ಕರ್ನಾಟಕ

karnataka

ETV Bharat / international

'3ನೇ ಮಹಾಯುದ್ಧ ನಾನು ಮಾತ್ರ ತಡೆಯಬಲ್ಲೆ': ಜಂಭ ಕೊಚ್ಚಿಕೊಂಡ ಟ್ರಂಪ್ - Donald Trump - DONALD TRUMP

ವಿಶ್ವದಲ್ಲಿ ಮೂರನೇ ಮಹಾಯುದ್ಧವನ್ನು ನಾನು ಮಾತ್ರ ತಡೆಯಬಲ್ಲೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (IANS)

By ETV Bharat Karnataka Team

Published : Sep 5, 2024, 2:03 PM IST

ನ್ಯೂಯಾರ್ಕ್:ಜಗತ್ತಿನಲ್ಲಿ ಮೂರನೇ ವಿಶ್ವ ಯುದ್ಧ ನಡೆಯುವ ಮತ್ತು ಪರಮಾಣು ಶಸ್ತ್ರಾಸ್ತ್ರಗಳು ಬಳಕೆಯಾಗುವ ಅಪಾಯವಿದ್ದು, ಅದನ್ನು ತಾನು ಮಾತ್ರ ತಡೆಯಬಲ್ಲೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.

"ವಿಶ್ವವು ಮೂರನೇ ಮಹಾಯುದ್ಧದತ್ತ ಸಾಗುತ್ತಿದೆ. ಶಸ್ತ್ರಾಸ್ತ್ರಗಳ ಬಲ ಇದಕ್ಕೆ ಕಾರಣವಾಗಿದೆ. ಅದರಲ್ಲೂ ಪರಮಾಣು ಶಸ್ತ್ರಾಸ್ತ್ರಗಳು ಹೆಚ್ಚಿನ ಅಪಾಯ ತರಬಹುದು." ಎಂದು ಅವರು ಬುಧವಾರ ಹೇಳಿದರು. ಅಮೆರಿಕದ ಬತ್ತಳಿಕೆಯಲ್ಲಿ ಪರಮಾಣು ಬಾಂಬ್​​ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಬಯಸುವುದಿಲ್ಲ ಎಂದು ಅವರು ತಿಳಿಸಿದರು.

"ನಿಮ್ಮನ್ನು ಯುದ್ಧದಿಂದ ಪಾರು ಮಾಡುವ ಅಧ್ಯಕ್ಷರ ಅಗತ್ಯವಿದೆ. ನಾನು ಆಯ್ಕೆಯಾದರೆ ವಿಶ್ವದಲ್ಲಿ ಮೂರನೇ ಮಹಾಯುದ್ಧ ನಡೆಯಲಾರದು. ಆದರೆ ಈಗ ನೀವು ಹೊಂದಿರುವ ಕೋಡಂಗಿ ನಾಯಕರ ಕಾರಣದಿಂದ ಮೂರನೇ ಮಹಾಯುದ್ಧ ನಡೆಯುವ ಸಾಧ್ಯತೆಯಿದೆ. ಆದರೆ ಈ ಯುದ್ಧ ಈ ಹಿಂದಿನ ಎಲ್ಲ ಯುದ್ಧಗಳಿಗಿಂತ ಭೀಕರವಾಗಿರಬಹುದು" ಎಂದು ಅವರು ಹೇಳಿದರು.

ಪೆನ್ಸಿಲ್ವೇನಿಯಾದ ಹ್ಯಾರಿಸ್​ಬರ್ಗ್​ನಲ್ಲಿ ಕನ್ಸರ್ವೇಟಿವ್ ಫಾಕ್ಸ್ ನ್ಯೂಸ್ ಪ್ರಸಾರಕ ಸೀನ್ ಹ್ಯಾನಿಟಿ ಆಯೋಜಿಸಿದ್ದ ಟೌನ್ ಹಾಲ್ ಸಭೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಈವೆಂಟ್​ನ ಎರಡು ವಿಭಾಗಗಳಲ್ಲಿ ಮೊದಲನೆಯದನ್ನು ಬುಧವಾರ ರಾತ್ರಿ ಚಾನೆಲ್​ನಲ್ಲಿ ಪ್ರಸಾರ ಮಾಡಲಾಯಿತು.

ತಮ್ಮ ಹೇಳಿಕೆಯನ್ನು ಬೆಂಬಲಿಸಲು ಟ್ರಂಪ್ ಹಂಗೇರಿಯ ಪ್ರಧಾನಿ ವಿಕ್ಟರ್ ಒರ್ಬಾನ್ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿದ್ದಾರೆ.

"ಪ್ರತಿಯೊಬ್ಬರೂ ಟ್ರಂಪ್​​ಗೆ ಹೆದರುತ್ತಿದ್ದರು. ನೀವು ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿದಲ್ಲಿ ವಿಶ್ವದಲ್ಲಿ ಯಾವುದೇ ಸಮಸ್ಯೆಗಳೇ ಇರುವುದಿಲ್ಲ" ಎಂದು ಹಂಗೇರಿ ಪ್ರಧಾನಿ ಹೇಳಿದ್ದರು. ಸದ್ಯ ಟ್ರಂಪ್ ಇದನ್ನೇ ಉಲ್ಲೇಖಿಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

"ಪರಮಾಣು ಶಸ್ತ್ರಾಸ್ತ್ರಗಳನ್ನು ಖರೀದಿಸಿ ತಂದವನೇ ನಾನು. ಹೀಗಾಗಿ ನನಗೆ ಅವುಗಳ ಬಗ್ಗೆ ಎಲ್ಲರಿಗಿಂತ ಹೆಚ್ಚಾಗಿ ಗೊತ್ತಿದೆ. ಅದಕ್ಕಾಗಿಯೇ ನಾನು ಪರಮಾಣು ಶಸ್ತ್ರಾಸ್ತ್ರಗಳಿಂದಾಗಬಹುದಾದ ವಿನಾಶದ ಬಗ್ಗೆ ಒತ್ತಿ ಹೇಳುತ್ತಿದ್ದೇನೆ" ಎಂದು ಟ್ರಂಪ್ ಹೇಳಿದರು.

"ನಾವು ನಮ್ಮ ಇಡೀ ಸೈನ್ಯವನ್ನು ಪುನರ್ ನಿರ್ಮಿಸಿದ್ದೇವೆ. ಇಡೀ ಮಿಲಿಟರಿ ತಂತ್ರಗಾರಿಕೆಯನ್ನು ನವೀಕರಿಸಿದ್ದೇವೆ. ಆದರೆ ನಾನು ನವೀಕರಿಸಲು ಬಯಸದ ಒಂದೇ ಒಂದು ಅಂಶವೆಂದರೆ ಅದು ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆ" ಎಂದು ಟ್ರಂಪ್ ತಿಳಿಸಿದರು.

"ನಾನು ಅಧ್ಯಕ್ಷನಾಗಿದ್ದರೆ ಉಕ್ರೇನ್ ಯುದ್ಧ, ಗಾಜಾ ಸಂಘರ್ಷ ಮತ್ತು ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಮಾರಣಾಂತಿಕ ಭಯೋತ್ಪಾದಕ ದಾಳಿ ಇವು ಯಾವುವೂ ಸಂಭವಿಸುತ್ತಿರಲಿಲ್ಲ" ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಸುಡಾನ್​ನಲ್ಲಿ ಭೀಕರ ಆಹಾರ ಕ್ಷಾಮ: ಎಲೆ, ಕೀಟ ತಿಂದು ಜೀವನ ಸಾಗಿಸುತ್ತಿರುವ ಜನ - Sudan hunger crisis

ABOUT THE AUTHOR

...view details