ETV Bharat / international

'ಯಾರೊಬ್ಬರು ಇನ್ನೂ ಬೈಡನ್- ಕಮಲಾ ಹತ್ಯೆಗೆ ಪ್ರಯತ್ನಿಸಿಲ್ಲ?: ವಿವಾದ ಸೃಷ್ಟಿಸಿದ ಮಸ್ಕ್ ಹೇಳಿಕೆ - Elon Musk

author img

By ETV Bharat Karnataka Team

Published : Sep 16, 2024, 12:40 PM IST

Updated : Sep 16, 2024, 3:26 PM IST

ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಹತ್ಯೆಗೆ ಪ್ರಯತ್ನಿಸಿಲ್ಲ ಎಂದು ಪ್ರಶ್ನಿಸುವ ಮೂಲಕ ಎಲೋನ್ ಮಸ್ಕ್ ವಿವಾದ ಸೃಷ್ಟಿಸಿದ್ದಾರೆ.

ಟೆಕ್ ಬಿಲಿಯನೇರ್ ಎಲೋನ್ ಮಸ್ಕ್
ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ (IANS)

ನವದೆಹಲಿ: ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಯಾರೂ ಹತ್ಯೆ ಮಾಡಲು ಪ್ರಯತ್ನಿಸುತ್ತಿಲ್ಲವೇಕೆ ಎಂದು ಪ್ರಶ್ನಿಸುವ ಮೂಲಕ ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ವಿವಾದಕ್ಕೀಡಾಗಿದ್ದಾರೆ . ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಎರಡನೇ ಬಾರಿಗೆ ಹತ್ಯೆ ಯತ್ನ ನಡೆದ ನಂತರ ಮಸ್ಕ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಫ್ಲೋರಿಡಾದ ಗಾಲ್ಫ್ ಕೋರ್ಸ್ ಹೊರಗೆ ಟ್ರಂಪ್ ಮೇಲೆ ಭಾನುವಾರ ಗುಂಡಿನ ದಾಳಿ ನಡೆದಿದ್ದು, ಇದು ಅವರ ಮೇಲೆ ನಡೆದ ಎರಡನೇ ಗುಂಡಿನ ದಾಳಿಯಾಗಿದೆ.

ಟ್ರಂಪ್ ಅವರನ್ನು ಕೊಲ್ಲುವ ಉದ್ದೇಶದಿಂದಲೇ ಗುಂಡಿನ ದಾಳಿ ನಡೆಸಲಾಗಿತ್ತು ಎಂದು ಎಫ್​ಬಿಐ ಹೇಳಿದೆ. ಈ ಹತ್ಯಾ ಪ್ರಯತ್ನದಲ್ಲಿ ಅವರಿಗೆ ಯಾವುದೇ ಅಪಾಯವಾಗಿಲ್ಲ ಹಾಗೂ ಅವರು ಸುರಕ್ಷಿತವಾಗಿದ್ದಾರೆ ಎಂದು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಟ್ರಂಪ್ ಅವರ ಪ್ರಚಾರ ಮತ್ತು ಕಾನೂನು ಜಾರಿ ಕಚೇರಿ ವರದಿ ಮಾಡಿದೆ.

'ಯಾರೋ ಡೊನಾಲ್ಡ್​ ಟ್ರಂಪ್ ಅವರನ್ನು ಕೊಲ್ಲಲು ಏಕೆ ಬಯಸುತ್ತಿದ್ದಾರೆ?' ಎಂದು ಬಳಕೆದಾರರೊಬ್ಬರು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದರು. ಇದಕ್ಕೆ ಉತ್ತರಿಸಿದ ಟೆಸ್ಲಾ ಸಿಇಒ ಮಸ್ಕ್​, '...ಆದರೆ ಯಾರೊಬ್ಬರೂ ಬೈಡನ್ ಅಥವಾ ಕಮಲಾ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿಲ್ಲವೇಕೆ' ಎಂದು ಬರೆದಿದ್ದಾರೆ. ಎಲೋನ್​ ಮಸ್ಕ್​ ಟ್ರಂಪ್​ ಅವರ ಬೆಂಬಲಿಗರಾಗಿದ್ದು, ಆಗಾಗ ಅವರ ಪರವಾಗಿ ಪೋಸ್ಟ್​ಗಳನ್ನು ಮಾಡುತ್ತಿರುತ್ತಾರೆ.

ಟ್ರಂಪ್ ಅವರ ಗಾಲ್ಫ್ ಕೋರ್ಸ್​ನ ಬೇಲಿಯ ಬಳಿಯಿದ್ದ ಬಂದೂಕುಧಾರಿಯ ಮೇಲೆ ಎಫ್​​ಬಿಐನ ಒಬ್ಬಿಬ್ಬರು ಏಜೆಂಟ್​ಗಳು ಗುಂಡು ಹಾರಿಸಿದ್ದಾರೆ ಮತ್ತು ಆತನಿಂದ ವೀಡಿಯೊ ಕ್ಯಾಮೆರಾ ಹಾಗೂ ಎಕೆ47 ಮಾದರಿಯ ರೈಫಲ್ ವಶಪಡಿಸಿಕೊಳ್ಳಲಾಗಿದೆ ಎಂದು ಎಫ್​ಬಿಐ ಹೇಳಿದೆ.

ಅಧಿಕಾರಿಗಳ ಪ್ರಕಾರ, ಬಂದೂಕುಧಾರಿಯನ್ನು ರಿಯಾನ್ ವೆಸ್ಲಿ ರೌತ್ ಎಂದು ಗುರುತಿಸಲಾಗಿದೆ. ಆದರೆ ಈತ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡೇ ಗುಂಡು ಹಾರಿಸಿದ್ದನಾ ಎಂಬುದು ಇನ್ನೂ ದೃಢಪಟ್ಟಿಲ್ಲ.

ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಗುಂಡು ಅವರ ಬಲ ಕಿವಿಯನ್ನು ಸವರಿಕೊಂಡು ಹೋಗಿದ್ದರಿಂದ, ಕಿವಿಗೆ ಗಾಯವಾಗಿತ್ತು. ಆಗ ಪೊಲೀಸರು ದಾಳಿಕೋರನನ್ನು ಸ್ಥಳದಲ್ಲೇ ಗುಂಡಿಕ್ಕಿ ಕೊಂದು ಹಾಕಿದ್ದರು. ಅದಾಗಿ ಕೇವಲ ಎರಡು ತಿಂಗಳ ಅಂತರದಲ್ಲೇ ಮತ್ತೊಮ್ಮೆ ಅವರ ಕೊಲೆಗೆ ಯತ್ನಿಸಲಾಗಿದೆ.

ಇದನ್ನೂ ಓದಿ: 'ಯುದ್ಧ ಆರಂಭವಾಗಲಿದೆ, ಜಾಗ ಖಾಲಿ ಮಾಡಿ': ಲೆಬನಾನ್​ ಗಡಿ ನಿವಾಸಿಗಳಿಗೆ ಇಸ್ರೇಲ್ ಎಚ್ಚರಿಕೆ - Israel Hezbollah War

Last Updated : Sep 16, 2024, 3:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.