ಕರ್ನಾಟಕ

karnataka

ETV Bharat / international

ಜಗತ್ತಿನ ಅತ್ಯಂತ ಮಲಿನ ನಗರ ಯಾವುದು ಗೊತ್ತೆ? ಇದು ನಮ್ಮ ನೆರೆ ದೇಶದಲ್ಲೇ ಇದೆ!

ಸದ್ಯಕ್ಕೆ ಕೃತಕ ಮಳೆ ಸುರಿಸುವ ಮೂಲಕ ಮಾಲಿನ್ಯ ತಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆ ದೇಶದ ಸಚಿವರೊಬ್ಬರು ತಿಳಿಸಿದ್ದಾರೆ.

pakistans-lahore-declared-most-polluted-city-in-world
ವಾಯು ಮಾಲಿನ್ಯದ ಸಂಗ್ರಹ ಚಿತ್ರ (IANS)

By PTI

Published : Oct 22, 2024, 4:13 PM IST

ಲಾಹೋರ್(ಪಾಕಿಸ್ತಾನ) ​: ಪಾಕಿಸ್ತಾನದ ಸಾಂಸ್ಕೃತಿಕ ನಗರ ಲಾಹೋರ್ ಅ​ನ್ನು​ ಜಗತ್ತಿನ ಅತ್ಯಂತ ಮಲಿನ ನಗರ ಎಂದು ಘೋಷಿಸಲಾಗಿದೆ. ಇಲ್ಲಿನ ವಾಯುಗುಣಮಟ್ಟ (ಎಕ್ಯೂಐ) 394 ಆಗಿದೆ. ಈ ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪಾಕಿಸ್ತಾನದ ಪಂಜಾಬ್​ ಸರ್ಕಾರ ಕೃತಕ ಮಳೆ ಸುರಿಸುವ ಯೋಜನೆಯನ್ನು ರೂಪಿಸಿದೆ.

ಎಕ್ಯೂಐ ಅನ್ನು ಗಾಳಿಯಲ್ಲಿನ ಮಾಲಿನ್ಯಕಾರಕ ಅಂಶಗಳ ಮೇಲೆ ಮಾಪನ ಮಾಡಲಾಗುತ್ತದೆ. ಎಕ್ಯೂಐ 100ಕ್ಕಿಂತ ಹೆಚ್ಚಿದ್ದರೆ ಅನಾರೋಗ್ಯಕರ ಮತ್ತು 150ಕ್ಕಿಂತ ಹೆಚ್ಚಿದ್ದರೆ ತೀವ್ರ ಅನಾರೋಗ್ಯಕರ ಎಂದು ಪರಿಗಣಿಸಲಾಗುತ್ತದೆ. ಬೆಳೆ ತ್ಯಾಜ್ಯ ಸುಡುವಿಕೆ ಮತ್ತು ಕೈಗಾರಿಕಾ ಮಾಲಿನ್ಯ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಅಪಾಯಕಾರಿ ಮಾಲಿನ್ಯವು ನಗರದ ಜನರಲ್ಲಿ ಕೆಮ್ಮು, ಉಸಿರಾಟದ ಸಮಸ್ಯೆ, ಕಣ್ಣುರಿ ಮತ್ತು ತ್ವಚೆಗೆ ಹಾನಿ ಮಾಡುವಂತಹ ಅನೇಕ ಅನಾರೋಗ್ಯಕರ ಸಮಸ್ಯೆಗೆ ಕಾರಣವಾಗುತ್ತದೆ.

ಅಕ್ಟೋಬರ್​ 21ರಂದು ಲಾಹೋರ್​ ಜಗತ್ತಿನ ಅತ್ಯಂತ ಮಲಿನ ನಗರ ಎಂದು ಘೋಷಿಸಲಾಗಿದೆ. ಇದರ ನಿರ್ವಹಣೆಗೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ಕೃತಕ ಮಳೆಯ ಮೂಲಕ ಮಾಲಿನ್ಯ ತಗ್ಗಿಸುವ ಪ್ರಯತ್ನ ನಡೆಸಲಾಗುತ್ತದೆ ಎಂದು ಪಂಜಾಬ್​​ ಮಾಹಿತಿ ಸಚಿವ ಅಜ್ಮಾ ಬೊಖಾರಿ ಹೇಳಿದ್ದಾರೆ.

ಮಾಲಿನ್ಯ ಪೀಡಿತ ಪ್ರದೇಶಗಳಲ್ಲಿ ಮಾಲಿನ್ಯ ನಿಯಂತ್ರಣ ಪಡೆಯನ್ನು ಆರಂಭಿಸಲಾಗುವುದು ಎಂದು ಪಂಜಾಬ್​ ಸರ್ಕಾರದ ಸಿಎಂ ಮರ್ಯಾಮ್​ ನವಾಜ್​ ತಿಳಿಸಿದ್ದಾರೆ.

ಈ ಪಡೆ ಇಲ್ಲಿನ ಜನರಿಗೆ ಕೃಷಿ ತ್ಯಾಜ್ಯ ಸುಡುವಿಕೆಯ ಅಪಾಯದ ಕುರಿತು ಮಾಹಿತಿ ನೀಡಲಿದ್ದು, ಸೂಪರ್​ ಸೀಡರ್​ಗಳಿಗೆ ಮತ್ತು ತ್ಯಾಜ್ಯ ಸುಡುವಿಕೆ ಪರ್ಯಾಯ ವಿಧಾನವನ್ನು ಬಳಸಲಿದೆ.

8 ರಿಂದ 10 ವರ್ಷದಲ್ಲಿ ಮಾಲಿನ್ಯ ನಿರ್ವಹಣೆಗೆ ಸಕಾರಾತ್ಮಕ ಪರಿಣಾಮಕಾರಿ ಕ್ರಮಗಳನ್ನು ನಡೆಸಲಾಗುವುದು. ಪ್ರಾಂತ್ಯದಲ್ಲಿನ ಪರಿಸರ ಸಂರಕ್ಷಣೆ ಪಠ್ಯಕ್ರಮ ಕುರಿತು ಪಠ್ಯಕ್ರಮದಲ್ಲೂ ಸೇರಿಸಲಾಗಿದೆ. ಜೊತೆಗೆ ಬೆಳೆಗಳ ಸುಡುವಿಕೆಯನ್ನು ತಪ್ಪಿಸುವಂತೆ ರೈತರಿಗೆ ಮನವಿ ಮಾಡಲಾಗಿದೆ. ಕಾರಣ ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪಂಜಾಬ್​ ಹಿರಿಯ ಸಚಿವೆ ಮರಿಯಂ ಔರಂಗಜೇಬ್​ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲೂ ಕೂಡ ಭಾರತದ ಪ್ರಾಂತ್ಯಗಳೊಂದಿಗೆ ಎದುರಾಗುತ್ತಿರುವ ಈ ಮಾಲಿನ್ಯ ಸಮಸ್ಯೆ ವಿರುದ್ಧ ಹೋರಾಡಲು ಹವಾಮಾನ ರಾಜತಾಂತ್ರಿಕತೆಗೆ ಕರೆ ನೀಡಲಾಗಿತ್ತು. ಎರಡು ದೇಶಗಳಲ್ಲಿಯೂ ಈ ಮಾಲಿನ್ಯ ಸಮಸ್ಯೆ ಎದುರಿಸಲು ಜಂಟಿ ಪ್ರಯತ್ನ ನಡೆಸಲಾಗುವುದು. ಭಾರತದ ಪಂಜಾಬ್​​ ಕೃಷಿ ತ್ಯಾಜ್ಯ ಸುಡುವಿಕೆ ಇಲ್ಲಿನ ಮಾಲಿನ್ಯದ ಮೇಲೂ ಪರಿಣಾಮವನ್ನು ಹೊಂದಿದೆ. ಕಾರಣ ಗಾಳಿಯು ಈ ದಿಕ್ಕಿನೆಡೆಗೆ ಸಾಗುತ್ತದೆ ಎಂದಿದ್ದರು.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ವದಂತಿ: ಪಾಕಿಸ್ತಾನದಾದ್ಯಂತ ಭಾರಿ ಹಿಂಸಾತ್ಮಕ ಪ್ರತಿಭಟನೆ

ABOUT THE AUTHOR

...view details