ವಾಷಿಂಗ್ಟನ್ :ಮುಂಬೈ ದಾಳಿಯ ರೂವಾರಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾಗಿರುವ ರಾಣಾನ ಹಸ್ತಾಂತರಕ್ಕೆ ಭಾರತವು ಮನವಿ ಮಾಡಿತ್ತು. 2008ರ ಮುಂಬೈ ದಾಳಿಯ ಪ್ರಕರಣದಲ್ಲಿ ವಾಂಟೆಡ್ ಅಪರಾಧಿ ಈತನಾಗಿದ್ದಾನೆ. ಭಾರತಕ್ಕೆ ಹಸ್ತಾಂತರ ಕುರಿತು ನಡೆದ ಕಡೆಯ ಕಾನೂನು ಸಾಧ್ಯತೆ ಹೋರಾಟ ಕೂಡ ಇದಾಗಿತ್ತು. ಈ ಮೊದಲು ಸ್ಯಾನ್ ಫ್ರಾನ್ಸಿಸ್ಕೊದಲ್ಲಿನ ನಾರ್ಥ್ ಸರ್ಕ್ಯೂಟ್ಗೆ ಕೂಡ ಅಮೆರಿಕ ಕೋರ್ಟ್ ಮನವಿ ಸೇರಿದಂತೆ ಅನೇಕ ಫೆಡರಲ್ ಕೋರ್ಟ್ನಲ್ಲಿ ಈ ಕುರಿತು ಹೋರಾಟ ನಡೆಸಲಾಗಿತ್ತು.
ಅಮೆರಿಕ ಸುಪ್ರೀಂ ಕೋರ್ಟ್ಗೆ ಸರ್ಟಿಯೊರಾರಿ ರಿಟ್‌ಗಾಗಿ ರಾಣಾ ನವೆಂಬರ್ 13ರಂದು ಅರ್ಜಿ ಸಲ್ಲಿಸಿದ್ದ. ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕರಿಸುವ ಮುನ್ನಾದಿನ ಜನವರಿ 21ರಂದು ಇದನ್ನು ಸುಪ್ರೀಂ ಕೋರ್ಟ್ ಅರ್ಜಿ ನಿರಾಕರಿಸಿತ್ತು.
64 ವರ್ಷದ ರಾಣಾ ಸದ್ಯ ಲಾಸ್ ಏಂಜಲೀಸ್ನ ಮೆಟ್ರೋಪಾಲಿಟನ್ ಡಿಟೆನ್ಷನ್ ಸೆಂಟರ್ನಲ್ಲಿ ಬಂಧಿಯಾಗಿದ್ದಾನೆ.