ಕರ್ನಾಟಕ

karnataka

ETV Bharat / international

ಕೆನಡಿಯನ್ನರು ಕೆನಡಾ ಅಮೆರಿಕದ 51 ನೇ ರಾಜ್ಯವಾಗಬೇಕೆಂದು ಬಯಸುತ್ತಾರೆ: ಡೊನಾಲ್ಡ್ ಟ್ರಂಪ್ - TRUMP TOOK A JIBE AT CANADA

ಕೆನಡಾದ ಪ್ರಧಾನಿ ವಿರುದ್ಧ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಟೀಕಾಪ್ರಹಾರ ನಡೆಸಿದ್ದಾರೆ. ಇದೇ ವೇಳೆ ಬಹುತೇಕ ಕೆನಡಿಯನ್ನರು ಕೆನಡಾ ಅಮೆರಿಕದ 51 ರಾಜ್ಯವಾಗಬೇಕೆಂದು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

Many Canadians want Canada to become 51st State
ಕೆನಡಿಯನ್ನರು ಕೆನಡಾ 51 ನೇ ರಾಜ್ಯವಾಗಬೇಕೆಂದು ಬಯಸುತ್ತಾರೆ: ಇದು ಉತ್ತಮ ಆಲೋಚನೆ ಎಂದು ಭಾವಿಸುತ್ತೇನೆ : ಡೊನಾಲ್ಡ್ ಟ್ರಂಪ್ (ANI)

By ANI

Published : Dec 19, 2024, 8:01 AM IST

ವಾಷಿಂಗ್ಟನ್ ಡಿಸಿ: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾವನ್ನು ಗೇಲಿ ಮಾಡಿದ್ದಾರೆ. ಕೆನಡಾ ಅಮೆರಿಕದ 51 ನೇ ರಾಜ್ಯವಾಗುವುದನ್ನು ಅನೇಕ ಕೆನಡಿಯನ್ನರು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಹೀಗೆನಾದರೂ ಆದರೆ, ಕಡಿಮೆ ತೆರಿಗೆ ಮತ್ತು ಮಿಲಿಟರಿ ರಕ್ಷಣೆಯ ಮೂಲಕ ಕೆನಡಿಯನ್ನರಿಗೆ ಪ್ರಯೋಜನ ನೀಡುತ್ತದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಈ ಕಲ್ಪನೆಯನ್ನು ಶ್ರೇಷ್ಠ ಎಂದು ವಿವರಿಸಿದ ಅವರು, ಅನೇಕ ಕೆನಡಿಯನ್ನರು ಈ ಪ್ರಸ್ತಾಪವನ್ನು ಬೆಂಬಲಿಸುತ್ತಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಟ್ರೂತ್ ಸೋಷಿಯಲ್‌ನಲ್ಲಿ ತಮ್ಮ ಪೋಸ್ಟ್‌ನಲ್ಲಿ ಟ್ರಂಪ್ ಹೀಗೆ ಬರೆದಿದ್ದಾರೆ, ನಾವು ಕೆನಡಾಕ್ಕೆ ವರ್ಷಕ್ಕೆ $100,000,000 ಕ್ಕಿಂತ ಹೆಚ್ಚು ಸಬ್ಸಿಡಿಯನ್ನು ಏಕೆ ನೀಡುತ್ತೇವೆ ಎಂದು ಯಾರೂ ಉತ್ತರಿಸುವುದಿಲ್ಲ? ಇದು ಅರ್ಥ ಹೀನ ಎಂದಿದ್ದಾರೆ.

ಕೆನಡಾ ಅಮೆರಿಕದ 51 ನೇ ರಾಜ್ಯ!!!?:ಅನೇಕ ಕೆನಡಿಯನ್ನರು ಕೆನಡಾ ಅಮೆರಿಕದ 51 ನೇ ರಾಜ್ಯವಾಗಬೇಕೆಂದು ಬಯಸುತ್ತಾರೆ. ಅವರು ತೆರಿಗೆಗಳು ಮತ್ತು ಮಿಲಿಟರಿ ರಕ್ಷಣೆಯ ಮೇಲೆ ಬೃಹತ್ ಪ್ರಮಾಣದಲ್ಲಿ ಉಳಿತಾಯ ಮಾಡುತ್ತಾರೆ. ಇದು ಉತ್ತಮ ಉಪಾಯ ಎಂದು ನಾನು ಭಾವಿಸುತ್ತೇನೆ. 51 ನೇ ರಾಜ್ಯ !!! ಎಂದು ಪೋಸ್ಟ್​ ನಲ್ಲಿ ಸೇರಿಸಲಾಗಿದೆ. ಕೆನಡಾದ ಹಣಕಾಸು ಸಚಿವ ಮತ್ತು ಉಪ ಪ್ರಧಾನ ಮಂತ್ರಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರ ರಾಜೀನಾಮೆ ನಂತರ ಕೆನಡಾದ ಆಡಳಿತ ಪಕ್ಷದಲ್ಲಿ ಆಗಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟ್ರಂಪ್​ ಈ ಟೀಕಾ ಪ್ರಹಾರ ನಡೆಸಿದ್ದಾರೆ.

ಟ್ರುಡೋ ವಿರುದ್ಧ ಟ್ರಂಪ್​ ವಾಗ್ದಾಳಿ:ಅಧ್ಯಕ್ಷರಾಗಿ ಚುನಾಯಿತರಾಗಿರುವ ಟ್ರಂಪ್​, ಕೆನಡಾದ ಪಿಎಂ ಜಸ್ಟಿನ್ ಟ್ರುಡೊ ಅವರನ್ನು ಕೆನಡಾದ ಗವರ್ನರ್ ಎಂದು ಕರೆದಿದ್ದಾರೆ. ಫ್ರೀಲ್ಯಾಂಡ್ ಅವರ ನಡವಳಿಕೆಯು ಕೆನಡಾದ ನಾಗರಿಕರ ಪರ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲಕರವಲ್ಲ ಎಂದು ಟೀಕಿಸಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿರುವ ಟ್ರೂತ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, "ಹಣಕಾಸು ಸಚಿವರು ರಾಜೀನಾಮೆ ನೀಡುತ್ತಿದ್ದಂತೆ ಅಥವಾ ಅವರನ್ನು ಗವರ್ನರ್ ಜಸ್ಟಿನ್ ಟ್ರುಡೊ ವಜಾಗೊಳಿಸಿದ್ದರಿಂದ ಕೆನಡಾ ದಿಗ್ಭ್ರಮೆಗೊಂಡಿದೆ. ಟ್ರುಡೊ ನಡವಳಿಕೆ ಸಂಪೂರ್ಣವಾಗಿ ವಿಷಕಾರಿಯಾಗಿದೆ ಮತ್ತು ಇದು ಕೆನಡಾದ ನಾಗರಿಕರಿಗೆ ಯಾವುದೇ ಅನುಕೂಲವನ್ನು ಮಾಡಿಕೊಡುವುದಿಲ್ಲಎಂದು ಹೇಳಿದ್ದಾರೆ.

ಗಮನಿಸಬೇಕಾದ ಅಂಶ ಎಂದರೆ, ಈ ತಿಂಗಳ ಆರಂಭದಲ್ಲಿ ಟ್ರಂಪ್ ಅಮೆರಿಕದ ಕೈಗಾರಿಕೆಗಳನ್ನು ರಕ್ಷಿಸುವ ಮತ್ತು ಡಿ-ಡಾಲರೈಸೇಶನ್ ಕಾಳಜಿಗಳನ್ನು ಪರಿಹರಿಸುವ ಗುರಿ ಹೊಂದಿದ್ದು, ಅವರ ಆರ್ಥಿಕ ನೀತಿಗಳ ಭಾಗವಾಗಿ ಸುಂಕಗಳನ್ನು ವಿಧಿಸುವುದಾಗಿ ಘೋಷಿಸಿದ್ದರು.

ಪ್ರಸ್ತಾವಿತ ಕ್ರಮಗಳ ಅನ್ವಯ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಹೆಚ್ಚುವರಿ 10 ಪ್ರತಿಶತ ಸುಂಕ ಮತ್ತು ಕೆನಡಾ ಮತ್ತು ಮೆಕ್ಸಿಕೊದಲ್ಲಿ 25 ಪ್ರತಿಶತ ಸುಂಕಗಳನ್ನು ವಿಧಿಸುವುದಾಗಿ ಅವರು ಹೇಳಿದ್ದರು. ಟ್ರಂಪ್​ ಅವರ ಈ ನೀತಿಗಳು ವ್ಯಾಪಾರದ ಹರಿವಿಗೆ ಅಡ್ಡಿಪಡಿಸಬಹುದು

ಇದನ್ನು ಓದಿ:2024 ಹಿನ್ನೋಟ: ವಿಶ್ವದ ಗಮನ ಸೆಳೆದ ಚುನಾವಣೆಗಳತ್ತ ಒಂದು ನೋಟ

ABOUT THE AUTHOR

...view details