ಸ್ಟಾಕ್ ಹೋಮ್:ವಿವಿಧ ರಾಷ್ಟ್ರಗಳ ನಡುವಿನ ಸಮೃದ್ಧಿಯಲ್ಲಿನ ವ್ಯತ್ಯಾಸಗಳ ಸಂಶೋಧನೆಗಾಗಿ ಡಾರಾನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಮತ್ತು ಜೇಮ್ಸ್ ಎ.ರಾಬಿನ್ಸನ್ ಅವರಿಗೆ ಅರ್ಥಶಾಸ್ತ್ರದ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗಿದೆ. ಸ್ಟಾಕ್ ಹೋಮ್ನಲ್ಲಿ ಸೋಮವಾರ ಈ ಘೋಷಣೆ ಮಾಡಲಾಗಿದೆ. ಈ ಮೂವರು ಅರ್ಥಶಾಸ್ತ್ರಜ್ಞರು ದೇಶವೊಂದರ ಸಮೃದ್ಧಿಯಲ್ಲಿ ಸಾಮಾಜಿಕ ಸಂಸ್ಥೆಗಳ ಮಹತ್ವವನ್ನು ತೋರಿಸಿದ್ದಾರೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ಸ್ನ ನೊಬೆಲ್ ಸಮಿತಿ ತಿಳಿಸಿದೆ.
ಕಾನೂನು ಸುವ್ಯವಸ್ಥೆ ದುರ್ಬಲವಾಗಿರುವ ಸಮಾಜಗಳು ಮತ್ತು ಜನಸಂಖ್ಯೆಯನ್ನು ಶೋಷಿಸುವ ಸಂಸ್ಥೆಗಳು ಉತ್ತಮವಾಗಿ ಬೆಳವಣಿಗೆ ಹೊಂದುವುದಿಲ್ಲ ಅಥವಾ ಯಾವುದೇ ಉತ್ತಮ ಬದಲಾವಣೆಯನ್ನು ತರುವುದಿಲ್ಲ. ಇದು ಹೀಗೇಕೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಶಸ್ತಿ ವಿಜೇತರ ಸಂಶೋಧನೆಗಳು ನಮಗೆ ಸಹಾಯ ಮಾಡುತ್ತವೆ ಎಂದು ಅದು ಹೇಳಿದೆ.
ಅಸೆಮೊಗ್ಲು ಮತ್ತು ಜಾನ್ಸನ್ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದು, ರಾಬಿನ್ಸನ್ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿದ್ದಾರೆ.