ಕರ್ನಾಟಕ

karnataka

ಫೆಬ್ರವರಿ 14ಕ್ಕೆ ಯುಎಇಯಲ್ಲಿ ಹಿಂದೂ ದೇವಾಲಯ ಉದ್ಘಾಟನೆ: ಅಬುಧಾಬಿ ತಲುಪಿದ ಮಹಂತ್ ಸ್ವಾಮಿ ಮಹಾರಾಜ್

By ETV Bharat Karnataka Team

Published : Feb 6, 2024, 7:21 AM IST

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಿಸಲಾಗಿದೆ. ಇದನ್ನು BAPS ದೇವಾಲಯ ಎಂದು ಹೆಸರಿಸಲಾಗಿದೆ. ಈ ದೇವಾಲಯದ ಉದ್ಘಾಟನೆ ಹಿನ್ನೆಲೆ ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥಾದ ಪ್ರಸ್ತುತ ಆಧ್ಯಾತ್ಮಿಕ ನಾಯಕ ಮಹಂತ್ ಸ್ವಾಮಿ ಮಹಾರಾಜ್ ಅಬುಧಾಬಿಗೆ ಆಗಮಿಸಿದ್ದಾರೆ.

Mahant Swami Maharaj  Abu Dhabi  BAPS Hindu temple inauguration  ಮಹಂತ್ ಸ್ವಾಮಿ ಮಹಾರಾಜ್  ಹಿಂದೂ ದೇವಾಲಯ ಉದ್ಘಾಟನೆ
ಅಬುಧಾಬಿ ತಲುಪಿದ ಮಹಂತ್ ಸ್ವಾಮಿ ಮಹಾರಾಜ್

ಅಬುಧಾಬಿ, ಯುಎಇ:ಯುನೈಟೆಡ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯವು ಪೂರ್ಣಗೊಂಡಿದೆ. ಈ ದೇವಾಲಯವು ತುಂಬಾ ಸುಂದರವಾಗಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಪ್ರಧಾನಿ ಮೋದಿ ಅವರು ಫೆಬ್ರವರಿ 14 ರಂದು ಉದ್ಘಾಟಿಸಲಿದ್ದಾರೆ.

ದೇವಾಲಯದ ಕಲಾಕೃತಿ ಪ್ರಪಂಚದಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿದೆ. ಫೆಬ್ರವರಿ 14 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪಿಎಂ ಮೋದಿ ಮತ್ತು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ಆರನೇ ಮತ್ತು ಪ್ರಸ್ತುತ ಆಧ್ಯಾತ್ಮಿಕ ಗುರು ಸ್ವಾಮಿ ಮಹಂತ್ ಮಹಾರಾಜ್ ಸಹ ಭಾಗವಹಿಸಲಿದ್ದಾರೆ. ಈಗಾಗಲೇ ಸ್ವಾಮಿ ಮಹಂತ್ ಮಹಾರಾಜ್ ಅವರು ದೇವಾಲಯವನ್ನು ಉದ್ಘಾಟಿಸಲು ಮತ್ತು ವಸ್ತುಗಳನ್ನು ಪರಿಶೀಲಿಸಲು ಅಬುಧಾಬಿಗೆ ಆಗಮಿಸಿದ್ದಾರೆ.

ಅಬುಧಾಬಿ ತಲುಪಿದ ಮಹಂತ್ ಸ್ವಾಮಿ ಮಹಾರಾಜ್

ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಮಹಂತ್ ಸ್ವಾಮಿ ಮಹಾರಾಜ್ ಅವರನ್ನು ಯುಎಇ ಸಚಿವ ಶೇಖ್ ನಹಯಾನ್ ಮಬಾರಕ್ ಅಲ್ ನಹ್ಯಾನ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಯುಎಇಗೆ ಸ್ವಾಗತ. ನಮ್ಮ ರಾಷ್ಟ್ರವು ನಿಮ್ಮ ಉಪಸ್ಥಿತಿಯಿಂದ ಆಶೀರ್ವದಿಸಲ್ಪಟ್ಟಿದೆ. ನಿಮ್ಮ ದಯೆಯಿಂದ ನಾವು ಸ್ಪರ್ಶಿಸಲ್ಪಟ್ಟಿದ್ದೇವೆ ಮತ್ತು ನಿಮ್ಮ ಪ್ರಾರ್ಥನೆಗಳನ್ನು ನಾವು ಅನುಭವಿಸುತ್ತೇವೆ ಎಂದು ಸಚಿವ ನಹ್ಯಾನ್​ ಅವರು ಮಹಾರಾಜ್​ ಸ್ವಾಮಿಗೆ ಹೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮಹಂತ್ ಸ್ವಾಮಿ ಮಹಾರಾಜ್ ಅವರು, ನಿಮ್ಮ ಪ್ರೀತಿ ಮತ್ತು ಗೌರವದಿಂದ ನಾವು ಸ್ಪರ್ಶಿಸಲ್ಪಟ್ಟಿದ್ದೇವೆ. ಯುಎಇ ನಾಯಕರು ಶ್ರೇಷ್ಠರು, ಒಳ್ಳೆಯವರು ಮತ್ತು ಹೃದಯವಂತರು' ಎಂದು ಪ್ರೀತಿಯಿಂದ ಗುಣಗಾನ ಮಾಡಿದ್ದಾರೆ.

ಅಬುಧಾಬಿ ತಲುಪಿದ ಮಹಂತ್ ಸ್ವಾಮಿ ಮಹಾರಾಜ್

ಮಹಂತ್​ ಸ್ವಾಮಿ ಮಹಾರಾಜ್​ ಪರಿಚಯ:ಮಹಂತ್ ಸ್ವಾಮಿ ಮಹಾರಾಜ್ ಅವರು BAPS ಸ್ವಾಮಿನಾರಾಯಣ ಸಂಸ್ಥೆಯ ಆರನೇ ಮತ್ತು ಪ್ರಸ್ತುತ ಆಧ್ಯಾತ್ಮಿಕ ಗುರು. 20 ಜುಲೈ 2012 ರಂದು ಹಿರಿಯ ಸಾಧುಗಳ ಸಮ್ಮುಖದಲ್ಲಿ ಮಹಂತ್ ಸ್ವಾಮಿ ಮಹಾರಾಜ್ ಅವರನ್ನು BAPS ಸ್ವಾಮಿನಾರಾಯಣ ಸಂಸ್ಥೆಯ ಮುಖ್ಯ ಈವ್ ಗುರು ಎಂದು ಘೋಷಿಸಲಾಯಿತು. 13 ಆಗಸ್ಟ್ 2016 ರಂದು, ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಅಕಾಲಿಕ ನಿರ್ಗಮನದ ನಂತರ ಮಹಂತ್ ಸ್ವಾಮಿನಾರಾಯಣ್ ಆರನೇ ಗುರುಗಳಾಗಿ ಆಯ್ಕೆ ಆದರು.

ಮಹಂತ್ ಸ್ವಾಮಿ ಮಹಾರಾಜ್ ಅವರು 500 ಕ್ಕೂ ಹೆಚ್ಚು ಸ್ವಾಮಿನಾರಾಯಣ ದೇವಾಲಯಗಳು, ಗುರುಕುಲಗಳು ಮತ್ತು ಆಸ್ಪತ್ರೆಗಳನ್ನು ಬಹಳ ಕಡಿಮೆ ಸಮಯದಲ್ಲಿ ನಿರ್ಮಿಸಿ ಗಮನ ಸೆಳೆದಿದ್ದಾರೆ. ಅವರ ನಾಯಕತ್ವದಲ್ಲಿ BAPS ಸ್ವಾಮಿನಾರಾಯಣ ಸಂಸ್ಥೆಯು ಪ್ರಸ್ತುತ ರಾಬಿನ್ಸ್ವಿಲ್ಲೆ, USA ನಲ್ಲಿ ಸ್ವಾಮಿನಾರಾಯಣ ಅಕ್ಷರಧಾಮ ಮತ್ತು ಅಬುಧಾಬಿಯಲ್ಲಿ ಸ್ವಾಮಿನಾರಾಯಣ ದೇವಾಲಯವನ್ನು ನಿರ್ಮಿಸಿ ಗಮನ ಸೆಳೆದಿದೆ.

ಅಬುಧಾಬಿ ತಲುಪಿದ ಮಹಂತ್ ಸ್ವಾಮಿ ಮಹಾರಾಜ್

ದೇವಾಲಯದ ವಿಶೇಷತೆ: ದೇವಾಲಯಕ್ಕೆ ಸಂಬಂಧಿಸಿದಂತೆ ದೇಶದ ಏಳು ಎಮಿರೇಟ್‌ಗಳನ್ನು ಪ್ರತಿನಿಧಿಸುವ ಏಳು ಮಿನಾರ್‌ಗಳನ್ನು ಇದರಲ್ಲಿ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ದೇವಾಲಯವನ್ನು 27 ಎಕರೆಗಳಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ನಿರ್ಮಿಸಲು ಉತ್ತರ ರಾಜಸ್ಥಾನದಿಂದ ಅಬುಧಾಬಿಯವರೆಗೆ ಗುಲಾಬಿ ಕಲ್ಲು ಬಳಸಲಾಗಿದೆಯಂತೆ. ಈ ಕಾರಣದಿಂದಾಗಿ, ಯುಎಇಯಲ್ಲಿನ ತೀವ್ರ ಶಾಖವು ಈ ದೇವಾಲಯಕ್ಕೆ ಹಾನಿ ಮಾಡುವುದಿಲ್ಲ ಎಂದು ತಿಳಿದು ಬಂದಿದೆ.

ಈ ದೇವಾಲಯದ ಎತ್ತರವೆಷ್ಟು!?:ಈ ದೇವಾಲಯವು ಸುಮಾರು ಎತ್ತರ 108 ಅಡಿ ಇದೆ. ಇದರಲ್ಲಿ 40 ಸಾವಿರ ಘನ ಮೀಟರ್ ಅಮೃತಶಿಲೆ ಮತ್ತು 180 ಸಾವಿರ ಘನ ಮೀಟರ್ ಮರಳುಗಲ್ಲುಗಳನ್ನು ಬಳಕೆ ಮಾಡಲಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ನಟರಾದ ಸಂಜಯ್ ದತ್ ಮತ್ತು ಅಕ್ಷಯ್ ಕುಮಾರ್ ಸೇರಿದಂತೆ 50,000 ಕ್ಕೂ ಹೆಚ್ಚು ಜನರು ದೇವಾಲಯದ ನಿರ್ಮಾಣದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಇನ್ನು ಈ ದೇವಾಲಯವನ್ನು ನಿರ್ಮಿಸಲು ವೈದಿಕ ವಾಸ್ತುಶೈಲಿಯನ್ನು ಬಳಸಲಾಗಿದೆ. ದೇವಾಲಯವನ್ನು ಪ್ರವೇಶಿಸಿದಾಗ ಗಮನ ಸೆಳೆಯುವ ಮೊದಲ ವಿಷಯವೆಂದರೆ ಏಳು ಎಮಿರೇಟ್ಸ್‌ನ ಮರಳಿನಿಂದ ಮಾಡಿದ ಆಕರ್ಷಕ ದಿಬ್ಬಗಳು. 1997 ರಲ್ಲಿ ಶಾರ್ಜಾದ ಮರುಭೂಮಿಯ ಮಧ್ಯದಲ್ಲಿ ವಾಸಿಸುತ್ತಿರುವಾಗ ಅಬುಧಾಬಿಯಲ್ಲಿ ದೇವಾಲಯವನ್ನು ನಿರ್ಮಿಸಲು ಬಯಸಿದ ಸಂಸ್ಥೆಯ ದಿವಂಗತ ಆಧ್ಯಾತ್ಮಿಕ ನಾಯಕರಾದ ಪರಮಪೂಜ್ಯ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ದೂರದೃಷ್ಟಿಯ ಗೌರವಾರ್ಥವಾಗಿ ಇದನ್ನು ಸ್ಥಾಪಿಸಲಾಗಿದೆಯಂತೆ. ಫೆಬ್ರವರಿ 18 ರಿಂದ ಈ ದೇವಾಲಯವನ್ನು ಸಾಮಾನ್ಯ ಜನರಿಗೆ ತೆರೆಯಲಾಗುತ್ತದೆ. ಇತ್ತೀಚೆಗೆ ಈ ದೇವಾಲಯದ ಚಿತ್ರಗಳು ಸಾಕಷ್ಟು ವೈರಲ್​ ಆಗಿದ್ದವು.

ಓದಿ:ಅಬುಧಾಬಿಯಲ್ಲಿ ಹಿಂದೂ ದೇಗುಲ ಉದ್ಘಾಟಿಸಲು ಪ್ರಧಾನಿ ಮೋದಿಗೆ ಆಹ್ವಾನ

ABOUT THE AUTHOR

...view details