ಕರ್ನಾಟಕ

karnataka

ETV Bharat / international

ನೂರ್ ಹುಸೇನ್ ದಿನಾಚರಣೆ: ಅವಾಮಿ ಲೀಗ್ ಕಾರ್ಯಕರ್ತರಿಗೆ ಥಳಿತ, ಢಾಕಾ ಉದ್ವಿಗ್ನ - DHAKA VIOLENCE

ನೂರ್ ಹುಸೇನ್ ದಿನ ಆಚರಿಸಲು ಯತ್ನಿಸಿದ ಅವಾಮಿ ಲೀಗ್ ಕಾರ್ಯಕರ್ತರನ್ನು ಥಳಿಸಲಾಗಿದೆ.

ನೂರ್ ಹುಸೇನ್ ದಿನಾಚರಣೆ: ಅವಾಮಿ ಲೀಗ್ ಕಾರ್ಯಕರ್ತರಿಗೆ ಥಳಿತ
ನೂರ್ ಹುಸೇನ್ ದಿನಾಚರಣೆ: ಅವಾಮಿ ಲೀಗ್ ಕಾರ್ಯಕರ್ತರಿಗೆ ಥಳಿತ (IANS)

By ETV Bharat Karnataka Team

Published : Nov 10, 2024, 7:02 PM IST

ಢಾಕಾ: ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿ ಹಲವಾರು ಅವಾಮಿ ಲೀಗ್ ಬೆಂಬಲಿಗರನ್ನು ಥಳಿಸಲಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ನೂರ್ ಹುಸೇನ್ ದಿನದ ಸ್ಮರಣಾರ್ಥ ಢಾಕಾದ ಶಹೀದ್ ನೂರ್ ಹುಸೇನ್ ಚೌಕದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದ ಹಲವಾರು ಅವಾಮಿ ಲೀಗ್ ಬೆಂಬಲಿಗರನ್ನು ಥಳಿಸಲಾಗಿದೆ ಎಂದು ವರದಿಯಾಗಿದೆ. ಬಂಗಬಂಧು ಅವೆನ್ಯೂದಲ್ಲಿರುವ ಅವಾಮಿ ಲೀಗ್ ನ ಕೇಂದ್ರ ಕಚೇರಿಯ ಮುಂದೆ ಈ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆಗಸ್ಟ್ 5 ರಂದು ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರವನ್ನು ದಂಗೆಯ ಮೂಲಕ ಕೆಳಗಿಳಿಸಿದ ನಂತರ ದೇಶದಲ್ಲಿ ಅವಾಮಿ ಲೀಗ್ ಹಮ್ಮಿಕೊಂಡಿದ್ದ ಪ್ರಮುಖ ಕಾರ್ಯಕ್ರಮ ಇದಾಗಿತ್ತು.

ರಾಜಕೀಯ ಕಾರ್ಯಕರ್ತ ಮತ್ತು ಅವಾಮಿ ಲೀಗ್ ನ ಯುವ ರಂಗವಾದ ಜುಬೊ ಲೀಗ್ ನ ನಾಯಕರಾಗಿದ್ದ ನೂರ್ ಹುಸೇನ್ ಅವರನ್ನು ನವೆಂಬರ್ 10, 1987 ರಂದು ಎರ್ಷಾದ್ ವಿರೋಧಿ ಚಳವಳಿಯ ಸಮಯದಲ್ಲಿ ಕೊಲ್ಲಲಾಗಿತ್ತು.

"ವಿಮೋಚನಾ ಯುದ್ಧದ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು" ನಂಬುವ ಸಾಮಾನ್ಯ ಜನರು ಮತ್ತು ಕಾರ್ಯಕರ್ತರು ಭಾನುವಾರ ಮಧ್ಯಾಹ್ನ ನೂರ್ ಹುಸೇನ್ ಚಟ್ಟರ್ (ಜೀರೋ ಪಾಯಿಂಟ್) ವೃತ್ತದಲ್ಲಿ ಜಮಾಯುಸಿ ಮೆರವಣಿಗೆಯಲ್ಲಿ ಭಾಗಿಯಾಗಬೇಕೆಂದು ಅವಾಮಿ ಲೀಗ್ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್​ ಮಾಡಿತ್ತು. ದೇಶದಲ್ಲಿ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ನಿರ್ಮೂಲನೆ ಮಾಡಲು ಮತ್ತು ಬಾಂಗ್ಲಾದೇಶ ಅವಾಮಿ ಲೀಗ್ ನಾಯಕತ್ವದಲ್ಲಿ ಪ್ರಜಾಪ್ರಭುತ್ವ ಆಡಳಿತವನ್ನು ಮರುಸ್ಥಾಪಿಸುವಂತೆ ಅವಾಮಿ ಲೀಗ್ ಕರೆ ನೀಡಿತ್ತು.

ಅವಾಮಿ ಲೀಗ್ ತನ್ನ ಕಾರ್ಯಕ್ರಮವನ್ನು ಘೋಷಿಸಿದ ಕೂಡಲೇ, ದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಪ್ರತಿಭಟನಾ ರ್ಯಾಲಿ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

"ಅವಾಮಿ ಲೀಗ್ ಈಗ ಫ್ಯಾಸಿಸ್ಟ್ ಪಕ್ಷವಾಗಿದೆ. ಈ ಫ್ಯಾಸಿಸ್ಟ್ ಪಕ್ಷಕ್ಕೆ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ" ಎಂದು ಯೂನುಸ್ ಅವರ ಪತ್ರಿಕಾ ಕಾರ್ಯದರ್ಶಿ ಶಫಿಕುಲ್ ಆಲಂ ಹೇಳಿದ್ದಾರೆ.

ಅದೇ ಸ್ಥಳದಲ್ಲಿ ತಾರತಮ್ಯ ವಿರೋಧಿ ವಿದ್ಯಾರ್ಥಿ ಸಂಘಟನೆಯು ಪ್ರತಿ-ಸಭೆಯನ್ನು ನಡೆಸುತ್ತಿದ್ದು, ಅವಾಮಿ ಲೀಗ್ ನಾಯಕರನ್ನು ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸಿದೆ. ನೂರ್ ಹುಸೇನ್ ದಿನದಂದು ಕಾನೂನು ಸುವ್ಯವಸ್ಥೆ ಕಾಪಾಡಲು ದೇಶದ ರಾಜಧಾನಿ ಮತ್ತು ದೇಶಾದ್ಯಂತ ಗಡಿ ಭದ್ರತಾ ಪಡೆಗಳ 191 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ತಿಳಿಸಿದೆ.

ಇದನ್ನೂ ಓದಿ : 2,600 ಲೀಟರ್ ಎದೆಹಾಲು ದಾನ ಮಾಡಿ ಗಿನ್ನೆಸ್ ವಿಶ್ವದಾಖಲೆ ಬರೆದ ಅಮೆರಿಕದ ಅಮ್ಮ

ABOUT THE AUTHOR

...view details