ದುಬೈ (ಯುನೈಟೆಡ್ ಅರಬ್ ಎಮಿರೇಟ್ಸ್):ಇರಾನ್ ಬೆಂಬಲಿತ ಹೌತಿ ಬಂಡುಕೋರರು ಎರಡು ಕ್ರೂಸ್ ಕ್ಷಿಪಣಿಗಳ ಮೂಲಕ ಯೆಮನ್‌ನ ಗಲ್ಫ್ ಆಫ್ ಅಡೆನ್‌ನಲ್ಲಿ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ. ಬೆಂಕಿ ತಗುಲಿದ ಪರಿಣಾಮ ಹಡಗಿನಲ್ಲಿದ್ದ ನಾಗರಿಕರು ಹಾಗೂ ನಾವಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಗುರುವಾರ ಅಮೆರಿಕ ಹೇಳಿದೆ.
ವಾಣಿಜ್ಯ ಹಡಗು M/V ವೆರ್ಬೆನಾ ಇನ್ನೂ ಹೊತ್ತಿ ಉರಿಯುತ್ತಿದೆ. ಹಡುಗಿನಲ್ಲಿದ್ದರ ರಕ್ಷಣೆಗಾಗಿ, ವೈದ್ಯಕೀಯ ಚಿಕಿತ್ಸೆ ನೀಡಿಲು ಅಮೆರಿಕ ಹೆಲಿಕಾಪ್ಟರ್ ಸ್ಥಳಕ್ಕೆ ಕಳಹಿಸಿಕೊಡಲಾಗಿದೆ. ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಖಾಸಗಿ ಭದ್ರತಾ ಸಂಸ್ಥೆ ಅಂಬ್ರೆ ಹೇಳಿದ್ದೇನು?:''ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆಯೆ ಹೌತಿ ಬಂಡುಕೋರರು ಬ್ರಿಟಿಷ್ ಮಿಲಿಟರಿಯ ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ ಸೆಂಟರ್ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ. ವ್ಯಾಪಾರಿ ನೌಕೆಯ ಮೇಲೆ ಕ್ಷಿಪಣಿಯಿಂದ ದಾಳಿ ಮಾಡಲಾಗಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಖಾಸಗಿ ಭದ್ರತಾ ಸಂಸ್ಥೆ ಅಂಬ್ರೆ ತಿಳಿಸಿದೆ.
ಬುಧವಾರ ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗಿನ ಮೇಲೆ ಹೌತಿ ಬಂಡುಕೋರರು ದೋಣಿಯ ಮೂಲಕ ಬಾಂಬ್ ದಾಳಿ ನಡೆಸಿದ್ದರು. ನಂತರ ಈ ಕ್ಷಿಪಣಿಯಿಂದ ಹದಗಿನ ಮೇಲೆ ದಾಳಿ ನಡೆಸಲಾಗಿದೆ.
ಕಿಡಿಕಾರಿದ ಅಮೆರಿಕ:ಸುಮಾರು ಒಂದು ದಶಕದ ಹಿಂದೆ ಯೆಮೆನ್‌ನ ರಾಜಧಾನಿಯನ್ನು ವಶಪಡಿಸಿಕೊಂಡ ಹೌತಿಗಳು ಮತ್ತು ಸ್ವಲ್ಪ ಸಮಯದ ನಂತರ ಸೌದಿ ನೇತೃತ್ವದ ಒಕ್ಕೂಟದ ವಿರುದ್ಧ ಹೋರಾಡುತ್ತಿದೆ. ಕೆಂಪು ಸಮುದ್ರದ ಕಾರಿಡಾರ್‌ನಾದ್ಯಂತ ಸಂಚರಿಸುವ ಹಡಗುಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ದಾಳಿಗಳು ಯುದ್ಧವನ್ನು ನಿಲ್ಲಿಸುವ ಮತ್ತು ಪ್ಯಾಲೇಸ್ಟಿನಿಯನ್ನರನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಆದರೂ ದಾಳಿಗಳು ಯುದ್ಧಕ್ಕೆ ಯಾವುದೇ ಸಂಬಂಧವಿಲ್ಲದ ಹಡಗುಗಳನ್ನು ಗುರಿಯಾಗಿರಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅಮೆರಿಕ ಕಿಡಿಕಾರಿದೆ.
ಗಾಜಾ ಆರೋಗ್ಯ ಅಧಿಕಾರಿಗಳ ಪ್ರಕಾರ, ಗಾಜಾದಲ್ಲಿನ ಯುದ್ಧವು 36,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯಾದವರನ್ನು ಬಲಿ ಪಡೆದಿದೆ. ವೆಸ್ಟ್ ಬ್ಯಾಂಕ್‌ನಲ್ಲಿ ಇಸ್ರೇಲ್ ಕಾರ್ಯಾಚರಣೆಗಳಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್ ನೇತೃತ್ವದ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ಮಾಡಿ ಸುಮಾರು 1,200 ಜನರನ್ನು ಹತ್ಯೆ ಮಾಡಿದ್ದರು, ಸುಮಾರು 250 ಜನರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡ ನಂತರ ಯುದ್ಧ ಪ್ರಾರಂಭವಾಗಿತ್ತು.
''ಹೌತಿ ಬಂಡುಕೋರರು ವಿವಿಧ ಹಡಗುಗಳ ಮೇಲೆ 50ಕ್ಕೂ ಹೆಚ್ಚು ದಾಳಿಗಳನ್ನು ಮಾಡಿದ್ದಾರೆ. ಮೂವರು ನಾವಿಕರನ್ನು ಹತ್ಯೆ ಮಾಡಿದ್ದಾರೆ. ಒಂದು ಹಡಗನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಇನ್ನೊಂದು ಹಡಗನ್ನು ಮುಳುಗಿಸಿದ್ದಾರೆ. ಯುಎಸ್ ನೇತೃತ್ವದ ವೈಮಾನಿಕ ದಾಳಿಯ ಕಾರ್ಯಾಚರಣೆಯು ಜನವರಿಯಿಂದ ಹೌತಿಗಳನ್ನು ಗುರಿಯಾಗಿಸಿಕೊಂಡಿದೆ'' ಎಂದು ಯುಎಸ್ ಮ್ಯಾರಿಟೈಮ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ವಾಷಿಂಗ್ಟನ್ ಮೂಲದ ನ್ಯಾಷನಲ್ ಡೆಮಾಕ್ರಟಿಕ್ ಇನ್ಸ್ಟಿಟ್ಯೂಟ್, ''ತನ್ನ ಮೂವರು ಸಿಬ್ಬಂದಿಯನ್ನು ಈ ತಿಂಗಳ ಆರಂಭದಲ್ಲಿ ಹೌತಿ ಬಂಡುಕೋರರು ಬಂಧಿಸಿದ್ದಾರೆ'' ಎಂದು ಹೇಳಿದೆ.
ಇದನ್ನೂ ಓದಿ:ಜಿ7 ಶೃಂಗಸಭೆ: ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಾಗಿ ಇಟಲಿಗೆ ಆಗಮಿಸಿದ ಪ್ರಧಾನಿ ಮೋದಿ - G7 SUMMIT MODI IN ITALY