ಡೆಟ್ರಾಯಿಟ್(ಅಮೆರಿಕ):ಮಿಚಿಗನ್ ರಾಜ್ಯದ ಅತಿದೊಡ್ಡ ನಗರ ಡೆಟ್ರಾಯಿಟ್‌ನಲ್ಲಿ ಭಾನುವಾರ ನಸುಕಿನ ಜಾವ 2.30ರ ಸುಮಾರಿಗೆ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿ, 19 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಡೆಟ್ರಾಯಿಟ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಮಿಚಿಗನ್ ಸ್ಟೇಟ್ ಪೋಲೀಸ್ ಇಲಾಖೆ 'ಎಕ್ಸ್' ಪೋಸ್ಟ್ ಮೂಲಕ ತಿಳಿಸಿದೆ.
ಈ ದಾಳಿಯಲ್ಲಿ ಬಾಲಕಿ ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಗಾಯಗೊಂಡವರ ಪೈಕಿ 17 ವರ್ಷದ ಬಾಲಕಿಯ ಪರಿಸ್ಥಿತಿ ಗಂಭೀರವಾಗಿದೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ಕಾನೂನು ಜಾರಿ ಮತ್ತು ಸ್ವತಂತ್ರ ಸಂಶೋಧಕರು ನಡೆಸಿದ ಅಧ್ಯಯನಗಳಂತೆ, ಬೇಸಿಗೆ ತಿಂಗಳುಗಳಲ್ಲಿ ಅದರಲ್ಲೂ ವಿಶೇಷವಾಗಿ ಜುಲೈ 1ರಿಂದ ಜುಲೈ 7ರವರೆಗೆ ದೇಶದಲ್ಲಿ ಗುಂಡಿನ ದಾಳಿಗಳು ನಿರಂತರವಾಗಿ ಹೆಚ್ಚಾಗಿ ನಡೆದಿವೆ. ಇವುಗಳಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ಮತ್ತು ವೈಯಕ್ತಿಕ ಘಟನೆಗಳೂ ಸೇರಿವೆ.
ಇದನ್ನೂ ಓದಿ:ಗಾಜಾ ಮೇಲೆ ದಾಳಿ ಮುಂದುವರೆಸಿದ ಇಸ್ರೇಲ್: 40 ಪ್ಯಾಲೆಸ್ಟೈನಿಯರ ಸಾವು, 224 ಜನರಿಗೆ ಗಾಯ - Israeli Attacks In Gaza