ಕರ್ನಾಟಕ

karnataka

By ETV Bharat Karnataka Team

Published : 15 hours ago

ETV Bharat / international

ಫುಕುಶಿಮಾ ಸ್ಥಾವರದಿಂದ 9ನೇ ಸುತ್ತಿನ ಪರಮಾಣು ಕಲುಷಿತ ನೀರು ಬಿಡುಗಡೆ ಮಾಡಲಾರಂಭಿಸಿದ ಜಪಾನ್ - Fukushima nuclear wastewater

ಜಪಾನ್ ಫುಕುಶಿಮಾ ಅಣು ಸ್ಥಾವರದಿಂದ ಸಮುದ್ರಕ್ಕೆ ಮತ್ತೆ ಕಲುಷಿತ ನೀರು ಬಿಡುಗಡೆ ಮಾಡಲು ಆರಂಭಿಸಿದೆ.

ಫುಕುಶಿಮಾ ಪರಮಾಣು ಸ್ಥಾವರ
ಫುಕುಶಿಮಾ ಪರಮಾಣು ಸ್ಥಾವರ (IANS)

ಟೋಕಿಯೊ:ದೇಶ ಮತ್ತು ವಿದೇಶಗಳಲ್ಲಿ ನಿರಂತರ ವಿರೋಧದ ನಡುವೆಯೂ ಜಪಾನ್ ಗುರುವಾರ ಫುಕುಶಿಮಾ ಡೈಚಿ ಅಣು ವಿದ್ಯುತ್ ಸ್ಥಾವರದಿಂದ ಒಂಬತ್ತನೇ ಹಂತದ ಪರಮಾಣು ಕಲುಷಿತ ತ್ಯಾಜ್ಯ ನೀರನ್ನು ಪೆಸಿಫಿಕ್ ಮಹಾಸಾಗರಕ್ಕೆ ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಈ ಹಿಂದೆ ಮಾಡಿದಂತೆ ಅಕ್ಟೋಬರ್ 14 ರವರೆಗೆ ಫುಕುಶಿಮಾ ಪ್ರಿಫೆಕ್ಚರ್ ಕರಾವಳಿಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಸುಮಾರು 7,800 ಟನ್ ತ್ಯಾಜ್ಯ ನೀರನ್ನು ನೀರೊಳಗಿನ ಸುರಂಗದ ಮೂಲಕ ಹೊರಹಾಕಲಾಗುವುದು.

ಮಾರ್ಚ್ 11, 2011 ರಂದು 9.0 ತೀವ್ರತೆಯ ಭೂಕಂಪ ಮತ್ತು ನಂತರದ ಸುನಾಮಿಯಿಂದ ಹಾನಿಗೊಳಗಾದ ಫುಕುಶಿಮಾ ಪರಮಾಣು ಸ್ಥಾವರಕ್ಕೆ ಹಾನಿಯಾದ ನಂತರ ವಿಕಿರಣವನ್ನು ಬಿಡುಗಡೆ ಮಾಡಲಾರಂಭಿಸಿತ್ತು. ಇದರ ಪರಿಣಾಮವಾಗಿ ಲೆವೆಲ್ -7 ಪರಮಾಣು ಅಪಘಾತ ಸಂಭವಿಸಿತ್ತು. ಇದು ಅಂತಾರಾಷ್ಟ್ರೀಯ ಪರಮಾಣು ಮತ್ತು ವಿಕಿರಣಶಾಸ್ತ್ರೀಯ ಘಟನೆ ಮಾಪಕದಲ್ಲಿ ಅತ್ಯಧಿಕವಾಗಿದೆ. ಇದಲ್ಲದೇ ಸುನಾಮಿಯಿಂದಾಗಿ 18 ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.

ಈ ಸ್ಥಾವರವು ರಿಯಾಕ್ಟರ್ ಕಟ್ಟಡಗಳಲ್ಲಿ ಪರಮಾಣು ಇಂಧನವನ್ನು ತಂಪಾಗಿಸುವ ವಿಕಿರಣಶೀಲ ವಸ್ತುಗಳಿಂದ ಕಲುಷಿತವಾದ ಭಾರಿ ಪ್ರಮಾಣದ ನೀರನ್ನು ಉತ್ಪಾದಿಸುತ್ತಿದೆ. ಕಲುಷಿತ ನೀರನ್ನು ಈಗ ಪರಮಾಣು ಸ್ಥಾವರದ ಟ್ಯಾಂಕ್ ಗಳಲ್ಲಿ ಸಂಗ್ರಹಿಸಲಾಗುತ್ತಿದೆ.

ಸ್ಥಳೀಯ ಮೀನುಗಾರರು, ನಿವಾಸಿಗಳು ಮತ್ತು ಅಂತಾರಾಷ್ಟ್ರೀಯ ಸಮುದಾಯದ ವಿರೋಧದ ಹೊರತಾಗಿಯೂ, ಫುಕುಶಿಮಾ ಪರಮಾಣು-ಕಲುಷಿತ ನೀರನ್ನು ಆಗಸ್ಟ್ 2023 ರಿಂದ ಸಮುದ್ರಕ್ಕೆ ಬಿಡಲಾಗುತ್ತಿದೆ. 2024 ರ ಆರ್ಥಿಕ ವರ್ಷದಲ್ಲಿ, ಟೆಪ್ಕೊ ಏಳು ಸುತ್ತುಗಳಲ್ಲಿ ಒಟ್ಟು 54,600 ಟನ್ ಕಲುಷಿತ ನೀರನ್ನು ಹೊರಹಾಕಲು ಯೋಜಿಸಿದೆ. ಇದರಲ್ಲಿ ಸುಮಾರು 14 ಟ್ರಿಲಿಯನ್ ಬೆಕ್ವೆರೆಲ್ ಟ್ರೈಟಿಯಂ ಇದೆ.

ಚೀನಾ ಮತ್ತು ಜಪಾನ್​ನ ಪರಮಾಣು ಪ್ರಾಧಿಕಾರಗಳು ನೀರು ಬಿಡುಗಡೆಯ ಬಗ್ಗೆ ಇತ್ತೀಚೆಗೆ ಒಪ್ಪಂದಕ್ಕೆ ಬಂದಿದ್ದರೂ, ನೀರು ಬಿಡುಗಡೆಯನ್ನು ಪ್ರಾರಂಭಿಸುವ ಜಪಾನ್​ನ ಏಕಪಕ್ಷೀಯ ಕ್ರಮವನ್ನು ತಾನು ಬಲವಾಗಿ ವಿರೋಧಿಸುವುದಾಗಿ ಚೀನಾ ಪುನರುಚ್ಚರಿಸಿದೆ.

ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ತನ್ನ ಬಾಧ್ಯತೆಗಳನ್ನು ಮತ್ತು ಸುರಕ್ಷತಾ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನಿಭಾಯಿಸುವಂತೆ ಜಪಾನ್ ಅನ್ನು ಒತ್ತಾಯಿಸುವುದು ಜಪಾನ್​ನೊಂದಿಗೆ ಮಾಡಿಕೊಳ್ಳಲಾದ ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ. ಪರಿಸರ ಮತ್ತು ಮಾನವ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವಾಗದಂತೆ ಮತ್ತು ವಿಸರ್ಜನೆಯಿಂದ ಉಂಟಾಗಬಹುದಾದ ಸಂಭಾವ್ಯ ಅಪಾಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದು ತಈ ಒಪ್ಪಂದದ ಇತರ ಗುರಿಯಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಹೇಳಿದ್ದಾರೆ.

ಇದನ್ನೂ ಓದಿ : ಲೆಬನಾನ್​ ಮೇಲೆ ಮುಂದುವರೆದ ದಾಳಿ, ಮತ್ತೆ 72 ಜನ ಸಾವು: ಕದನವಿರಾಮ ಇಲ್ಲವೆಂದ ಇಸ್ರೇಲ್, 620ಕ್ಕೇರಿದ ಸಾವಿನ ಸಂಖ್ಯೆ - ISRAEL ATTACKS LEBANON

ABOUT THE AUTHOR

...view details