ಕರ್ನಾಟಕ

karnataka

ETV Bharat / international

ಶ್ರೀಲಂಕಾದಲ್ಲಿ ಐಸಿಸ್ ಶಂಕಿತ ಹ್ಯಾಂಡ್ಲರ್‌ ಅರೆಸ್ಟ್ - SUSPECTED ISIS HANDLER - SUSPECTED ISIS HANDLER

ನಿಷೇಧಿತ ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಸಂಘಟನೆಯೊಂದಿಗೆ ಶಂಕಿತ ಹ್ಯಾಂಡ್ಲರ್‌ಗಳಾಗಿ ಕೆಲಸ ಮಾಡುತ್ತಿದ್ದ ಪ್ರಜೆಗಳನ್ನು ಇತ್ತೀಚಿಗೆ ಭಾರತದ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

Sri Lanka police  handler  ISIS suspects
ಐಸಿಸ್ ಶಂಕಿತರ ಹ್ಯಾಂಡ್ಲರ್‌ಗಳನ್ನು ಬಂಧಿಸಿದ ಶ್ರೀಲಂಕಾ ಪೊಲೀಸರು (ಕೃಪೆ: ETV Bharat (ಸಂಗ್ರಹ ಚಿತ್ರ))

By ETV Bharat Karnataka Team

Published : Jun 1, 2024, 11:23 AM IST

ಕೊಲಂಬೊ (ಶ್ರೀಲಂಕಾ):ಗುಜರಾತ್‌ನ ಅಹಮದಾಬಾದ್‌ನಲ್ಲಿ ಬಂಧನಕ್ಕೊಳಗಾಗಿದ್ದ ಶ್ರೀಲಂಕಾದ ಐಸಿಸ್ ಶಂಕಿತ ವಾಂಟೆಡ್ ಹ್ಯಾಂಡ್ಲರ್‌ನನ್ನು ಲಂಕಾ ಪೊಲೀಸ್ ಗುಪ್ತಚರ ದಳ ಶುಕ್ರವಾರ ಬಂಧಿಸಿದೆ. 46 ವರ್ಷದ ಶಂಕಿತ ಓಸ್ಮಾನ್ ಪುಷ್ಪರಾಜ ಗೆರಾರ್ಡ್ಅನ್ನು ಕೊಲಂಬೊದಲ್ಲಿ ಅಪರಾಧ ತನಿಖಾ ಇಲಾಖೆ ಬಂಧಿಸಿದೆ ಎಂದು ಶ್ರೀಲಂಕಾ ಪೊಲೀಸ್ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ.

ನಿಷೇಧಿತ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ನಾಲ್ವರು ಶಂಕಿತರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದ ನಂತರ, ಶ್ರೀಲಂಕಾ ಪೊಲೀಸ್‌ನ ಪ್ರಮುಖ ಗುಪ್ತಚರ ಶಾಖೆಗಳಾದ ಸಿಐಡಿ, ಭಯೋತ್ಪಾದಕ ತನಿಖಾ ವಿಭಾಗ (TID) ಮತ್ತು ಇತರ ಮಿಲಿಟರಿ ಗುಪ್ತಚರ ಸೇವೆಗಳು ಭಾಗವಹಿಸುವಿಕೆಯೊಂದಿಗೆ ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಿತ್ತು.

ಓಸ್ಮಾನ್ ಅಥವಾ ನಾಲ್ವರು ಐಸಿಸ್ ಶಂಕಿತರ ಸುಳಿವು ನೀಡಿದವರಿಗೆ ಶ್ರೀಲಂಕಾ ಪೊಲೀಸರು ಎರಡು ನಗದು ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದರು. ಇದುವರೆಗೆ ಭಾರತದಲ್ಲಿ ಬಂಧಿತ ನಾಲ್ವರೊಂದಿಗೆ ಸಂಪರ್ಕ ಹೊಂದಿದ್ದ ಹ್ಯಾಂಡ್ಲರ್ ಸೇರಿದಂತೆ ಆರು ಶಂಕಿತರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.

ISIS ಲಾಂಛನದೊಂದಿಗೆ ಧ್ವಜವನ್ನು ಸಿದ್ಧಪಡಿಸಿದ ಶಂಕಿತ ವ್ಯಕ್ತಿ ಭಾರತಕ್ಕೆ ಹೋಗಲು ಯೋಜಿಸಿದ್ದ. ಆದರೆ ನಂತರ ನಿರಾಕರಿಸಿದ. ಇತರ ಇಬ್ಬರನ್ನು ತಮ್ಮ ಗ್ರೂಪ್​ಗೆ ಸೇರ್ಪಡೆಗೊಳ್ಳುವಂತೆ ಮಾಡಿದ.

ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕದ ಆರೋಪದ ಮೇಲೆ ಗುಜರಾತ್‌ನಲ್ಲಿ ಅಧಿಕಾರಿಗಳು ಕಳೆದ ವಾರ ಭಾರತದಲ್ಲಿ ಬಂಧಿಸಿರುವ ತನ್ನ ನಾಲ್ವರು ನಾಗರಿಕರು "ಧಾರ್ಮಿಕ ಉಗ್ರಗಾಮಿಗಳು" ಎಂಬ ಯಾವುದೇ ದಾಖಲೆಯನ್ನು ಹೊಂದಿಲ್ಲ. ಆದರೆ ಅವರು ಮಾದಕ ವ್ಯಸನಿಗಳಾಗಿದ್ದಾರೆ ಎಂದು ಶ್ರೀಲಂಕಾ ಸರ್ಕಾರ ಗುರುವಾರ ಹೇಳಿತ್ತು.

ಪೂರ್ವ ನಗರವಾದ ಅಂಪಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಕ್ಷಣಾ ಕಾರ್ಯದರ್ಶಿ ಕಮಲ್ ಗುಣರತ್ನೆ, ಭಾರತದಲ್ಲಿ ಬಂಧಿತರ ಹಿನ್ನೆಲೆಯನ್ನು ಪರಿಶೀಲಿಸುವಂತೆ ಶ್ರೀಲಂಕಾ ಅಧಿಕಾರಿಗಳನ್ನು ಕೇಳಲಾಗಿದೆ. ಅದರ ಪ್ರಕಾರ ಅವರು ಮಾದಕ ದ್ರವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ ಅಂತಾ ಕಮಲ್​ ಗುಣರತ್ನೆ ಹೇಳಿದರು.

ನಾವು ಪ್ರಸ್ತುತ ಅವರನ್ನು ತನಿಖೆ ಮಾಡುತ್ತಿದ್ದೇವೆ. ಅವರು ಮಾದಕ ವ್ಯಸನಿಗಳಾಗಿರುವುದನ್ನು ನಾವು ಕಂಡುಕೊಂಡಿದ್ದೇವೆ. ಅವರು ಉಗ್ರಗಾಮಿಗಳಲ್ಲ ಎಂದು ಗುಣರತ್ನೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಶ್ರೀಲಂಕಾ ಅಧಿಕಾರಿಗಳು ಆತನ ಸಹಚರರನ್ನು ಬಂಧಿಸಿದ್ದಾರೆ. ಆದರೆ ತನಿಖೆ ನಡೆಯುತ್ತಿರುವುದರಿಂದ ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಮೇ 19ರಂದು ಕೊಲಂಬೊದಿಂದ ಚೆನ್ನೈಗೆ ಇಂಡಿಗೋ ವಿಮಾನದಲ್ಲಿ ಬಂದಿದ್ದ ನಾಲ್ವರು ಶಂಕಿತರನ್ನು ಎಟಿಎಸ್ ಬಂಧಿಸಿತ್ತು. ಬಂಧಿತ ವ್ಯಕ್ತಿಗಳಲ್ಲಿ, ಸಿಂಗಾಪುರ, ಮಲೇಷ್ಯಾ ಮತ್ತು ದುಬೈನಿಂದ ಆಮದು ಮಾಡಿಕೊಂಡ ದೂರಸಂಪರ್ಕ ಸಾಧನಗಳು ಮತ್ತು ವಿದ್ಯುತ್ ಉಪಕರಣಗಳನ್ನು ಮಾರಾಟ ಮಾಡುವಲ್ಲಿ ತೊಡಗಿಸಿಕೊಂಡಿದ್ದ ಮೊಹಮ್ಮದ್ ನುಸ್ರತ್ (35) ಅಪರಾಧ ಇತಿಹಾಸವನ್ನು ಹೊಂದಿದ್ದನು.

ಸೆಪ್ಟೆಂಬರ್ 2020 ರಲ್ಲಿ ಕೊಲಂಬೊದಲ್ಲಿ ಹೆರಾಯಿನ್ ಇಟ್ಟುಕೊಂಡಿದ್ದಕ್ಕಾಗಿ ನುಸ್ರತ್​ನನ್ನು ಬಂಧಿಸಲಾಗಿತ್ತು. ಇತರ ಶಂಕಿತ 27 ವರ್ಷದ ಮೊಹಮ್ಮದ್ ನಫ್ರಾನ್ ಭಾರತ ಮತ್ತು ದುಬೈನಿಂದ ಬಟ್ಟೆ ವಸ್ತುಗಳು ಮತ್ತು ಚಾಕೊಲೇಟ್‌ಗಳನ್ನು ಆಮದು ಮಾಡಿಕೊಳ್ಳುವ ವ್ಯವಹಾರವನ್ನು ನಡೆಸುತ್ತಿದ್ದ. 2017 ರಲ್ಲಿ ನಫ್ರಾನ್ ಆತನನ್ನು ಶ್ರೀಲಂಕಾ ಪೊಲೀಸರು ರಾಷ್ಟ್ರೀಯ ರತ್ನ ಮತ್ತು ಆಭರಣ ಪ್ರಾಧಿಕಾರ ಕಾಯ್ದೆಯಡಿ ಬಂಧಿಸಿದ್ದರು.

ನಫ್ರಾನ್​ ಕೊಲಂಬೊದಲ್ಲಿ ಹೈಕೋರ್ಟ್ ನ್ಯಾಯಾಧೀಶರ ಹತ್ಯೆಗೆ ಮರಣದಂಡನೆ ಶಿಕ್ಷೆಗೆ ಗುರಿಯಾದ ಕುಖ್ಯಾತ ಭೂಗತ ಮಾದಕ ವ್ಯಸನಿ ಮೊಹಮ್ಮದ್ ನಿಯಾಸ್ ನೌಫರ್ ಅಲಿಯಾಸ್ 'ಪೊಟ್ಟಾ ನೌಫರ್' ಅವರ ಮಗ. ಇತರ ಇಬ್ಬರು ಶಂಕಿತರೆಂದರೆ ಮೊಹಮ್ಮದ್ ಫಾರಿಸ್ (35) ಮತ್ತು ಮೊಹಮ್ಮದ್ ರಶ್ದೀನ್ (43) ಇಬ್ಬರೂ ಕೊಲಂಬೊದಿಂದ ಭಾರತಕ್ಕೆ ಮೊದಲ ಭೇಟಿ ನೀಡಿದ್ದರು.

ಓದಿ:ಐಸಿಸ್ ನಂಟು ಪ್ರಕರಣ: ಆರೋಪಿಗೆ ದೆಹಲಿ ಹೈಕೋರ್ಟ್ ಜಾಮೀನು, ಮಂಗಳೂರಿಗೆ ಮರಳಿದ ಅಮ್ಮರ್ ಅಬ್ದುಲ್ - ISIS Linked case

ABOUT THE AUTHOR

...view details