ಕರ್ನಾಟಕ

karnataka

ETV Bharat / international

ಬ್ರಿಕ್ಸ್​​ ಭಾಗವಾಗಲು ಅನೇಕ ರಾಜ್ಯಗಳು ಆಸಕ್ತಿ ಹೊಂದಿವೆ; ಅಮೆರಿಕದೊಂದಿಗೆ ಮಾತುಕತೆಗೆ ಸಿದ್ಧ ಎಂದ ರಷ್ಯಾ ಅಧ್ಯಕ್ಷ ಪುಟಿನ್​ - MANY STATES SHOW INTEREST IN BRICS

ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆಗೆ ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಹೇಳಿದ್ದಾರೆ.

many-states-show-interest-in-brics-says-russian-president-putin
ಪತ್ರಿಕಾಗೋಷ್ಟಿಯಲ್ಲಿ ಪುಟಿನ್​ (ANI)

By ANI

Published : 11 hours ago

ಮಾಸ್ಕೋ (ರಷ್ಯಾ):ಆರ್ಥಿಕ ಬೆಳವಣಿಗೆ ಮತ್ತು ವಿಶ್ವ ಆರ್ಥಿಕತೆ ರಚನೆ ರೂಪಿಸುವಲ್ಲಿ ಬ್ರಿಕ್ಸ್​ ದೇಶಗಳು ಹೊಸ ಸಾಧನವನ್ನು ನಿರಂತರವಾಗಿ ಸೃಷ್ಟಿಸುವ ಕೆಲಸ ಮಾಡುತ್ತವೆ. ಇದು ದೀರ್ಘಕಾಲದ ಮಾನವೀಯತೆ ಪ್ರಗತಿಗೆ ಕೊಡುಗೆ ನೀಡುವ ಜೊತೆಗೆ ಜಾಗತಿಕ ಚಳವಳಿಗಳಲ್ಲಿ ಗುಂಪಿನ ದೇಶಗಳ ಸ್ಥಾನವನ್ನು ಬಲಪಡಿಸುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಘೋಷಿಸಿದ್ದಾರೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸದಸ್ಯ ರಾಷ್ಟ್ರಗಳ ಹಿತಾಸಕ್ತಿಗಳಿಗಾಗಿ ಸಂಘವು ಕಾರ್ಯನಿರ್ವಹಿಸುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಬ್ರಿಕ್ಸ್​ ಒಕ್ಕೂಟ ವೇಗವಾಗಿ ಬೆಳೆಯುತ್ತಿದ್ದು, ಅನೇಕ ರಾಷ್ಟ್ರಗಳು ಬ್ರಿಕ್ಸ್​ ಕುರಿತು ಆಸಕ್ತಿ ತೋರಿಸುತ್ತಿವೆ. ಕಾರಣ ಇದು ಪರಸ್ಪರ ಹಿತಾಸಕ್ತಿ ಮತ್ತು ಗೌರವದ ನಿರ್ಮಾಣಕ್ಕೆ ಕೆಲಸ ಮಾಡಲಿದೆ. ಎಲ್ಲ ವಿಷಯಗಳನ್ನು ಒಮ್ಮತದಿಂದ ಅಳವಡಿಸಿಕೊಳ್ಳಲಾಗುತ್ತದೆ, ಒಕ್ಕೂಟದ ಬೆಳವಣಿಗೆಗೆ ಇದು ಮುಖ್ಯವಾಗಿದೆ. ಇಲ್ಲಿ ಚಿಕ್ಕ- ದೊಡ್ಡ, ಹೆಚ್ಚು ಅಭಿವೃದ್ಧಿ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಎಂಬ ಭೇದ ಭಾವಗಳಿಲ್ಲ. ಇಲ್ಲಿ ಪರಸ್ಪರ ಹಿತಾಸಕ್ತಿ ಬದಲು ಅಭಿವೃದ್ಧಿಯ ಹಿತಾಸಕ್ತಿ ಇದೆ ಎಂದರು.

ಹೆಚ್ಚು ವಿಶ್ವ ನಾಯಕರನ್ನು ಸೆಳೆಯುವಲ್ಲಿ ಬ್ರಿಕ್ಸ್​ ಯಶಸ್ವಿ:ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯು ಗಮನಾರ್ಹ ಸಂಖ್ಯೆಯ ವಿಶ್ವ ನಾಯಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಟಾಟರ್ಸ್ತಾನ್ ರಾಜಧಾನಿ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಅಭಿವೃದ್ಧಿ ಕಂಡಿದ್ದು, ಯುರೋಪ್​ನ ಉತ್ತಮ ನಗರಗಳಲ್ಲಿ ಒಂದಾಗಿದೆ ಎಂದರು. ಇದೆ ವೇಳೆ,. ರಷ್ಯಾ ಮತ್ತು ಚೀನಾದ ಹಿತಾಸಕ್ತಿ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪರಸ್ಪರ ನಂಬಿಕೆ ಆಧಾರದ ಮೇಲೆ ಕಳೆದೊಂದು ದಶಕದಿಂದ ನಾವು ಉನ್ನತ ಹಂತ ತಲುಪಿದ್ದೇವೆ ಎಂದು ಒತ್ತಿ ಹೇಳಿದರು ಎಂದು ಟಿವಿ ಬ್ರಿಕ್ಸ್​ ವರದಿ ಮಾಡಿದೆ.

ಆರ್ಥಿಕ ಸಹಕಾರ ಕುರಿತು ಉತ್ತರಿಸಿದ ಅವರು, ವಿವಿಧ ಅಂದಾಜಿನ ಪ್ರಕಾರ ದೇಶಗಳ ವಹಿವಾಟು 220 ರಿಂದ 240 ಬಿಲಿಯನ್​ ಡಾಲರ್​ ಇರಲಿದೆ. ಹೆಚ್ಚುವರಿಯಾಗಿ, 600ಕ್ಕೂ ಹೆಚ್ಚು ಜಂಟಿ ಹೂಡಿಕೆಯನ್ನು ಅಳವಡಿಸಲಾಗುವುದು ಎಂದರು.

ಮಾನವೀಯತೆಯೇ ಈ ಒಕ್ಕೂಟದ ಮೂಲ ಮಂತ್ರ:ಅಂತಿಮವಾಗಿ ನನ್ನ ಅಭಿಪ್ರಾಯದಲ್ಲಿ ಬಹಳ ಮುಖ್ಯ ಅಂಶ ಎಂದರೆ, ಅದು ಮಾನವೀಯತೆ ಭಾಗ. ನಾವು ಅನೇಕ ವರ್ಷಗಳನ್ನು ಹಿಡಿದುಟ್ಟುಕೊಂಡಿದ್ದೇವೆ. ಸಂಸ್ಕೃತಿಯ ವರ್ಷ, ಯುವ ವಿನಿಮಯದ ವರ್ಷ ಜನರಿಗೆ ಬಹಳ ಮುಖ್ಯವಾಗಿದೆ. ಇದು ಆರ್ಥಿಕ ಸಂಬಂಧಗಳು ಮತ್ತು ರಾಜಕೀಯ ಸಂವಹನಗಳ ಅಭಿವೃದ್ಧಿಗೆ ಆಧಾರವಾಗಿದೆ.

ಲ್ಯಾಟಿನ್​ ಅಮೆರಿಕ ಇಲ್ಲಿ ಸದಾ ಪ್ರತಿನಿಧಿಸುತ್ತದೆ. ಕಾರಣ ಕ್ಯೂಬಾ, ವೆನಿಜುವೆಲಾ ಮತ್ತು ಇತರ ಪ್ರದೇಶಗಳು ರಷ್ಯಾದ ಜೊತೆಗೆ ಸ್ನೇಹ ಸಂಬಂಧವನ್ನು ಹೊಂದಿದೆ ಎಂದರು.

ಟ್ರಂಪ್​ ಜತೆ ಮಾತುಕತೆಗೆ ಸಿದ್ಧ ಎಂದ ಪುಟಿನ್​: ಅಮೆರಿಕ ಅಧ್ಯಕ್ಷರಾಗಿ ಚುನಾಯಿತ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆಗೆ ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಹೇಳಿದ್ದಾರೆ.

ವ್ಲಾಡಿಮಿರ್ ಪುಟಿನ್ ಅವರೊಂದಿಗೆ ವರ್ಷದ ಫಲಿತಾಂಶಗಳು ಎಂಬ ಕಾರ್ಯಕ್ರಮದ ಮೂಲಕ ಪತ್ರಿಕಾ ಗೋಷ್ಟಿ ನಡೆಸಲಾಗಿದ್ದು, ದೇಶೀಯ ನೀತಿ ಮತ್ತು ಸಾಮಾಜಿಕ ಕಾರ್ಯಸೂಚಿಯಿಂದ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ವಿದೇಶಿ ಆರ್ಥಿಕ ಚಟುವಟಿಕೆಯವರೆಗಿನ ವಿಷಯಗಳ ಕುರಿತು ಪುಟಿನ್​ ಉತ್ತರಿಸಿದರು. ಈ ಕಾರ್ಯಕ್ರಮದಲ್ಲಿ ಪುಟಿನ್​ ಎದುರು 76 ಪ್ರಶ್ನೆಗಳನ್ನು ಕೇಳಲಾಯಿತು.

ಇದನ್ನೂ ಓದಿ :ಕೆನಡಿಯನ್ನರು ಕೆನಡಾ ಅಮೆರಿಕದ 51 ನೇ ರಾಜ್ಯವಾಗಬೇಕೆಂದು ಬಯಸುತ್ತಾರೆ: ಡೊನಾಲ್ಡ್ ಟ್ರಂಪ್

ABOUT THE AUTHOR

...view details