ಕರ್ನಾಟಕ

karnataka

ETV Bharat / international

ಉಕ್ರೇನ್ ಮರುನಿರ್ಮಾಣಕ್ಕೆ ಕೆನಡಾದಿಂದ $130 ಮಿಲಿಯನ್ ಧನಸಹಾಯ

ಉಕ್ರೇನ್​ನ ಮೂಲಸೌಕರ್ಯಗಳ ಮರುನಿರ್ಮಾಣಕ್ಕಾಗಿ ಕೆನಡಾ 130 ಮಿಲಿಯನ್ ಡಾಲರ್ ಧನಸಹಾಯ ಘೋಷಿಸಿದೆ.

Canada to allocate $130mn for Ukraine's recovery
Canada to allocate $130mn for Ukraine's recovery

By ETV Bharat Karnataka Team

Published : Feb 25, 2024, 2:07 PM IST

ಕೀವ್: ಯುದ್ಧದಿಂದ ನಲುಗಿರುವ ಉಕ್ರೇನ್​ನ ಮರುನಿರ್ಮಾಣಕ್ಕಾಗಿ 169 ಮಿಲಿಯನ್ ಕೆನಡಿಯನ್ ಡಾಲರ್ (ಸಿಎಡಿ) (ಸುಮಾರು 130 ಮಿಲಿಯನ್ ಡಾಲರ್) ಧನಸಹಾಯ ನೀಡುವುದಾಗಿ ಕೆನಡಾ ಹೇಳಿದೆ ಎಂದು ಮಾಧ್ಯಮಗಳು ರವಿವಾರ ವರದಿ ಮಾಡಿವೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಕೀವ್ ಗೆ ಭೇಟಿ ನೀಡಿದ ನಂತರ ಅವರ ಕಚೇರಿ ಈ ಘೋಷಣೆ ಮಾಡಿದೆ ಎಂದು ಉಕ್ರ್ ಇನ್ಫಾರ್ಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೆನಡಾವು ಉಕ್ರೇನ್​ನ ಶಾಂತಿ ಮತ್ತು ಭದ್ರತಾ ಸಹಾಯಕ್ಕಾಗಿ ಸಿಎಡಿ 75 ಮಿಲಿಯನ್ (57 ಮಿಲಿಯನ್ ಡಾಲರ್ ಗಿಂತ ಹೆಚ್ಚು) ಮೊತ್ತವನ್ನು ಮೀಸಲಿಟ್ಟಿದೆ. ಇದರಲ್ಲಿ ಗಣಿಗಾರಿಕೆ, ಸೈಬರ್ ಬೆಂಬಲ ಮತ್ತು ಗುಪ್ತಚರ ನೆರವು ಸೇರಿದೆ ಎಂದು ಉಕ್ರ್ ಇನ್ಫಾರ್ಮ್ (Ukrinform) ವರದಿ ಮಾಡಿದೆ.

ಕೀವ್ ನಲ್ಲಿನ ಹೋಲೊಡೊಮರ್-ನರಮೇಧ ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಪೂರ್ಣಗೊಳಿಸಲು ಮತ್ತೊಂದು ಹಂತದ ಸಿಎಡಿ 15 ಮಿಲಿಯನ್ ($ 11.5 ಮಿಲಿಯನ್ ಗೆ ಸಮಾನ) ಮೊತ್ತ ನೀಡಲಾಗುವುದು ಎಂದು ಕೆನಡಾ ತಿಳಿಸಿದೆ.

ಉಕ್ರೇನ್​ಗೆ ಕೆನಡಾ ಧನಸಹಾಯದ ವರ್ಗೀಕರಣ ಹೀಗಿದೆ: ಮಾನವೀಯ ಸಹಾಯಕ್ಕಾಗಿ $ 17 ಮಿಲಿಯನ್, ಅಭಿವೃದ್ಧಿ ಸಹಾಯಕ್ಕಾಗಿ $ 30 ಮಿಲಿಯನ್, ರಾಸಾಯನಿಕ ಶಸ್ತ್ರಾಸ್ತ್ರಗಳ ಕಡಿತ ಮತ್ತು ಮಾಹಿತಿ ಯುದ್ಧವನ್ನು ಎದುರಿಸುವುದು ಸೇರಿದಂತೆ ಸ್ಥಿರೀಕರಣ ಸಹಾಯಕ್ಕಾಗಿ ಸುಮಾರು $ 14 ಮಿಲಿಯನ್, ವಿವಿಧ ಸ್ಥಿರೀಕರಣ ಪ್ರಯತ್ನಗಳಿಗೆ $ 15 ಮಿಲಿಯನ್.

ಉಕ್ರ್​ ಇನ್ಫಾರ್ಮ್ ಸುದ್ದಿ ಸಂಸ್ಥೆ ವರದಿ ಮಾಡಿದಂತೆ, ಫೆಬ್ರವರಿ 24 ರಂದು ಕೀವ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಟ್ರುಡೊ ಉಕ್ರೇನ್​ನೊಂದಿಗೆ ಭದ್ರತಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ವರ್ಷ 3 ಬಿಲಿಯನ್ ಡಾಲರ್​ ಗಿಂತ ಹೆಚ್ಚಿನ ಭದ್ರತೆ ಮತ್ತು ಆರ್ಥಿಕ ಸಹಾಯ ನೀಡುವುದಾಗಿ ಟ್ರುಡೊ ಉಕ್ರೇನ್​ಗೆ ಭರವಸೆ ನೀಡಿದ್ದಾರೆ.

ಉಕ್ರೇನ್​ಗೆ ಜಿ7 ರಾಷ್ಟ್ರಗಳ ಬೆಂಬಲ: ಯುದ್ಧಪೀಡಿತ ಉಕ್ರೇನ್ ಪರವಾಗಿ ನಿಲ್ಲುವುದಾಗಿ ಏಳು ಪ್ರಮುಖ ಪ್ರಜಾಪ್ರಭುತ್ವ ದೇಶಗಳ ಗುಂಪಿನ ಮುಖ್ಯಸ್ಥರು ಶನಿವಾರ ಪ್ರತಿಜ್ಞೆ ಮಾಡಿದರು. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಎರಡನೇ ವಾರ್ಷಿಕೋತ್ಸವದಂದು ಉಕ್ರೇನ್​ಗೆ ಬೆಂಬಲ ಸೂಚಿಸಲು ಜಿ7 ರಾಷ್ಟ್ರಗಳ ಮುಖ್ಯಸ್ಥರು ಕೀವ್ ಗೆ ಭೇಟಿ ನೀಡಲಿದ್ದಾರೆ.

ಎರಡನೇ ಮಹಾಯುದ್ಧದ ನಂತರ ಯುರೋಪ್​ನಲ್ಲಿ ನಡೆದ ಅತ್ಯಂತ ಭೀಕರ ಸಂಘರ್ಷವಾದ ರಷ್ಯಾ ಮತ್ತು ಉಕ್ರೇನ್ ಯುದ್ಧದ ವಾರ್ಷಿಕೋತ್ಸವದ ಅಂಗವಾಗಿ ಜಿ 7 ನಾಯಕರು ಫೆಬ್ರವರಿ 24 ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್​ಸ್ಕಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು.

ಇದನ್ನೂ ಓದಿ : ಇಸ್ರೇಲ್-ಹಮಾಸ್ ಸಂಘರ್ಷ: ಮಾರ್ಚ್​​ 10ಕ್ಕೂ ಮುನ್ನ ಕದನ ವಿರಾಮ ಸಾಧ್ಯತೆ

ABOUT THE AUTHOR

...view details