How to Make kiriksali Vada:ಕಿರಕಸಾಲಿ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಿರಕಸಾಲಿ ಸೊಪ್ಪಿನಿಂದ ಪಲ್ಯ ಮಾಡಿದರೆ ಜೋಳದ ರೊಟ್ಟಿಯೊಂದಿಗೆ ಭರ್ಜರಿ ಕಾಂಬಿನೇಷನ್ ಆಗಲಿದೆ. ಕೆಲವರು ಈ ಸೊಪ್ಪಿನಿಂದ ಸಾಂಬಾರ್ ಕೂಡ ಮಾಡುತ್ತಾರೆ. ನಾವು ನಿಮಗಾಗಿ ವಿಶೇಷ ರೆಸಿಪಿಯನ್ನು ತಂದಿದ್ದೇವೆ. ಅದುವೇ, ಕಿರಕಸಾಲಿ ಸೊಪ್ಪಿನಿಂದ ಮಸಾಲೆ ವಡೆ ಮಾಡುವ ವಿಧಾನ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇದನ್ನು ತಿನ್ನಲು ಇಷ್ಟಪಡುತ್ತಾರೆ. ಕಿರಕಸಾಲಿ ಮಸಾಲೆ ವಡಾ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳೇನು? ಇದನ್ನು ತಾಯಾರಿಸುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ.
ಕಿರಕಸಾಲಿ ಮಸಾಲೆ ವಡಾ ರೆಸಿಪಿಗೆ ಬೇಕಾಗುವ ಪದಾರ್ಥಗಳು:
- ಕಡಲೆಬೇಳೆ - ಒಂದು ಕಪ್
- ಉದ್ದಿನಬೇಳೆ - ಅರ್ಧ ಕಪ್
- ಕಿರಕಸಾಲಿ ಸೊಪ್ಪು - 1 ಕಟ್
- ಈರುಳ್ಳಿ ಪೇಸ್ಟ್ - ಕಾಲು (1/4) ಕಪ್
- ಬೆಳ್ಳುಳ್ಳಿ ಪೇಸ್ಟ್ - 2 ಟೀಸ್ಪೂನ್
- ಹಸಿಮೆಣಸಿನಕಾಯಿ ಪುಡಿ - 1 ಟೀಸ್ಪೂನ್
- ಶುಂಠಿ ಪುಡಿ - 1 ಟೀಸ್ಪೂನ್
- ಉಪ್ಪು - ರುಚಿಗೆ ತಕ್ಕಷ್ಟು
- ಬಡೆಸೋಂಪು ಅಥವಾ ಜೀರಿಗೆ (ಯಾವುದಾದರು ಒಂದು) - 1 ಟೀಸ್ಪೂನ್
- ಎಣ್ಣೆ - ಡೀಪ್ ಫ್ರೈ ಮಾಡಲು ಬೇಕಾಗುವಷ್ಟು
ಕಿರಕಸಾಲಿ ಮಸಾಲೆ ವಡಾ ತಯಾರಿಸುವ ವಿಧಾನ:
- ಮೊದಲು ಒಂದು ಬಟ್ಟಲಿನಲ್ಲಿ ಕಡಲೆಬೇಳೆ ಹಾಗೂ ಉದ್ದಿನಬೇಳೆಯನ್ನು ಹಾಕಿ ನೀರಿನಿಂದ ಸ್ವಚ್ಛವಾಗಿ ತೊಳೆದು ನಾಲ್ಕು ಗಂಟೆಗಳವರೆಗೆ ಕಾಲ ನೆನೆಸಿಡಿ.
- ಅವು ಚೆನ್ನಾಗಿ ನೆನೆಸಿದ ನಂತರ, ಈ ಬೇಳೆಗಳನ್ನು ಮತ್ತೆ ತೊಳೆದು ಜರಡಿ ಹಿಡಿಯಬೇಕು.
- ಅದಾದ ನಂತರ, ಅವುಗಳನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ಹಾಗೂ ಅಗತ್ಯವಿರುವಷ್ಟು ನೀರು ಸೇರಿಸಿ ಮತ್ತು ಅವುಗಳನ್ನು ತುಂಬಾ ಮೃದುವಾಗಿರದೆ ಒರಟಾಗಿ ರುಬ್ಬಿಕೊಳ್ಳಿ. ಹೆಚ್ಚು ನೀರು ಸೇರಿಸಿ ರುಬ್ಬಿದರೆ ಗರಿ ಗರಿಯಾಗದು. ಏಕೆಂದರೆ ಹಿಟ್ಟಿನಲ್ಲಿ ಹೆಚ್ಚು ನೀರು ಮಿಕ್ಸ್ ಮಾಡಬಾರದು. ಇಲ್ಲದಿದ್ದರೆ ವಡೆಗಳು ಒಡೆಯುತ್ತವೆ. ಹಾಗಾಗಿ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣ ಪಾತ್ರೆಯೊಂದರಲ್ಲಿ ತೆಗೆದುಕೊಳ್ಳಿ.
- ಈ ಮಧ್ಯೆ ಕಿರಕಸಾಲಿ ಸೊಪ್ಪಿನ ಕಾಂಡಗಳನ್ನು ಕತ್ತರಿಸಿ ಚೆನ್ನಾಗಿ ತೊಳೆದು ಇಡಬೇಕು. ಅದನ್ನು ಸ್ವಚ್ಛವಾಗಿ ತೊಳೆದು, ಈಗಾಗಲೇ ರೆಡಿ ಮಾಡಿ ಇಟ್ಟುಕೊಂಡಿರುವ ಬೇಳೆ ಪೇಸ್ಟ್‌ಗೆ ಈ ಸೊಪ್ಪನ್ನು ಸೇರಿಸಿ.
- ಅದರ ನಂತರ ಈರುಳ್ಳಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಪೇಸ್ಟ್, ಶುಂಠಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಸೋಂಪು ಅಥವಾ ಜೀರಿಗೆ ಸೇರಿಸಿ ಹಾಗೂ ಈಗ ಈ ಮಿಶ್ರಣವನ್ನು ಚೆನ್ನಾಗಿ ಕಲಿಸಬೇಕು.
- ಈಗ ಒಲೆಯ ಮೇಲೆ ಬಾಣಲೆಯನ್ನು ಇಡಿ ಹಾಗೂ ಡೀಪ್ ಫ್ರೈ ಮಾಡಲು ಸಾಕಷ್ಟು ಎಣ್ಣೆ ಹಾಕಿ ಬಿಸಿಯಾಗುವವರೆಗೆ ಕಾಯಿರಿ.
- ಎಣ್ಣೆ ಬಿಸಿಯಾದ ನಂತರ ವೀಳ್ಯದೆಲೆ ಅಥವಾ ಇನ್ನಾವುದೇ ಕವರ್ ಮೇಲೆ ಸ್ವಲ್ಪ ಎಣ್ಣೆ ಹಾಕಿ ರೌಂಡ್ ಸೇಫ್ನಲ್ಲಿ ಪೇಸ್ಟ್ ಹಾಕಿ ಒತ್ತಿ, ಮಧ್ಯದಲ್ಲಿ ಸಣ್ಣ ರಂಧ್ರ ಮಾಡಿ. ಈ ರೀತಿಯ ವಡೆಗಳನ್ನು ತಯಾರಿಸಿ.
- ಎಣ್ಣೆ ಕಾದ ನಂತರ ಅದರೊಳಗೆ ವಡೆಗಳ ಎರಡು ಬದಿಯನ್ನು ಸರಿಯಾಗಿ ಅಂದ್ರೆ ಹೊಂಬಣ್ಣ ಬರುವವರೆಗೆ ಒಂದರಿಂದ ಎರಡು ನಿಮಿಷಗಳವರೆಗೆ ಕರಿಯಬೇಕು.
- ಈಗ ಟೇಸ್ಟಿ ಹಾಗೂ ಗರಿಗರಿಯಾದ ವಡೆಗಳು ಸಿದ್ಧವಾಗುತ್ತವೆ. ಒಂದು ಕಪ್ ಚಹಾದೊಂದಿಗೆ ಬಿಸಿಯಾಗಿ ಇರುವಾಗ ಸೇವಿಸಿದರೆ ಸಖತ್ ರುಚಿಯಾಗಿರುತ್ತವೆ.