Antidiabetic Effects of Onion:ಮಧುಮೇಹವು ಪ್ರಪಂಚದಾದ್ಯಂತ ಜನರನ್ನು ಕಾಡುತ್ತಿರು ಬಹು ದೊಡ್ಡ ಖಾಯಿಲೆ ಆಗಿದೆ. 2030 ರ ಹೊತ್ತಿಗೆ ಮಧುಮೇಹವು ವಿಶ್ವದಲ್ಲಿ ಏಳನೇ ದೊಡ್ಡ ಸಾವಿನ ಪ್ರಮಾಣಕ್ಕೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ. ದೇಹದಲ್ಲಿ ಅನಿಯಮಿತ ರಕ್ತದಲ್ಲಿನ ಸಕ್ಕರೆಯ ಏರಿಳಿತವನ್ನು ಇದು ಉಂಟು ಮಾಡಿ, ಚಯಾಪಚಯ ಅಸ್ವಸ್ಥತೆಗೆ ಕಾರಣವಾಗಿದೆ. ಮಧುಮೇಹ ಪ್ರಸ್ತುತ ವಿಶ್ವದಾದ್ಯಂತ 425 ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತಿದೆ. 2017 ರಲ್ಲಿ ಭಾರತವು 72.9 ದಶಲಕ್ಷಕ್ಕೂ ಹೆಚ್ಚು ಮಧುಮೇಹ ಪ್ರಕರಣಗಳನ್ನು ಹೊಂದಿದೆ. ಸರಿಯಾದ ಆರೈಕೆ ಮತ್ತು ಗಮನದ ಕೊರತೆಯಿಂದಾಗಿ ಈ ರೋಗವು ಸ್ಥೂಲಕಾಯತೆ, ಮೂತ್ರಪಿಂಡ ವೈಫಲ್ಯ ಮತ್ತು ಹೃದಯ ಸಂಬಂಧಿ ತೊಡಕುಗಳಿಗೂ ಕಾರಣವಾಗುತ್ತಿದೆ.
ಡಯಾಬಿಟಿಸ್ ರೋಗಿಗಳಿಗೆ ಹೆಚ್ಚಾಗಿ ಫೈಬರ್ ಭರಿತ ಆಹಾರಗಳಲ್ಲಿ ಕಟ್ಟುನಿಟ್ಟಾದ ಆಹಾರವನ್ನು ಅನುಸರಿಸುವಂತೆ ಸೂಚನೆ ನೀಡಲಾಗುತ್ತದೆ. ಮಧುಮೇಹ ನಿಯಂತ್ರಣಕ್ಕೆ ಈರುಳ್ಳಿ ರಾಮಬಾಣವಾಗಿದೆ. ಈ ಅಂಶ ಬಹುತೇಕರಿಗೆ ತಿಳಿದಿಲ್ಲ. ಈರುಳ್ಳಿಯು ಅನೇಕ ಫ್ಲೇವನಾಯ್ಡ್‌ಗಳನ್ನು ಅಂದರೆ ಆಂಟಿಆಕ್ಸಿಡೆಂಟ್‌ಗಳ ಒಂದು ವರ್ಗವನ್ನು ಹೊಂದಿದೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ. ಅದು ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ.
ಈ ಅಧ್ಯಯನವನ್ನು ScienceDirect.com ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) (.gov) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಈ ಅಧ್ಯಯನದಲ್ಲಿ, ವಿಜ್ಞಾನಿಗಳ ತಂಡವು ಟೈಪ್-2 ಮಧುಮೇಹ ಹೊಂದಿರುವ ಇಲಿಗಳಲ್ಲಿ ಪರೀಕ್ಷೆ ಮಾಡಿತು. ಈರುಳ್ಳಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಬಗ್ಗೆ ಮೆಟಾ - ವಿಶ್ಲೇಷಣೆಯನ್ನು ನಡೆಸಿತು. ಎಲ್ಲ ಅಧ್ಯಯನಗಳ ಫಲಿತಾಂಶಗಳು ಮಿಶ್ರವಾದ ಉತ್ತರಗಳನ್ನು ನೀಡಿವೆ. ಅಂತಿಮವಾಗಿ ಈರುಳ್ಳಿಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಸಂಯುಕ್ತಗಳನ್ನು ಹೊಂದಿರಬಹುದು ಎಂಬ ನಿರ್ಣಯಕ್ಕೆ ಬರಲಾಗಿದೆ.
ಇಲಿಗಳ ಮೇಲೆ ನಡೆದ ಸಂಶೋಧನೆ: ಟೈಪ್ -2 ಮಧುಮೇಹ ಹೊಂದಿರುವ ಇಲಿಗಳಿಗೆ ಅವುಗಳ ತೂಕಕ್ಕೆ ಅನುಗುಣವಾಗಿ ಪ್ರತಿದಿನ 200, 400 ಮತ್ತು 600 ಮಿಗ್ರಾಂ ಈರುಳ್ಳಿ ಸಾರವನ್ನು ನೀಡಲಾಗಿತ್ತು . ಅದರ ನಂತರ ಅವರ ರಕ್ತದಲ್ಲಿನ ಸಕ್ಕರೆಯಲ್ಲಿ ತ್ವರಿತ ಇಳಿಕೆ ಕಂಡು ಬಂದಿರುವುದನ್ನು ಪತ್ತೆ ಹಚ್ಚಲಾಯಿತು. 400 ಮತ್ತು 600 ಮಿಗ್ರಾಂ ತೆಗೆದುಕೊಳ್ಳುವ ಇಲಿಗಳ ರಕ್ತದ ಸಕ್ಕರೆಯಲ್ಲಿ 35 ರಿಂದ 50 ಪ್ರತಿಶತದಷ್ಟು ಕಡಿತ ದಾಖಲಿಸಲಾಗಿತ್ತು. ಇದರಿಂದ ಈರುಳ್ಳಿ ಸಾರವನ್ನು ಸೇವಿಸುವುದರಿಂದ ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಈರುಳ್ಳಿ ಸಾರ ಸೇವನೆಯು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಂಶೋಧನೆಗಳು ಮೆಡಿಸಿನಲ್ ಫುಡ್ ಜರ್ನಲ್‌ನಲ್ಲಿ ಈ ಎಲ್ಲ ಅಂಶಗಳು ಪ್ರಕಟವಾಗಿವೆ.
ಮಧುಮೇಹ ನಿರ್ವಹಣೆಗೆ ಈರುಳ್ಳಿ ಏಕೆ ಒಳ್ಳೆಯದು?:
ಸಮೃದ್ಧ ಫೈಬರ್ ಅಂಶ: ಈರುಳ್ಳಿ ವಿಶೇಷವಾಗಿ ಕೆಂಪು ಈರುಳ್ಳಿ, ಫೈಬರ್ ಸಮೃದ್ಧವಾಗಿದೆ. ಸ್ಪ್ರಿಂಗ್ ಈರುಳ್ಳಿ ಕನಿಷ್ಠ ಫೈಬರ್ ಅನ್ನು ಹೊಂದಿರುತ್ತದೆ. ಫೈಬರ್ ವಿಭಜನೆಯಾಗಲು ಮತ್ತು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ, ಇದು ಸಕ್ಕರೆಯನ್ನು ನಿಧಾನವಾಗಿ ರಕ್ತಪ್ರವಾಹಕ್ಕೆ ಬಿಡುಗಡೆ ಮಾಡುತ್ತದೆ. ಇದು ಮಧುಮೇಹಿಗಳಲ್ಲಿ ಸಾಮಾನ್ಯ ಸಮಸ್ಯೆಯಾದ ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಡಿಮೆ ಕಾರ್ಬೋಹೈಡ್ರೇಟ್‌ಗಳು:ಈರುಳ್ಳಿಯಲ್ಲಿ ಕಡಿಮೆ ಕಾರ್ಬೋಹೈಡ್ರೇಟ್‌ಗಳಿವೆ. 100 ಗ್ರಾಂ ಕೆಂಪು ಈರುಳ್ಳಿ ಸುಮಾರು 8 ಗ್ರಾಂ ಕಾರ್ಬೋಹೈಡ್ರೇಟ್ ಹೊಂದಿರುತ್ತದೆ. ಕಾರ್ಬೋಹೈಡ್ರೇಟ್‌ಗಳು ತ್ವರಿತವಾಗಿ ಚಯಾಪಚಯಗೊಳ್ಳುತ್ತವೆ. ಇದು ರಕ್ತಪ್ರವಾಹಕ್ಕೆ ಸಕ್ಕರೆಯ ತ್ವರಿತ ಬಿಡುಗಡೆಗೆ ಕಾರಣವಾಗುತ್ತದೆ. ಮಧುಮೇಹ ರೋಗಿಗಳಿಗೆ ತಮ್ಮ ಆಹಾರದಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಆಹಾರಗಳನ್ನು ಸೇರಿಸಲು ಸಲಹೆ ನೀಡಲಾಗುತ್ತದೆ. ಈರುಳ್ಳಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ಆರೋಗ್ಯಕರ ತೂಕ ನಷ್ಟಕ್ಕೆ ಇದು ಕಾರಣವಾಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಕಡಿಮೆ ಗ್ಲೈಸೆಮಿಕ್: ಗ್ಲೈಸೆಮಿಕ್ ಸೂಚ್ಯಂಕವು ಆಹಾರಗಳು (ಕಾರ್ಬೋಹೈಡ್ರೇಟ್‌ಗಳು) ರಕ್ತದ ಸಕ್ಕರೆ ಮಟ್ಟವನ್ನು ಎಷ್ಟು ನಿಧಾನವಾಗಿ ಅಥವಾ ತ್ವರಿತವಾಗಿ ಪರಿಣಾಮ ಬೀರುತ್ತವೆ ಎಂಬುದರ ಆಧಾರದ ಮೇಲೆ ನೀಡಲಾದ ಮೌಲ್ಯವಾಗಿದೆ. ಹಸಿ ಈರುಳ್ಳಿಯ ಗ್ಲೈಸೆಮಿಕ್ ಸೂಚ್ಯಂಕವು 10 ಆಗಿದೆ. ಇದು ನಿಮ್ಮ ಮಧುಮೇಹದ ಆಹಾರದಲ್ಲಿ ಸೇರಿಸಲು ಸೂಕ್ತವಾದ ಕಡಿಮೆ GI ಆಹಾರವಾಗಿದೆ.