ETV Bharat / entertainment

ಮಹಾರಾಷ್ಟ್ರ ಚುನಾವಣೆ: ಬಾಲಿವುಡ್​ ಖ್ಯಾತ ಸೆಲೆಬ್ರಿಟಿಗಳಿಂದ ಮತದಾನ - ಯಾರೆಲ್ಲ ಮತ ಚಲಾಯಿಸಿದರು ವಿಡಿಯೋ ನೋಡಿ! - MAHARASHTRA ASSEMBLY ELECTIONS

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಬಾಲಿವುಡ್​ ಸೆಲೆಬ್ರಿಟಿಗಳು ಆಗಮಿಸಿ ಮತದಾನ ಮಾಡಿದರು. ಮಧ್ಯಾಹ್ನ 3 ಗಂಟೆ ವೇಳೆಗೆ ಮಹಾರಾಷ್ಟ್ರದಲ್ಲಿ 45.53 ರಷ್ಟು ಹಾಗೂ ಜಾರ್ಖಂಡ್​ನಲ್ಲಿ61.47ರಷ್ಟು ಮತದಾನವಾಗಿದೆ.

Maharashtra Assembly elections - Celebrities voting
ಮಹಾರಾಷ್ಟ್ರ ಚುನಾವಣೆ: ಸೆಲೆಬ್ರಿಟಿಗಳಿಂದ ಮತದಾನ (Photo: PTI)
author img

By ETV Bharat Entertainment Team

Published : Nov 20, 2024, 4:02 PM IST

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ. 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಪರೇಶ್ ರಾವಲ್, ಹೇಮಾ ಮಾಲಿನಿ, ರಾಕೇಶ್ ರೋಷನ್, ಇಶಾ ಡಿಯೋಲ್, ಅಕ್ಷಯ್​ಕುಮಾರ್​ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಇಂದು ಮತಗಟ್ಟೆ ಬಳಿ ಕಾಣಿಸಿಕೊಂಡಿದ್ದಾರೆ.

ಹಿರಿಯ ನಟರಿಂದ ವೋಟಿಂಗ್: ಹಿರಿಯ ನಟ ಪರೇಶ್ ರಾವಲ್ ಮತ ಚಲಾಯಿಸಲು ಆಗಮಿಸಿದ ವಿಡಿಯೋ ವೈರಲ್​ ಆಗಿದೆ. ನಟ ಕ್ಯಾಶುಯಲ್ ನೇವಿ ಬ್ಲ್ಯೂ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡರು. ಮತದಾನ ಮಾಡಿ ನಂತರ ತಮ್ಮ ಕಾರಿನತ್ತ ನಡೆದರು.

ಮಹಾರಾಷ್ಟ್ರ ಚುನಾವಣೆ: ಸೆಲೆಬ್ರಿಟಿಗಳಿಂದ ಮತದಾನ (Video: PTI)

ಹಕ್ಕು ಚಲಾಯಿಸಿದ ಹೇಮಾಮಾಲಿನಿ: ಜನಪ್ರಿಯ ನಟಿ ಮತ್ತು ರಾಜಕಾರಣಿ ಹೇಮಾ ಮಾಲಿನಿ ಹಾಗೂ ಪುತ್ರಿ ಇಶಾ ಡಿಯೋಲ್ ಜಮ್ನಾಬಾಯಿ ಇಂಟರ್ನ್ಯಾಷನಲ್ ಸ್ಕೂಲ್​ ಬಳಿ ಕಾಣಿಸಿಕೊಂಡರು. ನಟಿ ಟ್ರೆಡಿಶನಲ್ ವೇರ್​ನಲ್ಲಿ ಕಾಣಿಸಿಕೊಂಡರೆ, ಪುತ್ರಿ ಡೆನಿಮ್‌ ಮತ್ತು ವೈಟ್​ ಶರ್ಟ್ ಧರಿಸಿದ್ದರು. ಚಲನಚಿತ್ರ ನಿರ್ಮಾಪಕ - ನಿರ್ದೆಶಕ ರಾಕೇಶ್ ರೋಷನ್ ಕೂಡಾ ಜಮ್ನಾಬಾಯಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಬೆಳಗ್ಗೆಯೇ ಮತದಾನ ಮಾಡಿರುವ ನಟ-ನಿರ್ಮಾಪಕ ಜಾನ್ ಅಬ್ರಹಾಂ ಕ್ಯಾಶುಯಲ್ ಬ್ಲ್ಯಾಕ್​ ಡ್ರೆಸ್​ನಲ್ಲಿ ಕಾಣಿಸಿಕೊಂಡರು. ಮತದಾನ ಮಾಡಿದ ನಂತರ ನಟ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು.

ತಾರಾ ದಂಪತಿ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಮತದಾನ: ಮುಂಬೈನ ಜುಹು ಪ್ರದೇಶದ ಜಮ್ನಾಬಾಯಿ ನರ್ಸೀ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಸ್ಥಾಪಿಸಲಾಗಿರುವ ಮತದಾನ ಕೇಂದ್ರದಲ್ಲಿ ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಮತದಾನ ಮಾಡಿದರು. ಇನ್ನೂ ಜನಪ್ರಿಯ ತಾರಾ ದಂಪತಿ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಲಾತೂರ್‌ನ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್ ವೋಟಿಂಗ್​: "ಮತ ಚಲಾವಣೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಉತ್ತಮ ಸೌಕರ್ಯವನ್ನೂ ಒದಗಿಸಲಾಗಿದೆ. ಶುಚಿತ್ವ ಕಾಪಾಡಲಾಗಿದೆ. ಪ್ರತಿಯೊಬ್ಬರೂ ನಿಮ್ಮ ಮತ ಚಲಾಯಿಸಿ" ಎಂದು ಮತದಾನ ಮಾಡಿದ ಬಳಿಕ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಮನವಿ ಮಾಡಿದರು.

ಅಕ್ಷಯ್ ಕುಮಾರ್ ನಂತರ ಪತ್ನಿ-ನಟಿ ಟ್ವಿಂಕಲ್ ಖನ್ನಾ ಮಧ್ಯಾಹ್ನ ಮುಂಬೈನ ಮತಗಟ್ಟೆಗೆ ತಲುಪಿದರು. ಮಾರ್ಡನ್​​ ಔಟ್​ಫಿಟ್​ನಲ್ಲಿ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ಮತ ಚಲಾಯಿಸಿದ ಬಳಿಕ ಮಾತನಾಡಿದ ನಟ ಸೋನ್ ಸೂದ್, ಮತದಾನ ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.

ಗಾಯಕ ರಾಹುಲ್ ವೈದ್ಯ ಮತ್ತು ಪತ್ನಿ, ನಟಿ ದಿಶಾ ಪರ್ಮಾರ್ ಮತದಾನ ಮಾಡಿದರು. ಬಳಿಕ ಮಾತನಾಡಿದ ದಂಪತಿ, 'ಮತದಾನ ಪ್ರತಿಯೊಬ್ಬರ ಜವಾಬ್ದಾರಿ. ಇದು ರಜಾದಿನವಲ್ಲ. ಐದು ವರ್ಷಗಳಿಗೊಮ್ಮೆ ಈ ದಿನ ಬರುತ್ತದೆ. ಹಾಗಾಗಿ ದಯವಿಟ್ಟು ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ತಿಳಿಸಿದರು.

ಇದನ್ನೂ ಓದಿ: 'ಪುಷ್ಪ 2'ನಲ್ಲಿ ಅರ್ಧ ತಲೆಬೋಳಿಸಿದ ಈ ವ್ಯಕ್ತಿ ಯಾರು? ಸಂಚಲನ ಸೃಷ್ಟಿಸಿದ ಕನ್ನಡ ನಟ ತಾರಕ್ ಪೊನ್ನಪ್ಪ

ಹೇಳಿದ್ದಿಷ್ಟು

ದಯವಿಟ್ಟು ಬಂದು ಮತ ಚಲಾಯಿಸಿ ಎಂದ ರಣಬೀರ್​ ಕಪೂರ್​; ಮತ ಚಲಾಯಿಸಿ ಮಾತನಾಡಿದ ರಣ್​ಬೀರ್​ ಕಪೂರ್, ಮತದಾನ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ದಯವಿಟ್ಟು ಬಂದು ಮತ ಚಲಾಯಿಸಿ ಎಂದು ಕೇಳಿಕೊಂಡರು.

ಇದನ್ನೂ ಓದಿ: ''ಬಳೆ ತೊಡ್ಕೋ'': ಬಿಗ್​ ಬಾಸ್​ನಲ್ಲಿ ಮತ್ತೆ ಬಳೆ ವಿಚಾರ; ಶೋ ಬಿಡುವೆನೆಂದ ಗೋಲ್ಡ್​ ಸುರೇಶ್​​

ಅರ್ಜುನ್ ಕಪೂರ್, ಕರೀನಾ ಕಪೂರ್​, ಸೋಹೈಲ್ ಖಾನ್, ರೋಹಿತ್​ ಶೆಟ್ಟಿ, ಇಶಾ ಕೊಪ್ಪಿಕರ್, ಏಕ್ತಾ ಕಪೂರ್, ಪ್ರೇಮ್ ಚೋಪ್ರಾ, ಗಾಯಕ ಕೈಲಾಶ್ ಖೇರ್, ತುಷಾರ್ ಕಪೂರ್ ಸೇರಿದಂತೆ ಹಲವು ತಾರೆಯರು ಮತಗಟ್ಟೆಯಲ್ಲಿ ಕಾಣಿಸಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.