ಟೆಲ್ ಅವೀವ್ (ಇಸ್ರೇಲ್): ಪಾಲೆಸ್ತೇನಿಯನ್ ಇಸ್ಲಾಮಿಕ್ ಜಿಹಾದ್ ನಾಯಕನನ್ನು ವೈಮಾನಿಕ ದಾಳಿಯಲ್ಲಿ ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಪಾಲೇಸ್ತೇನಿಯನ್ ಇಸ್ಲಾಮಿಕ್ ಜಿಹಾದ್ನ ಜೆನಿನ್ ಬ್ರಿಗೇಡ್ನ ಕಮಾಂಡರ್ ಅಸ್ಲಾಂ ಹಮೈಸಾ ಎಂದು ಪತ್ತೆ ಮಾಡಲಾಗಿದೆ. ಶಿನ್ ಬೆಟ್ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಅವರು ಇಸ್ಲಾಮಿಕ್ ಜಿಹಾದ್ ನಾಯಕ, ಕಟ್ಟಡದಲ್ಲಿ ಅವಿತು ಕುಳಿತಿದ್ದಾಗ ಆತನ ಮೇಲೆ ದಾಳಿ ನಡೆಸಲಾಗಿದೆ ಎಂದು ಐಡಿಎಫ್ ತಿಳಿಸಿದೆ.
ವೆಸ್ಟ್ ಬ್ಯಾಂಕ್ನ ಹರ್ಮೆಶ್ ವಸಾಹತು ಪ್ರದೇಶದಲ್ಲಿ ಯಹೂದಿಗಳ ಹತ್ಯೆಯ ದಾಳಿಯ ಪ್ರಮುಖ ಕಾರಣ ಪಾಲೆಸ್ತೇನಿಯನ್ ಇಸ್ಲಾಮಿಕ್ ಜಿಹಾದ್ ನಾಯಕನಾಗಿದ್ದ ಎಂದು ಐಡಿಎಫ್ ಮಾಹಿತಿ ನೀಡಿದೆ.