ಕರ್ನಾಟಕ

karnataka

ETV Bharat / international

7 ವರ್ಷಗಳ ಬಳಿಕ ಅಮೆರಿಕಕ್ಕೆ ವಿಮಾನಯಾನ ಪುನಾರಂಭಿಸಲಿದೆ ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್‌ಲೈನ್ಸ್​ - RESUME US FLIGHTS AFTER 7 YEARS

ಅಮೆರಿಕದಿಂದ 7 ವರ್ಷ ಅಮಾನತುಗೊಂಡಿದ್ದ ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಮತ್ತೆ ದೊಡ್ಡಣ್ಣನಲ್ಲಿಗೆ ವಿಮಾನಯಾನ ಪುನಾರಂಭಿಸಲಿದೆ ಎಂದು ವರದಿಯಾಗಿದೆ.

Pakistan International Airlines
ಪಾಕಿಸ್ತಾನ ಅಂತರಾಷ್ಟ್ರೀಯ ಏರ್‌ಲೈನ್ಸ್​ (ANI)

By ANI

Published : 5 hours ago

ಇಸ್ಲಾಮಾಬಾದ್​(ಪಾಕಿಸ್ತಾನ):ಏಳು ವರ್ಷಗಳ ಅಮಾನತು ಆದೇಶದ ಬಳಿಕ ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (PIA) ಅಮೆರಿಕಕ್ಕೆ ತನ್ನ ವಿಮಾನಯಾನವನ್ನು ಪುನಾರಂಭಿಸಲಿದೆ. ಇದು ದೇಶದ ವಾಯುಯಾನ ವಲಯಕ್ಕೆ ಮಹತ್ವದ ಬೆಳವಣಿಗೆಯಾಗಿದೆ ಎಂದು ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಅಮೆರಿಕದ​ ಫೆಡರಲ್​ ಏವಿಯೇಷನ್​ ​​ಅಡ್ಮಿನಿಸ್ಟ್ರೇಷನ್ ನಡುವೆ ಬಾಕಿ ಉಳಿದಿರುವ ಹಣಕಾಸಿನ ಬಾಧ್ಯತೆಗಳನ್ನು ಇತ್ಯರ್ಥಗೊಳಿಸಲು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಡಿಜಿ ಸಿಎಎ ನಾದಿರ್ ಶಾಫಿ ದಾರ್ ಅವರ ಪ್ರಕಾರ, ಎಫ್‌ಎಎಗೆ ಪಾವತಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಫೆಬ್ರವರಿ ಅಥವಾ ಮಾರ್ಚ್‌ನೊಳಗೆ ಎಫ್‌ಎಎ ನಿಯೋಗವು ಪಾಕಿಸ್ತಾನಕ್ಕೆ ಭೇಟಿ ನೀಡಲು ದಾರಿ ಮಾಡಿಕೊಡಲಿದೆ. ಈ ಬೆಳವಣಿಗೆಯು ಎಫ್‌ಎಎಯೊಂದಿಗೆ ಪಾಕಿಸ್ತಾನವನ್ನು 'ವರ್ಗ ಒಂದರ‘ ಸ್ಥಾನಮಾನಕ್ಕೆ ಮರುವರ್ಗೀಕರಿಸುವ ಸಾಧ್ಯತೆಗಳನ್ನು ಹೆಚ್ಚಿಸಿದೆ. ಹಾಗೇ ಅಮೆರಿಕಕ್ಕೆ ನೇರ ವಿಮಾನಗಳನ್ನು ಪುನಾರಂಭಿಸಲು ಅನುವು ಮಾಡಿಕೊಡುತ್ತದೆ.

2017 ರಲ್ಲಿ ಸ್ಥಗಿತಗೊಂಡಿದ್ದ ವಿಮಾನಯಾನ:ನ್ಯೂಯಾರ್ಕ್‌ಗೆ ನಾಲ್ಕು ಮತ್ತು ಚಿಕಾಗೋಗೆ ಎರಡು ಸೇರಿದಂತೆ ಪಾಕಿಸ್ತಾನ ಮತ್ತು ಅಮೆರಿಕ ನಡುವೆ ವಾರಕ್ಕೆ ಆರು ವಿಮಾನಗಳ ಹಾರಾಟವನ್ನು ಪಾಕ್​​ನ ಈ ವಿಮಾನಯಾನ ಸಂಸ್ಥೆ ನಿರ್ವಹಿಸುತ್ತಿತ್ತು.ಆದರೆ 2017 ರಲ್ಲಿ ಅಮೆರಿಕಕ್ಕೆ PIAಯ ವಿಮಾನಗಳನ್ನು ಸ್ಥಗಿತಗೊಳಿಸಲಾಯಿತು. ಪಾಕ್​ ಸರ್ಕಾರದಿಂದ ಸರ್ಕಾರಕ್ಕೆ (G2G) ಒಪ್ಪಂದಗಳ ಮೂಲಕ PIA ಅನ್ನು ಖಾಸಗೀಕರಣಗೊಳಿಸುವ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದೆ. ಮತ್ತು ಡಿಸೆಂಬರ್ 31 ರವರೆಗೆ ಗಡುವನ್ನು ನಿಗದಿಪಡಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಧಿಕೃತ ಮಾಧ್ಯಮ ಸಂಸ್ಥೆ ಶನಿವಾರ ವರದಿ ಮಾಡಿದೆ.

ಒಪ್ಪಂದ ಅಂತಿಮಗೊಳಿಸಲು ನಡೆದಿದೆ ಪ್ರಕ್ರಿಯೆ:ವರದಿಯ ಪ್ರಕಾರ, ಅಬುಧಾಬಿ ಮತ್ತು ಕತಾರ್ ಎರಡೂ ಪಾಕಿಸ್ತಾನ ಇಂಟರ್‌ನ್ಯಾಷನಲ್​ ಏರ್‌ಲೈನ್ಸ್​ನ ಖಾಸಗೀಕರಣದ ಬಗ್ಗೆ ಬಲವಾದ ಆಸಕ್ತಿಯನ್ನು ವ್ಯಕ್ತಪಡಿಸಿವೆ. ಇದು ವಿದೇಶಿ ಹೂಡಿಕೆಗೆ ಸಂಭಾವ್ಯ ಅವಕಾಶವನ್ನು ಸೃಷ್ಟಿಸಿದೆ. ಒಪ್ಪಂದದ ನಿಯಮಗಳನ್ನು ಅಂತಿಮಗೊಳಿಸಲು ಎರಡೂ ದೇಶಗಳೊಂದಿಗೆ ಸಕ್ರಿಯ ಚರ್ಚೆಗಳು ನಡೆಯುತ್ತಿವೆ.

ಹೂಡಿಕೆದಾರರನ್ನು ಆಕರ್ಷಿಸಲು, ಪಾಕಿಸ್ತಾನದ ಸೆಕ್ಯುರಿಟೀಸ್ ಮತ್ತು ಎಕ್ಸೆಂಜ್​​ ಕಮಿಷನ್ PIA ನಲ್ಲಿ ಪಾಲನ್ನು ಪಡೆಯಲು ಬಯಸುವವರಿಗೆ ಗಣನೀಯ ಪ್ರೋತ್ಸಾಹ ನೀಡುತ್ತಿದೆ ಎಂದು ಸದ್ಯ ವರದಿಯಾಗಿದೆ. ಖಾಸಗೀಕರಣ ಪ್ರಕ್ರಿಯೆಯಲ್ಲಿ ಸುಗಮ ಪರಿವರ್ತನೆ ಖಚಿತಪಡಿಸಿಕೊಳ್ಳಲು ಈ ಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ, ಸಂಭಾವ್ಯ ಹೂಡಿಕೆದಾರರಿಗೆ ಅಗತ್ಯ ಬೆಂಬಲವನ್ನು ಒದಗಿಸುತ್ತದೆ ಎಂದು ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಸೇರಿಸಿದೆ.

ಇದನ್ನೂ ಓದಿ:ಪಾಕ್​​​ನಲ್ಲಿ ನಿಲ್ಲದ ಉಗ್ರರ ಹಾವಳಿ: ಪ್ರತ್ಯೇಕ ಕಾರ್ಯಾಚರಣೆಯಲ್ಲಿ 7 ಭಯೋತ್ಪಾದಕರ ಎನ್​​​ಕೌಂಟರ್​

ABOUT THE AUTHOR

...view details