Cloud Weight Elephant :ನಾವು ಆಕಾಶದತ್ತ ಮುಖ ಮಾಡಿ ನೋಡಿದರೆ ಚಲಿಸುವ ಸುಂದರ ಮೇಘಗಳು ನಮ್ಮನ್ನು ಸ್ವಲ್ಪ ಸಮಯದವರೆಗೆ ಕಟ್ಟಿ ಹಾಕುತ್ತವೆ. ಹತ್ತಿ ಚೆಂಡುಗಳಂತೆ, ಹಾಲಿನಂತೆ ಬಿಳಿಯಾಗಿ ಕಾಣುವ ಈ ಚಲಿಸುವ ಮೇಘಗಳು ತುಂಬಾ ಹಗುರವಾಗಿ ಇರುತ್ತವೆ ಅನಿಸುತ್ತೆ ಅಲ್ವಾ. ಆದರೆ ಅದು ನಿಜವಲ್ಲ. ಮೋಡಗಳು ಅಷ್ಟೊಂದು ಹಗುರವಾಗಿ ಇರುವುದಿಲ್ಲ. ಅವುಗಳು ಭಾರೀ ಗಾತ್ರದ ತೂಕ ಹೊಂದಿರುತ್ತವೆ ಎಂಬುದು ನಿಮಗೆ ತಿಳಿದಿದೆಯಾ?. ಅದೂ ಕೂಡ ನಾವು ಕೊಂಡೊಯ್ಯುವ ತೂಕದಷ್ಟು ಕಡಿಮೆಯೇನಲ್ಲ. ಆದರೂ ಮೋಡಗಳು ಭೂಮಿಯ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಗಾಳಿಯಲ್ಲಿ ತೇಲುತ್ತಿರುತ್ತವೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ..
ಮೋಡವು ಚಿಕ್ಕದಲ್ಲ.. ಆಕಾಶದಲ್ಲಿ ಭಾರೀ ಗಾತ್ರದಲ್ಲಿ ಹರಡಿರುವಂತೆ ಕಾಣುತ್ತದೆ. ಅಷ್ಟೇ ಏಕೆ ಮೋಡ ಕವಿದಿದ್ದಾಗ ನಮ್ಮ ಮನೆ ಮತ್ತು ಅಕ್ಕಪಕ್ಕದಲ್ಲಿ ಮಾತ್ರ ಮಳೆ ಬೀಳುವುದಿಲ್ಲ. ಒಂದೊಂದು ಬಾರಿ ಇಡೀ ಜಿಲ್ಲೆಯಲ್ಲಿಯೂ ಮಳೆಯಾಗಬಹುದು ಅಥವಾ ಇಡೀ ರಾಜ್ಯದ ತುಂಬೆಲ್ಲಾ ಮಳೆ ಬೀಳಬಹುದು. ಅಂದರೆ ಮೋಡ ತುಂಬಾ ದೊಡ್ಡದಾಗಿರುತ್ತದೆ. ಆ ದೊಡ್ಡ ಮೋಡದ ತೂಕ ಲಕ್ಷ ಟನ್ಗಳವರೆಗೂ ತೂಗುತ್ತಿರಬಹುದೆಂದು ಹೇಳಲಾಗುತ್ತದೆ. ಮತ್ತು ಅಂತಹ ಭಾರೀ ಮೋಡವು ಆಕಾಶದಲ್ಲಿ ಹೇಗೆ ತೇಲುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಪ್ರಶ್ನೆಯಾಗಿರುತ್ತದೆ.
ಆಕಾಶದಲ್ಲಿ ಮೋಡಗಳ ಜೊತೆಗೆ ಗಾಳಿಯೂ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಸುತ್ತಮುತ್ತಲಿನ ಗಾಳಿಯ ಸಾಂದ್ರತೆಯು ಮೋಡಕ್ಕಿಂತ 0.4 ಶೇಕಡಾ ಕಡಿಮೆಯಾಗಿರುತ್ತದೆ. ಅದಕ್ಕಾಗಿಯೇ ಮೋಡಗಳು ಗಾಳಿಯಲ್ಲಿ ತೇಲುತ್ತವೆ. ಅಂದರೆ ಮೋಡವು ಸರಿಸುಮಾರು ಅಂಟಾರ್ಕ್ಟಿಕ್ ನೀಲಿ ತಿಮಿಂಗಿಲ ಅಥವಾ ನೂರು ಆನೆಗಳಿಗಿಂತ ಹೆಚ್ಚು ತೂಕವನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.