ಟೋಕಿಯೋ, ಜಪಾನ್:ಜಪಾನಿನ ಉತ್ತರ-ಮಧ್ಯ ಪ್ರದೇಶವಾದ ಇಶಿಕಾವಾದಲ್ಲಿ ಇಂದು 5.9 ತೀವ್ರತೆಯ ಭೂಕಂಪನದ ಅನುಭವವಾಗಿದೆ.
ಜಪಾನ್ ಹವಾಮಾನ ಸಂಸ್ಥೆ ವರದಿ ಪ್ರಕಾರ, ನೋಟೊ ಪೆನಿನ್ಸುಲಾದ ಉತ್ತರದ ತುದಿಯಲ್ಲಿ ಬೆಳಗ್ಗೆ ಸುಮಾರು 6:31ರ ಸಮಯಕ್ಕೆ 5.9ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಸಂಭವಿಸಿದ ಕೆಲವೇ ನಿಮಿಷಗಳ ಅಂತರದಲ್ಲಿ ಮತ್ತೇ 4.8 ತೀವ್ರತೆಯ ಕಂಪನ ಸಂಭವಿಸಿದೆ ಎಂದು ತಿಳಿಸಿರುವ ಸಂಸ್ಥೆ, ಸುನಾಮಿಯ ಅಪಾಯವಿಲ್ಲ ಎಂದೂ ಖಚಿತ ಪಡಿಸಿದೆ. ಭೂಕಂಪನದ ಕೇಂದ್ರಬಿಂದು 10 ಭೂಮಿಯ ಕಿಲೋಮೀಟರ್ ಆಳದಲ್ಲಿದೆ ಪತ್ತೆಯಾಗಿದೆ. ಘಟನೆಯಿಂದ ಯಾವುದೇ ಹಾನಿ ಅಥವಾ ಗಾಯಗಳ ವರದಿಯಾಗಿಲ್ಲ.
ಪಶ್ಚಿಮ ಜಪಾನ್ ರೈಲ್ವೆ ಅಧಿಕಾರಿಯೊಬ್ಬರ ಪ್ರಕಾರ, ಭೂಮಿಕಂಪನದಿಂದ ಯಾವುದೇ ಸೇವೆಗಳನ್ನು ರದ್ದುಗೊಳಿಸಲಾಗಿಲ್ಲ. ಬಹುತೇಕ ಸಾರ್ವಜನಿಕ ಸಾರಿಗೆ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.