ಕರ್ನಾಟಕ

karnataka

ETV Bharat / international

ಹಸೀನಾ ಭಾಷಣಕ್ಕೆ ಆಕ್ರೋಶ; ಬಾಂಗ್ಲಾ ಸಂಸ್ಥಾಪಕ ಶೇಖ್​ ಮುಜಿಬುರ್​ ರೆಹಮಾನ್​ ಮನೆಗೆ ಬೆಂಕಿ ಹಚ್ಚಿ ಧ್ವಂಸ - BANGLADESH FOUNDER SHEIKH MUJIBUR

ದೇಶದಿಂದ ಪಲಾಯನ ಮಾಡಿರುವ ಶೇಖ್​ ಹಸೀನಾ ಆನ್​ಲೈನ್​ ಮೂಲಕ ಭಾಷಣ ಮಾಡುತ್ತಿದ್ದಂತೆ ಆಕ್ರೋಶಗೊಂಡ ಪ್ರತಿಭಟನಾಕಾರರ ಗುಂಪು ಮುಜಿಬುರ್​ ರೆಹಮಾನ್​ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದೆ.

Bangladesh founder Sheikh Mujibur Rahmans house vandalised set on fire by mob in Dhaka
ನಿವಾಸ ಧ್ವಂಸ ಮಾಡಿದ ಪ್ರತಿಭಟನಾಕಾರರು (ಐಎಎನ್​ಎಸ್​​)

By ETV Bharat Karnataka Team

Published : Feb 6, 2025, 10:41 AM IST

ನವದೆಹಲಿ: ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಜನರ ಆಕ್ರೋಶಕ್ಕೆ ದೇಶದ ಸಂಸ್ಥಾಪಕರಾದ ಶೇಖ್​ ಮುಜಿಬುರ್​ ರೆಹಮಾನ್​ ಅವರ ಮನೆ ಹೊತ್ತಿ ಉರಿದಿದೆ. ಇದಕ್ಕೆ ಕಾರಣ ದೇಶ ತೊರೆದು ಪಲಾಯನ ಮಾಡಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್​ ಹಸೀನಾ ಮಾಡಿರುವ ಭಾಷಣವಾಗಿದೆ.

ಆನ್​ಲೈನ್​ ಮೂಲಕ ದೇಶವನ್ನು ಉದ್ದೇಶಿಸಿ ಶೇಖ್​ ಹಸೀನಾ ಮಾತನಾಡುತ್ತಿದ್ದಂತೆ ಉದ್ರಿಕ್ತರಾದ ಪ್ರತಿಭಟನಾಕಾರರ ಗುಂಪು ಅವಾಮಿ ಲೀಗ್ ನಿಷೇಧಿಸುವಂತೆ ಒತ್ತಾಯಿಸಿ ಢಾಕಾದಲ್ಲಿ ಅವರ ತಂದೆ ಶೇಖ್​ ಮುಜಿಬುರ್​ ರೆಹಮಾನ್ ಸ್ಮಾರಣಾರ್ಥವಾಗಿ ಇರುವ ನಿವಾಸದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ.

ಆಕ್ರೋಶಿತ ದಾಳಿಕೋರರ ಗುಂಪು ಧನ್ಮಂಡಿಯ 32ರಲ್ಲಿರುವ ರೆಹಮಾನ್​ ಸ್ಮಾರಕ ನಿವಾಸದ ಗೇಟ್​ ಮುರಿದು ಒಳ ಬಂದು ದಾಳಿಯನ್ನು ಆರಂಭಿಸಿದರು. ಕಟ್ಟಡದ ಮೇಲೆ ಹತ್ತಿ, ನಿವಾಸವನ್ನು ಧ್ವಂಸ ಮಾಡಿದ ಅವರು, ಮೇಲಿನ ಮಹಡಿಗೆ ಬೆಂಕಿ ಇಟ್ಟಿದ್ದಾರೆ.

ಅವಾಮಿ ಲೀಗ್‌ನಿಂದ ವಿಸರ್ಜಿಸಲ್ಪಟ್ಟ ವಿದ್ಯಾರ್ಥಿ ವಿಭಾಗ ಛತ್ರ ಲೀಗ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಸೀನಾ ಅವರು ಭಾಷಣ ಮಾಡಿದ್ದರು. ಈ ವೇಳೆ ದೇಶದಲ್ಲಿರುವ ಪ್ರಸ್ತುತ ಆಡಳಿತದ ವಿರುದ್ಧ ಪ್ರತಿರೋಧಿಸಲು ಅವರು ದೇಶವಾಸಿಗಳಿಗೆ ಕರೆ ನೀಡಿದ್ದರು.

ಭಾಷಣದಲ್ಲಿ 'ಮುಹಮ್ಮದ್ ಯೂನಸ್ ಅವರ ಆಡಳಿತವೂ ವಿದ್ಯಾರ್ಥಿಗಳ ತಾರತಮ್ಯ ವಿರೋಧಿ ಚಳವಳಿಯಿಂದ ಸ್ಥಾಪನೆ ಮಾಡಲಾಗಿದೆ. ಅವರು ದೇಶದ ಧ್ವಜ, ಸಂವಿಧಾನ, ಲಕ್ಷಾಂತರ ಹುತಾತ್ಮರ ಜೀವನವನ್ನು ಬುಲ್ಡೋಜರ್​ನಿಂದ ನಾಶ ಮಾಡುವ ಶಕ್ತಿ ಹೊಂದಿಲ್ಲ. ಅವರು ಕಟ್ಟಡಗಳನ್ನು ಧ್ವಂಸ ಮಾಡಬಹುದು. ಇತಿಹಾಸವನ್ನಲ್ಲ. ಆದರೆ, ಇತಿಹಾಸ ಇದರ ಪ್ರತೀಕಾರ ಪಡೆಯಲಿದೆ ಎಂಬುದು ನೆನಪಿರಲಿ' ಎಂದು ಹೇಳಿದ್ದರು.

ಬಾಂಗ್ಲಾದೇಶದ ಸ್ವಾತಂತ್ರ್ಯ ಪೂರ್ವದ ಚಳವಳಿಯಲ್ಲಿ ಶೇಖ್​ ಮುಜಿಬುರ್​ ರೆಹಮಾನ್​ ಅವರು ದಶಕಗಳ ಕಾಲ ಚಳವಳಿಗೆ ಸಮಪರ್ಣೆಯ ಸಂಕೇತವಾಗಿ ಈ ನಿವಾಸವಿದೆ. ಆವಾಮಿ ಲೀಗ್​​ ಆಡಳಿತದಲ್ಲಿ ಈ ಮನೆಯನ್ನು ಮ್ಯೂಸಿಯಂ ಆಗಿ ಮಾರ್ಪಡಿಸಲಾಯಿತು. ದೇಶದ ವಿದೇಶಿ ಮುಖ್ಯಸ್ಥರು ಮತ್ತು ಗಣ್ಯರು ದೇಶದ ಶಿಷ್ಟಾಚಾರಕ್ಕೆ ಅನುಗುಣವಾಗಿ ಈ ಮನೆಗೆ ಭೇಟಿ ನೀಡುತ್ತಿದ್ದರು.

16 ವರ್ಷಗಳ ಶೇಖ್​ ಹಸೀನಾ ಅವರ ಅವಾಮಿ ಲೀಗ್​ ಆಡಳಿತದ ವಿರುದ್ಧ ಕಳೆದ ವರ್ಷ ಆಗಸ್ಟ್​ನಲ್ಲಿ ಪ್ರತಿಭಟನೆಗಳು ಹೆಚ್ಚಾಗಿದ್ದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಾಂಗ್ಲಾದೇಶದ ವಾಯುಪಡೆಯ ವಿಮಾನದ ಮೂಲಕ ಸಹೋದರಿ ಶೇಖ್​ ರೆಹಾನಾ ಅವರೊಂದಿಗೆ ದೇಶ ತೊರೆದಿದ್ದರು. (ಐಎಎನ್​ಎಸ್​)

ಇದನ್ನೂ ಓದಿ: ಮಹಿಳಾ ಕ್ರೀಡೆಗಳಲ್ಲಿ ಟ್ರಾನ್ಸ್​ಜೆಂಡರ್​​ಗಳು ಭಾಗವಹಿಸುವುದನ್ನು ನಿಷೇಧಿಸಿದ ಟ್ರಂಪ್​: ಕಾರ್ಯಕಾರಿ ಆದೇಶಕ್ಕೆ ಸಹಿ

ಇದನ್ನೂ ಓದಿ:'ಅಮೆರಿಕ ಗಾಜಾ ಪಟ್ಟಿ ವಶಪಡಿಸಿಕೊಳ್ಳಲಿದೆ': ಮಧ್ಯಪ್ರಾಚ್ಯದಲ್ಲಿ ಸಂಚಲನ ಸೃಷ್ಟಿಸಿದ ಟ್ರಂಪ್ ಹೇಳಿಕೆ

ABOUT THE AUTHOR

...view details