ಬೀಜಿಂಗ್: ಚೀನಾ ಸರ್ಕಾರ ತನ್ನ ದೇಶದ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಿದೆ. ಅದರಲ್ಲೂ ಮಹಿಳೆಯರ ನಿವೃತ್ತಿ ವಯಸ್ಸಿನಲ್ಲಿ ಭಾರೀ ಏರಿಕೆ ಕಂಡಿದೆ, ಚೀನಾದಲ್ಲಿ ಸದ್ಯ ಜನಸಂಖ್ಯೆ ಕ್ಷೀಣಿಸುತ್ತಿದ್ದು, ಹಿರಿಯ ನಾಗರೀಕರ ಸಂಖ್ಯೆ ಹೆಚ್ಚಿದೆ. ಇದೀಗ ಈ ನಿವೃತ್ತಿ ವಯಸ್ಸು ಏರಿಕೆ ಮಾಡುವುದರಿಂದ ದುಡಿಯುವ ವರ್ಗದಲ್ಲಿ ಹಿರಿಯ ವಯಸ್ಸಿನವರನ್ನು ಕಾಣಬಹುದಾಗಿದೆ. ಚೀನಾದಲ್ಲಿ 15 ವರ್ಷಗಳ ಬಳಿಕ ಈ ನಿವೃತ್ತಿ ವಯಸ್ಸು ಏರಿಕೆ ಮಾಡಿ ಆದೇಶ ಮಾಡಲಾಗಿದೆ. ಹೊಸ ಆದೇಶದ ಪ್ರಕಾರ ಇನ್ಮುಂದೆ ಚೀನಾದಲ್ಲಿ ಸರ್ಕಾರಿ ಪುರುಷ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 60 ರಿಂದ 63 ವರ್ಷಕ್ಕೆ ಏರಿಕೆ ಮಾಡಿದರೆ, ಮಹಿಳೆಯರ ನಿವೃತ್ತಿ ವಯಸ್ಸು 55 ರಿಂದ 58 ಕ್ಕೆ ಏರಿಕೆ ಆಗಲಿದೆ.
ಉದ್ಯೋಗಿಗಳ ಹಿತರಕ್ಷಣೆಗಾಗಿ ಈ ನಿರ್ಧಾರ ಎಂದ ಸರ್ಕಾರ;ದೇಶದ ಅತಿ ಪ್ರಮುಖ ಆರ್ಥಿಕತೆ ದೇಶವಾಗಿರುವ ಚೀನಾದಲ್ಲಿ ಉದ್ಯೋಗಿಗಳ ಹಿತರಕ್ಷಣೆ ಕಾಯುವ ನಿಟ್ಟಿನಲ್ಲಿ ಮಹಿಳೆಯರ ನಿವೃತ್ತಿ ವಯಸ್ಸನ್ನು 50 ವರ್ಷಕ್ಕೆ ನಿಗದಿಪಡಿಸಿದೆ. ಆದರೆ, ಇದೀಗ ಬ್ಲೂ ಕಾಲರ್ ವರ್ಗದ ದುಡಿಯುವ ಮಹಿಳೆಯರ ನಿವೃತ್ತಿ ವಯಸ್ಸು 55ಕ್ಕೆ ಏರಿಕೆಯಾಗಿದೆ. ಈ ನೀತಿಯು ಮುಂದಿನ ವರ್ಷ ಜನವರಿಯಿಂದ ಜಾರಿಗೆ ಬರಲಿದೆ ಎಂದು ಚೀನಾ ಸರ್ಕಾರ(ಚೀನಾ ಪೀಪಲ್ಸ್ ಕಾಂಗ್ರೆಸ್) ತಿಳಿಸಿದೆ ಎಂದು ಸಿಸಿಟಿವಿ ವರದಿ ಮಾಡಿದೆ.