ಕರ್ನಾಟಕ

karnataka

ETV Bharat / international

ಕೊಲಂಬಿಯಾ ವಿವಿಯಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸುವ ವೇಳೆ ಗುಂಡು ಹಾರಿಸಿದ ಪೊಲೀಸ್​ ಅಧಿಕಾರಿ - protest in us

ಇಸ್ರೇಲ್​ - ಹಮಾಸ್​ ಯುದ್ಧ ವಿಚಾರಕ್ಕೆ ಅಮೆರಿಕದಲ್ಲಿ ವಿದ್ಯಾರ್ಥಿಗಳನ್ನೊಳಗೊಂಡ ಪ್ರತಿಭಟನೆ ನಡೆಯುತ್ತಿರುವಾಗ ಪರಿಸ್ಥಿತಿ ತಿಳಿಗೊಳಿಸುವ ವೇಳೆ ಪೊಲೀಸ್​ ಅಧಿಕಾರಿಯೊಬ್ಬರು ಬಂದೂಕಿನಿಂದ ಗುಂಡು ಹಾರಿಸಿದ್ದಾರೆ.

ಕೊಲಂಬಿಯಾ  ಪ್ರತಿಭಟನೆ
ಕೊಲಂಬಿಯಾ ಪ್ರತಿಭಟನೆ (Etv Bharat)

By PTI

Published : May 3, 2024, 7:24 AM IST

Updated : May 3, 2024, 7:48 AM IST

ಲಾಸ್ ಏಂಜಲೀಸ್(ಅಮೆರಿಕ): ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿನ ಪ್ರತಿಭಟನಾಕಾರರನ್ನು ತೆರವುಗೊಳಿಸುವ ಕಾರ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಹ್ಯಾಮಿಲ್ಟನ್ ಹಾಲ್​ ಒಳಗೆ ತಮ್ಮ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ ಎಂದು ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಅವರ ಕಚೇರಿಯ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಇಸ್ರೇಲ್​ - ಹಮಾಸ್​ ಯುದ್ಧದಿಂದ ಗಾಜಾದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುವುದನ್ನು ವಿರೋಧಿಸಿ ಅಮೆರಿಕದ ಹಲವು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು​​ ಗುಂಡು ಹಾರಿಸಿದ್ದಾರೆ. ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ. ಈ ಸಂದರ್ಭ ಇತರ ಅಧಿಕಾರಿಗಳು ಇದ್ದರು, ಆದರೆ, ಹತ್ತಿರದಲ್ಲಿ ಯಾವುದೇ ವಿದ್ಯಾರ್ಥಿಗಳು ಇರಲಿಲ್ಲ. ಬ್ರಾಗ್ ಅವರ ಕಚೇರಿ ಘಟನೆಯನ್ನು ಪರಿಶೀಲಿಸುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ.

ಇನ್ನು ಮಂಗಳವಾರ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಅಂದು ಕೊಲಂಬಿಯಾದಲ್ಲಿ 100 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಇದುವರೆಗೆ ಪ್ಯಾಲೇಸ್ಟೈ ನಿಯನ್ ಪರ ಪ್ರತಿಭಟನೆಯಲ್ಲಿ ಅಮೆರಿಕದ ಕಾಲೇಜು ಕ್ಯಾಂಪಸ್‌ಗಳಲ್ಲಿ 2,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಲೆಕ್ಕಾಚಾರ ನೀಡಿದೆ.

ಏಪ್ರಿಲ್​ 17 ರಂದು ಟೆಂಟ್​ ಹಾಕಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಕಾರರನ್ನು ಏಪ್ರಿಲ್​ 18 ರಂದು ಬಂಧಿಸಿ ಅವರ ಟೆಂಟ್​ಗಳನ್ನು ತೆರವುಗೊಳಿಸಿದ ಮೇಲೆ ಕೊಲಂಬಿಯಾದ ಪ್ರತಿಭಟನಕಾರರು ಹ್ಯಾಮಿಲ್ಟನ್ ಹಾಲ್​​ನ್ನು ವಶಪಡಿಸಿಕೊಂಡರು. ಕಳೆದ 24 ಗಂಟೆಗಳಲ್ಲಿ, ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನಕಾರರು ಹೆಚ್ಚು ಪ್ರತಿಭಟನೆ ನಡೆಸುತ್ತಿದ್ದಾರೆ.

ಏಪ್ರಿಲ್​ 17 ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸಬೇಕೆಂದು ಕರೆ ನೀಡಿದ್ದಾರೆ.ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಪ್ರಯತ್ನಗಳನ್ನು ಬೆಂಬಲಿಸುವ ಸಂಸ್ಥೆಗಳು, ವಿಶ್ವವಿದ್ಯಾಲಯಗಳನ್ನು ದೂರವಿಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಲ್ಲದೇ ಹೊರಗಿನವರು ಸೇರಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆಂದು ವಿಶ್ವವಿದ್ಯಾಲಯಗಳು ತಿಳಿಸಿವೆ.

ಈಗಾಗಲೇ ಕೊಲಂಬಿಯಾ ವಿಶ್ವವಿದ್ಯಾನಿಲಯದ ವಕ್ತಾರ ಬೆನ್ ಚಾಂಗ್ '' ಕಾಲೇಜು ಕ್ಯಾಂಪಸ್​ನಲ್ಲಿ ನಿಯಮ ಉಲ್ಲಂಘಿಸುವ ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಅಮಾನತುಗೊಳಿಸಲು ವಿಶ್ವವಿದ್ಯಾನಿಲಯವು ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ಕೆಲ ದಿನಗಳಿಂದ ಪ್ರತಿಭಟನೆಗಳ ಕಾವು ಜೋರಾಗುತ್ತಿದೆ. ಇದೇ ವಿಚಾರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ನೌಕರರನ್ನು ಗೂಗಲ್​ ಸಂಸ್ಥೆ ಕೆಲಸದಿಂದ ವಜಾ ಮಾಡಿತ್ತು. ಈ ಬಗ್ಗೆ ಅಲ್ಲಿನ ನೌಕರರು ಕಂಪನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಶಾಶ್ವತ ಕದನವಿರಾಮಕ್ಕೆ ಬೇಡಿಕೆ ಇಟ್ಟ ಹಮಾಸ್: ಶಾಂತಿ ಮಾತುಕತೆಗೆ ಮತ್ತೆ ಅಡ್ಡಿ - israel hamas war

Last Updated : May 3, 2024, 7:48 AM IST

ABOUT THE AUTHOR

...view details