ಮಾಯೊಟ್ಟೆ, ಫ್ರಾನ್ಸ್: ಫ್ರೆಂಚ್ಗೆ ಅಪ್ಪಳಿಸಿರುವ ಭಯಾನಕ ಚಿಡೋ ಚಂಡಮಾರುತಕ್ಕೆ ಫ್ರಾನ್ಸ್ನ ಮಾಯೊಟ್ಟೆಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ. ಫ್ರೆಂಚ್ ಪ್ರಧಾನಿ ಪ್ರಿಫೆಕ್ಟ್ ಫ್ರಾಂಕೋಯಿಸ್-ಕ್ಸೇವಿಯರ್ Bieuville ಪ್ರಕಾರ ಸಾವಿನ ಸಂಖ್ಯೆ ಸಾವಿರಾರು ಲೆಕ್ಕದಲ್ಲಿ ಇರಬಹುದು ಎಂದು ಹೇಳಲಾಗಿದೆ.
ಭಾರಿ ಸಾವು ನೋವಿನ ವರದಿ:ಸಾವಿನ ಬಗ್ಗೆ ನಿರ್ದಿಷ್ಟ ಅಂಕಿ- ಅಂಶವನ್ನು ನೀಡಲು ಸಾಧ್ಯವಿಲ್ಲ ಎಂದು ಪ್ರಿಫೆಕ್ಟ್ ಫ್ರಾಂಕೋಯಿಸ್ ಹೇಳಿದ್ದಾರೆ. ಫ್ರೆಂಚ್ ಗೃಹ ಸಚಿವಾಲಯವು ಈ ಹಂತದಲ್ಲಿ ಎಲ್ಲ ಸಾವು ನೋವುಗಳ ಬಗ್ಗೆ ನಿಖರವಾದ ಅಂಕಿ- ಅಂಶ ನೀಡುವುದು ಕಷ್ಟವಾಗುತ್ತದೆ ಎಂದು ತಿಳಿಸಿದೆ. ಈ ನಡುವೆ ಸ್ಥಳೀಯ ಅಧಿಕಾರಿಗಳು ಕನಿಷ್ಠ 11 ಸಾವುಗಳಾಗಿವೆ ಎಂದು ದೃಢಪಡಿಸಿದ್ದಾರೆ. ಹಿಂದೂ ಮಹಾಸಾಗರದ ಮೂಲಕ ಚಂಡಮಾರುತ ಫ್ರಾನ್ಸ್ ಮೇಲೆ ಬೀಸಿದೆ, 200ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ. ಇದು ವಸತಿಗಳು, ಸರ್ಕಾರಿ ಕಟ್ಟಡಗಳು ಮತ್ತು ಆಸ್ಪತ್ರೆಗಳಿಗೆ ದೊಡ್ಡ ಹಾನಿಯನ್ನುಂಟು ಮಾಡಿದೆ ಎಂದು ಫ್ರೆಂಚ್ ಪ್ರಧಾನಿ ಫ್ರಾಂಕೋಯಿಸ್ ಹೇಳಿದ್ದಾರೆ.
ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ:ಶನಿವಾರ ಸಂಜೆ ಅಂತರ-ಸಚಿವಾಲಯ ಸಭೆಯ ನಂತರ ಪ್ರಧಾನಿ ಬೈರೂ ಸುದ್ದಿಗಾರರಿಗೆ ತಿಳಿಸಿದರು. ಮೆಯೊಟ್ಟೆಯಾದ್ಯಂತ ಚಿಡೋ ಚಂಡಮಾರುತದಿಂದಾಗಿ ಸತ್ತವರ ಸಂಖ್ಯೆ ಸಾವಿರಾರು ತಲುಪಿರಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಿಡೋದಿಂದ ಬರ್ಬರ ಸ್ಥಿತಿಯಲ್ಲಿರುವ ಮಾಯೊಟ್ಟೆಯಲ್ಲಿ ಅಳಿದುಳಿದವರ ರಕ್ಷಣೆಗೆ ಫ್ರಾನ್ಸ್ ರಕ್ಷಣಾ ಕಾರ್ಯಕರ್ತರು ಧಾವಿಸಿದ್ದಾರೆ. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಭಾರಿ ಭೂಕುಸಿತ:ಉತ್ತರ ಮೊಜಾಂಬಿಕ್‌ನ ಕ್ಯಾಬೊ ಡೆಲ್ಗಾಡೊ ಅಥವಾ ನಾಂಪುಲಾದಲ್ಲಿ ಭಾನುವಾರ ಭೂಕುಸಿತದ ವರದಿಯಾಗಿವೆ. ಈ ಮಧ್ಯೆ ಯುರೋಪಿಯನ್ ಯೂನಿಯನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಫ್ರಾನ್ಸ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಮಯೋಟ್ಟೆಯಲ್ಲಿ ಚಿಡೋ ಚಂಡಮಾರುತದ ವಿನಾಶಕಾರಿ ದಾಳಿಯಿಂದ ನಮ್ಮ ಹೃದಯ ಒಡೆದುಹೋಗಿದ್ದು, ಅಲ್ಲಿನ ಜನರ ನೋವಿನಲ್ಲೂ ನಾವು ಭಾಗಿಯಾಗುತ್ತೇವೆ. ಈ ಭೀಕರ ಅಗ್ನಿಪರೀಕ್ಷೆಯಲ್ಲಿ ಯುರೋಪ್ ಮಯೊಟ್ಟೆ ಜನರೊಂದಿಗೆ ನಿಂತಿದೆ. ಮುಂದಿನ ದಿನಗಳಲ್ಲಿ ನಾವು ಅವರಿಗೆ ಎಲ್ಲ ರೀತಿಯ ಬೆಂಬಲ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ:7 ವರ್ಷಗಳ ಬಳಿಕ ಅಮೆರಿಕಕ್ಕೆ ವಿಮಾನಯಾನ ಪುನಾರಂಭಿಸಲಿದೆ ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್‌ಲೈನ್ಸ್