ಕರ್ನಾಟಕ

karnataka

ETV Bharat / international

ಡೊನಾಲ್ಡ್ ಟ್ರಂಪ್​ಗೆ ಅಭಿನಂದನೆ ಸಲ್ಲಿಸಿದ ಜಾಗತಿಕ ಭಾರತೀಯ ಸಮುದಾಯ ಸಂಸ್ಥೆ- INDIASPORA - INDIASPORA CONGRATULATES TRUMP

ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡೊನಾಲ್ಡ್​ ಟ್ರಂಪ್​ ಅವರಿಗೆ ಇಂಡಿಯಾಸ್ಪೊರಾ ಶುಭಾಶಯ ಕೋರಿದೆ.

trump
ಡೊನಾಲ್ಡ್ ಟ್ರಂಪ್ (Getty images)

By ETV Bharat Karnataka Team

Published : Jan 20, 2025, 10:59 AM IST

ವಾಷಿಂಗ್ಟನ್ :ಅಮೆರಿಕದ 47ನೇ ಅಧ್ಯಕ್ಷರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡೊನಾಲ್ಡ್ ಟ್ರಂಪ್ ಅವರನ್ನು ಇಂಡಿಯಾಸ್ಪೊರಾ (ಜಾಗತಿಕ ಭಾರತೀಯ ಸಮುದಾಯದ ಲಾಭೋದ್ದೇಶವಿಲ್ಲದ ಸಂಸ್ಥೆ) ಅಭಿನಂದಿಸಿದೆ.

"ಇಂಡಿಯಾಸ್ಪೋರಾ ಮತ್ತು ಭಾರತೀಯ - ಅಮೆರಿಕನ್ ಸಮುದಾಯದ ಪರವಾಗಿ, ನಾನು ಯುನೈಟೆಡ್ ಸ್ಟೇಟ್ಸ್​ನ 47 ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸಲು ಬಯಸುತ್ತೇನೆ. ಅಮೆರಿಕದಲ್ಲಿನ ಹೊಸ ರಾಜಕೀಯ ವಾತಾವರಣದ ನಡುವೆ ಭಾರತ - ಅಮೆರಿಕ ಸಂಬಂಧಗಳು ಪ್ರವರ್ಧಮಾನಕ್ಕೆ ಬರುತ್ತವೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಇಂಡಿಯಾಸ್ಪೋರಾದ ಅಧ್ಯಕ್ಷ ಎಂ. ಆರ್ ರಂಗಸ್ವಾಮಿ ಹೇಳಿದ್ದಾರೆ.

ಅಧ್ಯಕ್ಷ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಎರಡೂ ಕಡೆಯ ಹಿರಿಯ ಸರ್ಕಾರಿ ಅಧಿಕಾರಿಗಳು ಬಲವಾದ ಸಂಬಂಧಗಳನ್ನು ಹೊಂದಿದ್ದರು. ಈ ಪ್ರಮುಖ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಅಮೆರಿಕದಲ್ಲಿ ಬಲವಾದ ಉಭಯಪಕ್ಷೀಯ ಬೆಂಬಲವಿದೆ ಎಂದು ರಂಗಸ್ವಾಮಿ ಹೇಳಿದರು.

ಟ್ರಂಪ್ ತಮ್ಮ ಅಧಿಕಾರದ ಅವಧಿಯಲ್ಲಿ ಹಲವಾರು ಭಾರತೀಯ - ಅಮೆರಿಕನ್ನರನ್ನು ನಾಗರಿಕ ಹಕ್ಕುಗಳು, ರಾಷ್ಟ್ರೀಯ ಭದ್ರತೆ ಮತ್ತು ತಂತ್ರಜ್ಞಾನದಂತಹ ವಿವಿಧ ಕ್ಷೇತ್ರಗಳಲ್ಲಿ ನೇಮಕ ಮಾಡಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಹರ್ಮೀತ್ ಕೌರ್ ಧಿಲ್ಲೋನ್, ವಿವೇಕ್ ರಾಮಸ್ವಾಮಿ, ಕಾಶ್ ಪಟೇಲ್, ಜೇ ಭಟ್ಟಾಚಾರ್ಯ ಮತ್ತು ಶ್ರೀರಾಮ ಕೃಷ್ಣನ್.

ಪಕ್ಷಾತೀತ ರೀತಿಯಲ್ಲಿ ಭಾರತೀಯ ವಲಸಿಗರ, ನಾಗರಿಕ ಮತ್ತು ರಾಜಕೀಯ ಸಂಬಂಧವನ್ನ ಹೆಚ್ಚಿಸುವುದು ಹಾಗೂ ಅಮೆರಿಕ - ಭಾರತ ಸಂಬಂಧಗಳನ್ನು ಬಲಪಡಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಇಂಡಿಯಾಸ್ಪೋರಾದ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್ ಜೋಶಿಪುರ ಹೇಳಿದ್ದಾರೆ.

ಪ್ರತಿ ಅಮೆರಿಕನ್ ಆಡಳಿತವು ಭಾರತೀಯ ಮೂಲದ ಅಮೆರಿಕನ್ ಪ್ರಜೆಯನ್ನ ಸರ್ಕಾರದಲ್ಲಿ ಹಿರಿಯ ಸ್ಥಾನದಲ್ಲಿ ಇರಿಸುವುದನ್ನು ನೋಡುವುದು ಹರ್ಷದಾಯಕವಾಗಿದೆ. ಟ್ರಂಪ್ ಆಡಳಿತವು ಈ ಪ್ರವೃತ್ತಿಯನ್ನು ಮುಂದುವರೆಸಿದೆ ಎಂದು ಅವರು ಇದೇ ವೇಳೆ ಸಂತಸ ವ್ಯಕ್ತಪಡಿಸಿದ್ದಾರೆ.(PTI)

ಇದನ್ನೂ ಓದಿ :ಮೊದಲ ದಿನವೇ ಚುನಾವಣೆ ಭರವಸೆಗಳನ್ನು ಈಡೇರಿಸಲು ಟ್ರಂಪ್​ ಸನ್ನದ್ಧ: 100 ಕಾರ್ಯಾದೇಶಗಳಿಗೆ ಸಹಿ ಹಾಕಲು ಪ್ಲಾನ್​ - TRUMP FIRST DAY SIGNATURES PLAN

ABOUT THE AUTHOR

...view details