ಹರಾರೆ( ಜಿಂಬಾಬ್ವೆ): ಎಲ್ ನಿನೋ ಪರಿಣಾಮ ದೇಶದಲ್ಲಿ ವಿನಾಶಕಾರಿ ಬರ ಆವರಿಸಿದ್ದು, ಆಹಾರ ಭದ್ರತೆಗೆ ಬೆದರಿಕೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ದೇಶವನ್ನು ಬರ ವಿಪತ್ತು ಎಂದು ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್ ನಂಗಾಗ್ವ ಘೋಷಿಸಿದ್ದಾರೆ. ಎಲ್ ನೀನೋ ಬರದ ಫಲಿತಾಂಶವಾಗಿ ದೇಶದಲ್ಲಿ ಶೇ 80ರಷ್ಟು ಸಾಮಾನ್ಯ ಮಳೆ ಕೊರತೆ ಎದುರಾಗಿದೆ. ಪ್ರಸ್ತುತದ ಕೃಷಿ ಋತುವಿನಲ್ಲಿ ಅಂದರೆ 2023-24 ನಿರೀಕ್ಷೆಗೆ ತಕ್ಕಮಟ್ಟಿಗೆ ಫಸಲು ಕೈ ಸೇರಿಲ್ಲ ಎಂದು ನಂಗಾಗ್ವ ಹರಾರರೆಯ ಸ್ಟೇಟ್ಹೌಸ್ನಲ್ಲಿ ಮಾತನಾಡಿದರು.
ರಾಷ್ಟ್ರೀಯ ವಿಪತ್ತಿನ ಘೋಷಣೆಯೊಂದಿಗೆ ಜಿಂಬಾಬ್ವೆ ಪರಿಸ್ಥಿತಿ ಸುಧಾರಣೆಗೆ ಡಯಾಸ್ಪೊರಾದಲ್ಲಿರುವ ಅಂತಾರಾಷ್ಟ್ರೀಯ ಸಮುದಾಯ, ವಿಶ್ವಸಂಸ್ಥೆಯ ಏಜೆನ್ಸಿಗಳು, ಅಭಿವೃದ್ಧಿ ಮತ್ತು ಮಾನವೀಯ ಪಾಲುದಾರರು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಖಾಸಗಿ ವಲಯ, ಚರ್ಚ್‌ಗಳು ಮತ್ತು ಇತರ ನಂಬಿಕೆ ಆಧಾರಿತ ಸಂಸ್ಥೆಗಳು ಜಿಂಬಾಬ್ವೆಗೆ ಸಹಾಯ ಹಸ್ತ ಚಾಚಬೇಕು ಎಂದು ಕೋರಿಕೊಳ್ಳುತ್ತೇನೆ ಎಂದರು.
ಪ್ರಾಥಮಿಕ ಮೌಲ್ಯಮಾಪನದಲ್ಲಿ ಜಿಂಬಾಬ್ವೆಗೆ 2 ಬಿಲಿಯನ್ಗೂ ಹೆಚ್ಚು ಮಧ್ಯಂತರ ಸಹಾಯ ಬೇಕಿದೆ. ಜಿಂಬಾಬ್ವೆಯು ಒಟ್ಟು 1,728,897 ಹೆಕ್ಟೇರ್‌ಗಳನ್ನು ಜೋಳದ ಬೆಳೆ ಸೇರಿದಂತೆ ಇತರ ಧಾನ್ಯಗಳನ್ನು ಬಿತ್ತನೆ ಮಾಡಲಾಗಿದೆ. ಈ ಫಲಗಳು ಸಮೃದ್ಧವಾಗಿ ಬರಲಿದೆ ಎಂಬ ಖಾತರಿ ಬೇಕಾಗಿದೆ ಎಂದರು.