ಜೆರುಸಲೇಂ:ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಹಮಾಸ್ ಮತ್ತು ಇಸ್ರೇಲ್ ನಾಯಕರಿಗೆ ಬಂಧನ ವಾರಂಟ್ ಹೊರಡಿಸುವಂತೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ (ಐಸಿಸಿ) ಮುಖ್ಯ ಪ್ರಾಸಿಕ್ಯೂಟರ್ ಸೋಮವಾರ ಮನವಿ ಮಾಡಿದ್ದಾರೆ.
ನೆತನ್ಯಾಹು ಮತ್ತು ಇಸ್ರೇಲಿ ರಕ್ಷಣಾ ಸಚಿವ ಯೆವಾ ಗ್ಯಾಲಂಟ್ ವಿರುದ್ಧ ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್ ಅವರು, ಗಾಜಾ ಪಟ್ಟಿಯಲ್ಲಿ ಯುದ್ಧ ಅಪರಾಧಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು. ಇವರಿಂದ ಅನೇಕ ಅಮಾಯಕ ನಾಗರಿಕರು ಹಸಿವಿನಿಂದ ನರಳುತ್ತಿದ್ದಾರೆ. ಈ ಯುದ್ಧದಲ್ಲಿ ಅನೇಕ ಮಹಿಳೆಯರು ಮತ್ತು ಮಕ್ಕಳು ಪ್ರಾಣ ಕಳೆದುಕೊಂಡರು. ಮತ್ತೊಂದೆಡೆ, ಅಕ್ಟೋಬರ್ 7 ರಂದು ಇಸ್ರೇಲ್ ನಾಗರಿಕರ ವಿರುದ್ಧ ಮಾಡಿದ ಅಪರಾಧಗಳಿಗಾಗಿ ಹಮಾಸ್ ನಾಯಕರಾದ ಯಾಹ್ಯಾ ಸಿನ್ವಾರ್, ಮೊಹಮ್ಮದ್ ಡೀಫ್ ಮತ್ತು ಇಸ್ಮಾಯಿಲ್ ಹನಿಯಾ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ಕರೀಮ್ ಖಾನ್ ಕೋರಿದ್ದಾರೆ.
ಯುದ್ಧದಲ್ಲಿ ಅನೇಕ ಕುಟುಂಬಗಳಿಗೆ ತೀವ್ರ ಹಾನಿಯಾಗಿದೆ. ಜೊತೆಗೆ ಅನೇಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಮತ್ತೊಂದೆಡೆ, 2014ರ ಗಾಜಾ ಯುದ್ಧದ ಪ್ರಕರಣದಲ್ಲಿ ಐಸಿಸಿ ಇಸ್ರೇಲ್ನ ಮಿಲಿಟರಿ ಅಧಿಕಾರಿಗಳು ಮತ್ತು ನಾಯಕರ ವಿರುದ್ಧ ಬಂಧನ ವಾರಂಟ್‌ಗಳನ್ನು ಹೊರಡಿಸುವ ಸಾಧ್ಯತೆಯಿದೆ. ಈ ವಾರಂಟ್ಗಳು ಜಾರಿಯಾದರೆ ಐಸಿಸಿ ಪಾಲುದಾರ ರಾಷ್ಟ್ರಗಳಲ್ಲಿ ದೇಶದ ಅಧಿಕಾರಿಗಳು ಬಂಧನಕ್ಕೊಳಗಾಗುವ ಅಪಾಯವಿದೆ.