ಕರ್ನಾಟಕ

karnataka

ಸರ್ಫರ್​ ಗೇಬ್ರಿಯಲ್ ಗಾಳಿಯಲ್ಲಿ ನಿಂತು ಸಂಭ್ರಮಿಸುವ ಅದ್ಭುತ ಚಿತ್ರ ಸೆರೆ: ಫೋಟೋಗೆ ನೆಟ್ಟಿಗರು ಫಿದಾ - AFP Photographers Image

By ETV Bharat Karnataka Team

Published : Jul 31, 2024, 10:11 PM IST

ಎಎಫ್​​ಪಿ ಸುದ್ದಿ ಸಂಸ್ಥೆಯ ಛಾಯಾಗ್ರಾಹಕ ಕ್ಲಿಕ್ಕಿಸಿದ ಚಿತ್ರವೊಂದು ಭಾರೀ ಸದ್ದು ಮಾಡುತ್ತಿದೆ. ಹಲವಾರು ನಿಯತಕಾಲಿಕೆಗಳು ಇದನ್ನು ಬಳಸಿಕೊಂಡಿವೆ.

ಸರ್ಫರ್​ ಗೇಬ್ರಿಯಲ್ ಗಾಳಿಯಲ್ಲಿ ನಿಂತು ಸಂಭ್ರಮಿಸುವ ಅದ್ಭುತ ಚಿತ್ರ
ಸರ್ಫರ್​ ಗೇಬ್ರಿಯಲ್ ಗಾಳಿಯಲ್ಲಿ ನಿಂತು ಸಂಭ್ರಮಿಸುವ ಅದ್ಭುತ ಚಿತ್ರ (AFP)

ಫ್ರಾನ್ಸ್:ಫ್ರಾನ್ಸ್​ ಸುದ್ದಿ ಸಂಸ್ಥೆಯ (ಎಎಫ್​ಪಿ) ಛಾಯಾಗ್ರಾಹಕ ಸೆರೆಹಿಡಿದ ಚಿತ್ರವೊಂದು ಭಾರೀ ವೈರಲ್​​ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟು ಮಾಡುತ್ತಿದೆ. ಕ್ರೀಡಾಕ್ಷೇತ್ರದ ಸಾರ್ವಕಾಲಿಕ ಚಿತ್ರ ಎಂದು ಕೆಲವರು ಬಣ್ಣಿಸಿದರೆ, ಇದು ಎಡಿಟ್​ ಮಾಡಿದ್ದೋ ಅಥವಾ ನಿಜವಾಗಿಯೋ ಎಂಬ ಅನುಮಾನ ಮೂಡಿಸುತ್ತಿದೆ ಎಂದು ಬೆರಗು ಕಣ್ಣಿನಿಂದ ನೋಡುತ್ತಿದ್ದಾರೆ.

ಎಎಫ್​ಪಿ ಫೋಟೋಗ್ರಾಫರ್​​ ಜೆರೋಮ್ ಬ್ರೌಲೆಟ್ ಚಿತ್ರ ತೆಗೆದವರು. ಬ್ರೆಜಿಲಿಯನ್ ಒಲಿಂಪಿಕ್ ಸರ್ಫರ್ ಗೇಬ್ರಿಯಲ್ ಮೆಡಿನಾ ಅವರು ಸರ್ಫ್​ ಬ್ರೇಕ್​ಗಳಲ್ಲಿ ದೊಡ್ಡ ಅಲೆಗೆ ಪುಟಿದು ಗಾಳಿಯಲ್ಲಿ ನಿಂತು ಸಂಭ್ರಮಿಸುತ್ತಿರುವ ಚಿತ್ರ ಇದಾಗಿದೆ. ಇದು ವಿಶೇಷಗಳಲ್ಲಿ ವಿಶಿಷ್ಟ ಎನ್ನುವಂತಿದೆ. ಹೀಗಾಗಿ ಚಿತ್ರವು ಎಲ್ಲರ ಗಮನ ಸೆಳೆಯುತ್ತಿದೆ.

ನೀರ ಅಲೆ ಸೀಳಿ ಬಂದ ಗೇಬ್ರಿಯಲ್​:ಬ್ರೆಜಿಲಿಯನ್ ಸರ್ಫರ್ ಗೇಬ್ರಿಯಲ್ ಮೆಡಿನಾ ಅವರು ಸಮುದ್ರದ ಸರ್ಫ್​ ಬ್ರೇಕ್​ನಲ್ಲಿ ತೊಡಗಿದ್ದಾಗ ದೊಡ್ಡ ಅಲೆಯನ್ನು ಸೀಳಿಕೊಂಡು ಮೇಲೆ ಹಾರುವ ಭಂಗಿಯಲ್ಲಿದ್ದಾರೆ. ಅಂದರೆ ಗಾಳಿಯಲ್ಲಿ ನಿಂತಿರುವ ಹಾಗಿದೆ. ಆತನ ಹಿಂದೆಯೇ ಸರ್ಫ್​ ಬೋರ್ಡ್​ ಕೂಡ ಆತನ ಹಿಂದೆಯೇ ಬರುವಂತೆ ಕಾಣುತ್ತಿದೆ. ಅದು ಕೂಡ ನೇರವಾಗಿ ನಿಂತ ಭಂಗಿಯಲ್ಲಿದೆ. ಹೀಗಾಗಿ ಚಿತ್ರ ವಿಶೇಷತೆ ಪಡೆದುಕೊಂಡಿದೆ.

ಇಂಥದ್ದೊಂದು ಅದ್ಭುತ ಚಿತ್ರವನ್ನು ಅವರು ಸೆರೆಹಿಡಿಯುತ್ತೇನೆ ಎಂದು ಜೆರೋಮ್ ಬ್ರೌಲೆಟ್ ಅಂದುಕೊಂಡಿರಲಿಲ್ಲವಂತೆ, ಸರ್ಫಿಂಗ್ ಮಾಡುತ್ತಿದ್ದಾಗ ರ್ಫರ್ ಗೇಬ್ರಿಯಲ್ ಮೆಡಿನಾ ಹೊಸದೊಂದು ಭಂಗಿಯಲ್ಲಿ ಸಿಕ್ಕರೆ ಚಿತ್ರ ಸೆರೆ ಹಿಡಿಯಬೇಕು ಎಂದು ಕಾಯುತ್ತಿದ್ದಾಗ, ಈ ವಿಶಿಷ್ಟ ಚಿತ್ರ ಬಂದಿತು. ಗೇಬ್ರಿಯಲ್​​ ಮದೀನಾ ಅಲೆಯಿಂದ ಹೊರಬರುವ ಅವರ ಚಿತ್ರವು ಜಾಗತಿಕ ಮಟ್ಟದಲ್ಲಿ ಹೆಸರಾಗಲಿದೆ. ಕ್ರೀಡೆ ಮತ್ತು ಕ್ರೀಡಾಕೂಟಗಳಲ್ಲಿನ ಚಿತ್ರಗಳಲ್ಲಿ ಸ್ಥಾನ ಪಡೆಯಲಿದೆ ಎಂಬುದು ತಿಳಿದಿರಲಿಲ್ಲ ಎಂದು ಜೆರೋಮ್ ಹೇಳಿಕೊಂಡಿದ್ದಾರೆ.

"ಪ್ರತಿಯೊಬ್ಬ ಛಾಯಾಗ್ರಾಹಕರು ವಿಶೇಷವಾದ ಚಿತ್ರಕ್ಕಾಗಿ ಕಾಯುತ್ತಿರುತ್ತಾರೆ. ಗೇಬ್ರಿಯಲ್ ಮದೀನಾ ನೀರಿನ ಅಲೆಯಿಂದ ಕಿಕ್ ಆಫ್ ಆಗಿ ಮೇಲೆ ಬಂದಾಗ ಇಲ್ಲಿ ಏನೋ ಜರುಗಲಿದೆ ಎಂದು ನಾನೂ ನಿರೀಕ್ಷೆಯಲ್ಲಿದ್ದೆ. ಈ ಪೋಸ್​ ಅನ್ನು ಸೆರೆ ಹಿಡಿಯಲು ಕ್ಯಾಮರಾದ ಗುಂಡಿಯನ್ನು ನಾಲ್ಕು ಬಾರಿ ಅದುಮಿದೆ. ಅದರಲ್ಲಿ ಈ ಅದ್ಭುತ ಸೆರೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ಚಿತ್ರ:ಚಿತ್ರವನ್ನು ಪ್ರಪಂಚದಾದ್ಯಂತದ ಹಲವಾರು ಪ್ರಕಟಣೆಗಳಲ್ಲಿ ಬಳಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಶೇರ್, ಲೈಕ್ಸ್​​ ಮಾಡಿದ್ದಾರೆ. ಇದು "ಸಾರ್ವಕಾಲಿಕ ಶ್ರೇಷ್ಠ ಕ್ರೀಡಾ ಫೋಟೋ ಆಗಿರಬಹುದು" ಎಂದು ಆಸ್ಟ್ರೇಲಿಯಾದ ಮಾಧ್ಯಮವೊಂದು ತನ್ನ ಫೇಸ್‌ಬುಕ್ ಪುಟದಲ್ಲಿ ಚಿತ್ರ ಸಮೇತ ಪೋಸ್ಟ್ ಮಾಡಿದೆ.

ಟೈಮ್ ಮ್ಯಾಗಜೀನ್ ಇದನ್ನು "2024 ರ ಬೇಸಿಗೆ ಕ್ರೀಡಾಕೂಟದ ವಿಜಯೋತ್ಸವದ ಸಂಕೇತದಿಂದಿದೆ" ಎಂದು ಬಣ್ಣಿಸಿದೆ. ಸ್ವತಃ ಮದೀನಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದು, ಇದಕ್ಕೆ 2.4 ಮಿಲಿಯನ್ ಲೈಕ್‌ಗಳನ್ನು ಕಂಡಿದೆ.

ಇದನ್ನೂ ಓದಿ:ಯೂರೋ ಕರೆನ್ಸಿ ಬಳಸುವ 20 ದೇಶಗಳಲ್ಲಿ ಹಣದುಬ್ಬರ ಹೆಚ್ಚಳ: ತೀವ್ರ ಕಳವಳ - Inflation in Europe

ABOUT THE AUTHOR

...view details