ಕರ್ನಾಟಕ

karnataka

ETV Bharat / international

ಟಿಕ್​​ ಟಾಕ್​​ ನಿಷೇಧಿಸುವ ಮಸೂದೆಗೆ ಇಂದು ಸಹಿ ಹಾಕಲಿದ್ದಾರೆ ಅಧ್ಯಕ್ಷ ಬೈಡನ್ - TIKTOK - TIKTOK

ಟಿಕ್ ಟಾಕ್ ನಿಷೇಧಿಸುವ ಮಸೂದೆಗೆ ಯುಎಸ್ ಅಧ್ಯಕ್ಷ ಜೋ ಬೈಡನ್ ಇಂದು ಸಹಿ ಹಾಕಲಿದ್ದಾರೆ.

TikTok faces nationwide ban in US as Biden prepares to sign
TikTok faces nationwide ban in US as Biden prepares to sign

By ETV Bharat Karnataka Team

Published : Apr 24, 2024, 1:00 PM IST

ವಾಷಿಂಗ್ಟನ್, ಅಮೆರಿಕ: ಬೃಹತ್ ವಿದೇಶಿ ನೆರವು ಪ್ಯಾಕೇಜ್ ಗೆ ಸಂಬಂಧಿಸಿದ ಐತಿಹಾಸಿಕ ಮಸೂದೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಸಹಿ ಹಾಕಲಿದ್ದಾರೆ. ಈ ಮಸೂದೆಯ ಪ್ರಕಾರ ಚೀನಾ ಮೂಲದ ಬೈಟ್ ಡ್ಯಾನ್ಸ್ ಒಂದು ವರ್ಷದೊಳಗೆ ತನ್ನ ಪಾಲನ್ನು ಮಾರಾಟ ಮಾಡದಿದ್ದರೆ ದೇಶದಲ್ಲಿ ಟಿಕ್ ಟಾಕ್ ನಿಷೇಧವಾಗಲಿದೆ.

ಕಳೆದ ವಾರಾಂತ್ಯದಲ್ಲಿ ಹೌಸ್ ಭಾರಿ ಬಹುಮತದೊಂದಿಗೆ ಮಸೂದೆ ಅಂಗೀಕರಿಸಿದ ನಂತರ ಅಮೆರಿಕ ಸೆನೆಟ್ ಕೂಡ ಮಂಗಳವಾರ ಮಸೂದೆಯನ್ನು 79 -18 ಮತಗಳಿಂದ ಅಂಗೀಕರಿಸಿದೆ. ಅಮೆರಿಕದಲ್ಲಿ ಟಿಕ್ ಟಾಕ್ 170 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಮಸೂದೆ ಬಗ್ಗೆ ಟಿಕ್ ಟಾಕ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕದಲ್ಲಿ ಕಂಪನಿಯ ಸಾರ್ವಜನಿಕ ನೀತಿಯ ಮುಖ್ಯಸ್ಥ ಮೈಕೆಲ್ ಬೆಕರ್ಮನ್ ಈ ಬಗ್ಗೆ ಮಾತನಾಡಿದ್ದು, ಕಂಪನಿಯು ಈ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ ಎಂದು ಹೇಳಿದರು.

ಈ ಮಸೂದೆ ಜಾರಿಯಾದ ನಂತರ ಬೈಟ್​ ಡ್ಯಾನ್ಸ್​ ಒಂಬತ್ತು ತಿಂಗಳ ಒಳಗೆ ಟಿಕ್ ಟಾಕ್​ ಅನ್ನು ಮಾರಾಟ ಮಾಡಬೇಕಾಗುತ್ತದೆ. ಈ ಷರತ್ತಿಗೆ ಒಂದು ಬಾರಿ 90 ದಿನಗಳ ವಿಸ್ತರಣೆ ನೀಡಬಹುದು.

"ಈ ಮಸೂದೆಯು ನನ್ನ ಮುಂದೆ ಬಂದ ತಕ್ಷಣ ನಾನು ಇದಕ್ಕೆ ಸಹಿ ಹಾಕುತ್ತೇನೆ ಮತ್ತು ಕೂಡಲೇ ಅಮೆರಿಕದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದೇನೆ. ಮಸೂದೆಗೆ ಸಹಿ ಹಾಕಿದ ನಂತರ ನಾವು ಈ ವಾರ ಉಕ್ರೇನ್​ಗೆ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳನ್ನು ಕಳುಹಿಸಲು ಪ್ರಾರಂಭಿಸಬಹುದು" ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

"ರಷ್ಯಾದಿಂದ ನಿರಂತರ ಬಾಂಬ್ ದಾಳಿಯನ್ನು ಎದುರಿಸುತ್ತಿರುವ ಉಕ್ರೇನ್​, ಇರಾನ್​ನಿಂದ ದೊಡ್ಡ ಮಟ್ಟದ ದಾಳಿಗಳನ್ನು ಎದುರಿಸಿದ ಇಸ್ರೇಲ್​ಗೆ; ನಿರಾಶ್ರಿತರು ಮತ್ತು ಗಾಜಾ, ಸುಡಾನ್ ಮತ್ತು ಹೈಟಿ ಸೇರಿದಂತೆ ಪ್ರಪಂಚದಾದ್ಯಂತದ ಸಂಘರ್ಷಗಳು ಮತ್ತು ನೈಸರ್ಗಿಕ ವಿಪತ್ತುಗಳಿಂದ ಪ್ರಭಾವಿತರಾದವರಿಗೆ ಮತ್ತು ಇಂಡೋ-ಪೆಸಿಫಿಕ್​ನಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಬಯಸುವ ನಮ್ಮ ಪಾಲುದಾರರಿಗೆ ತುರ್ತಾಗಿ ಸಹಾಯ ಕಳುಹಿಸಬೇಕಿದೆ" ಎಂದು ಅವರು ವಿವರಿಸಿದರು.

ಸೆಪ್ಟೆಂಬರ್ 2016 ರಲ್ಲಿ ಬಿಡುಗಡೆಯಾದ ಟಿಕ್ ಟಾಕ್ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದ್ದು, ಇದರ ಮೂಲಕ ಮೊಬೈಲ್ ಸಾಧನಗಳು ಅಥವಾ ವೆಬ್ ಕ್ಯಾಮ್​ಗಳಲ್ಲಿ ಚಿತ್ರೀಕರಿಸಿದ 15 ಸೆಕೆಂಡುಗಳ ವಿಡಿಯೋಗಳನ್ನು ರಚಿಸಬಹುದು, ವೀಕ್ಷಿಸಬಹುದು ಮತ್ತು ಶೇರ್ ಮಾಡಬಹುದು.

ಇದನ್ನೂ ಓದಿ : ವಲಸಿಗರ ಗಡಿಪಾರು ಕಾನೂನು ಅನುಮೋದಿಸಿದ ಬ್ರಿಟನ್​: ಇಂಗ್ಲಿಷ್ ಕಾಲುವೆ ದಾಟಲು ಯತ್ನಿಸಿದ ಐವರು ಸಾವು - UK Deportation Bill

For All Latest Updates

ABOUT THE AUTHOR

...view details