬೆಳಗ್ಗೆ ಬೇಗ ಮಕ್ಕಳಿಗೆ ಉಪಾಹಾರವನ್ನು ತಯಾರಿಸುವುದು. ಮತ್ತು ಅದೇ ಸಮಯದಲ್ಲಿ ಲಂಚ್ ಬಾಕ್ಸ್ ಅನ್ನು ಸಿದ್ಧಪಡಿಸುವುದು ಅನೇಕರಿಗೆ ಕಷ್ಟಕರವಾದ ಕೆಲಸವಾಗಿದೆ. ಅಂಥವರಿಗಾಗಿಯೇ ಕೇವಲ 5 ರಿಂದ 10 ನಿಮಿಷದಲ್ಲಿ ರೆಡಿಯಾಗುವ ಸೂಪರ್ ಲಂಚ್ ಬಾಕ್ಸ್ ರೆಸಿಪಿಯನ್ನು ನಾವು ನಿಮಗಾಗಿ ತಂದಿದ್ದೇವೆ. ಅದುವೇ.. ಕರ್ನಾಟಕ ಸ್ಪೆಷಲ್ 'ವೈಟ್ ಚಿತ್ರಾನ್ನ'. ಇದು ತುಂಬಾ ಟೇಸ್ಟಿ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹಾಗಾದರೆ.. ಈ ಸೂಪರ್ ಟೇಸ್ಟಿ ಮತ್ತು ಆರೋಗ್ಯಕರ ರೆಸಿಪಿ ಮಾಡಲು ಬೇಕಾಗುವ ಪದಾರ್ಥಗಳು ಯಾವುವು? ತಯಾರಿಸುವುದು ಹೇಗೆ? ಎಂಬುದನ್ನು ತಿಳಿಯೋಣ.

ವೈಟ್ ಚಿತ್ರಾನ್ನ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು:

  • ಅಕ್ಕಿ - 1 ಕಪ್
  • ತುರಿದ ಹಸಿ ಕೊಬ್ಬರಿ - 1 ಕಪ್
  • ಎಣ್ಣೆ - 4 ಟೀಸ್ಪೂನ್
  • ಗೋಡಂಬಿ - 15
  • ಶೇಂಗಾ - 4 ಟೀಸ್ಪೂನ್
  • ಸಾಸಿವೆ - 1 ಟೀಸ್ಪೂನ್
  • ಜೀರಿಗೆ - 1 ಟೀಸ್ಪೂನ್
  • ಉದ್ದಿನ ಬೇಳೆ - 1 ಟೀಸ್ಪೂನ್
  • ಕಡಲೆಕಾಯಿ - 1 ಟೀಸ್ಪೂನ್
  • ಮೆಣಸು - ಅರ್ಧ ಟೀಸ್ಪೂನ್
  • ಒಣ ಮೆಣಸಿನಕಾಯಿ - 2
  • ಹಸಿ ಮೆಣಸಿನಕಾಯಿ - 3
  • ಈರುಳ್ಳಿ ಪೇಸ್ಟ್ - ಅರ್ಧ ಕಪ್
  • ಉಪ್ಪು - ರುಚಿಗೆ ತಕ್ಕಷ್ಟು
  • ಸಬ್ಬಸಿಗೆ ಸೊಪ್ಪು - 3/4 ಕಪ್
  • ನಿಂಬೆ ರಸ - 1 ಟೀ ಸ್ಪೂನ್

ತಯಾರಿಸುವ ವಿಧಾನ:

  • ಇದಕ್ಕಾಗಿ ಮೊದಲು ಅಡುಗೆಗೆ ಬೇಕಾಗುವ ಈರುಳ್ಳಿಯನ್ನು ಅರ್ಧ ಕಪ್ ಗಾತ್ರದಲ್ಲಿ ಸಣ್ಣಗೆ ಕತ್ತರಿಸಿ ಪಕ್ಕಕ್ಕೆ ಇಡಬೇಕು. ಹಾಗೆಯೇ.. ಹಸಿರು ಮೆಣಸಿನಕಾಯಿಯನ್ನು ಉದ್ದವಾಗಿ ಕತ್ತರಿಸಬೇಕು. ಸಬ್ಬಸಿಗೆ ಸೊಪ್ಪುನ್ನು ತೆಳುವಾಗಿ ಕತ್ತರಿಸಿ ರೆಡಿ ಮಾಡಿ ಇಟ್ಟುಕೊಳ್ಳಿ.
  • ಈಗ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಗೋಡಂಬಿ ಮತ್ತು ಶೇಂಗಾ ಹಾಕಿ ಕಂದುಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಅವುಗಳನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ಪಕ್ಕಕ್ಕೆ ಇರಿಸಿ.
  • ಆ ನಂತರ ಅದೇ ಎಣ್ಣೆಯಲ್ಲಿ ಸಾಸಿವೆ ಮತ್ತು ಜೀರಿಗೆಯನ್ನು ಹಾಕಿ ಹುರಿಯಲು ಬಿಡಿ. ಅದರ ನಂತರ ಕಡಲೆಬೇಳೆ, ಉದ್ದಿನ ಬೇಳೆ ಮತ್ತು ಮೆಣಸು ಸೇರಿಸಿ ಮತ್ತು ಸ್ಟೌವ್ ಅನ್ನು ಮಧ್ಯಮ ಉರಿಯಲ್ಲಿಟ್ಟು ಮತ್ತು ಮಿಶ್ರಣವನ್ನು ಕೆಂಪಗೆ ಹುರಿಯಿರಿ. ಹುರಿಯುವಾಗ ಕರಿಮೆಣಸು ಹಾಕಿ ಒಗ್ಗರಣೆ ಕೊಡಿ.
  • ಒಗ್ಗರಣೆಯು ಚೆನ್ನಾಗಿ ಬೆಂದ ನಂತರ.. ಕತ್ತರಿಸಿದ ಮೆಣಸಿಕಾಯಿ ಮತ್ತು ತೆಳುವಾಗಿ ಕಟ್ ಮಾಡಿದ ಈರುಳ್ಳಿಯನ್ನು ಸೇರಿಸಿ.. ಈರುಳ್ಳಿ ಬಣ್ಣ ಬದಲಾಗುವವರೆಗೆ ಮತ್ತು ಮೃದುವಾಗುವವರೆಗೆ ಫ್ರೈ ಮಾಡಿ.
  • ಈ ರೀತಿ ಮಿಶ್ರಣವನ್ನು ಹುರಿದ ನಂತರ ಕತ್ತರಿಸಿದ ಸಬ್ಬಸಿಗೆ ಸೊಪ್ಪನ್ನು ಹಾಕಿ ಎರಡು ನಿಮಿಷ ಫ್ರೈ ಮಾಡಿ. ಆದ್ರೆ ಹೆಚ್ಚು ಹೊತ್ತು ಹುರಿಯಬೇಡಿ.
  • ಅದರ ನಂತರ, ಬೇಯಿಸಿದ ಅಕ್ಕಿ ಮತ್ತು ತುರಿದ ತೆಂಗಿನಕಾಯಿ ಸೇರಿಸಿ ಮತ್ತು ರೈಸ್​ ಬಿಸಿಯಾಗುವವರೆಗೆ ಹೆಚ್ಚಿನ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ.
  • ಅದರ ನಂತರ ನಿಂಬೆ ರಸ ಸೇರಿಸಿ ಮತ್ತು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ. ಅಂತಿಮವಾಗಿ, ಮೊದಲೇ ಹುರಿದ ಗೋಡಂಬಿ ಮತ್ತು ಶೇಂಗಾವನ್ನು ಸೇರಿಸಿ. ಮತ್ತು ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಿ. ಆಗ ತುಂಬಾ ರುಚಿಕರವಾದ ಕರ್ನಾಟಕದ ಸ್ಪೆಷಲ್ ವೈಟ್ ಚಿತ್ರಾನ್ನ ಸಿದ್ಧವಾಗುತ್ತೆ!

ಇದನ್ನೂ ಓದಿ:

ABOUT THE AUTHOR

...view details