ಕರ್ನಾಟಕ

karnataka

ETV Bharat / international

ಒಂದೂವರೆ ವರ್ಷದ ನಂತರ ಇರಾನ್​ನಲ್ಲಿ ರಾಯಭಾರ ಕಚೇರಿ ಪುನಾರಂಭಿಸಿದ ಅಜರ್​ಬೈಜಾನ್ - Azerbaijan Iran Relations - AZERBAIJAN IRAN RELATIONS

ಅಜರ್​ಬೈಜಾನ್​ ಇರಾನ್​ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಪುನಾರಂಭಿಸಿದೆ.

ಟೆಹ್ರಾನ್​​ನಲ್ಲಿನ ಅಜರ್​ಬೈಜಾನ್​ ರಾಯಭಾರ ಕಚೇರಿ
ಟೆಹ್ರಾನ್​​ನಲ್ಲಿನ ಅಜರ್​ಬೈಜಾನ್​ ರಾಯಭಾರ ಕಚೇರಿ (IANS)

By PTI

Published : Jul 15, 2024, 5:28 PM IST

ಟೆಹ್ರಾನ್ : ಒಂದು ವರ್ಷಕ್ಕೂ ಹೆಚ್ಚು ಕಾಲದ ನಂತರ ಅಜರ್​ಬೈಜಾನ್ ಇರಾನ್​ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಮತ್ತೆ ಆರಂಭ ಮಾಡಿದೆ. ಉಭಯ ದೇಶಗಳ ಮಧ್ಯದ ಉದ್ವಿಗ್ನತೆಯ ಶಮನಕ್ಕಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಮಾತುಕತೆಗಳು ನಡೆದ ನಂತರ ಟೆಹ್ರಾನ್ ನಲ್ಲಿರುವ ಅಜರ್​ಬೈಜಾನ್​ ರಾಯಭಾರ ಕಚೇರಿ ಸೋಮವಾರ ತನ್ನ ಕೆಲಸವನ್ನು ಪುನರಾರಂಭಿಸಿದೆ ಎಂದು ಇರಾನ್​​ನ ಅರೆ-ಅಧಿಕೃತ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಇರಾನ್ ರಾಜಧಾನಿಯಲ್ಲಿ ರಾಯಭಾರ ಕಚೇರಿ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ ಎಂದು ಟೆಹ್ರಾನ್ನಲ್ಲಿರುವ ಅಜೆರಿ ರಾಯಭಾರ ಕಚೇರಿಯ ಮೂಲಗಳು ಅಸೋಸಿಯೇಟೆಡ್ ಪ್ರೆಸ್​ಗೆ ತಿಳಿಸಿವೆ. ಆದರೆ ಇರಾನಿನ ವಿದೇಶಾಂಗ ಸಚಿವಾಲಯವು ಈ ಬೆಳವಣಿಗೆಯನ್ನು ದೃಢಪಡಿಸುವವರೆಗೂ ಇದನ್ನು ಅಧಿಕೃತವಾಗಿ ಹೇಳಲಾಗುವುದಿಲ್ಲ ಎಂದು ಮಾಧ್ಯಮ ಮೂಲಗಳು ಹೇಳಿವೆ.

2023 ರ ಜನವರಿಯಲ್ಲಿ ಬಂದೂಕುಧಾರಿಯೊಬ್ಬ ಇರಾನ್ ರಾಜಧಾನಿಯಲ್ಲಿರುವ ಅಜರ್​ಬೈಜಾನ್ ರಾಯಭಾರ ಕಚೇರಿಗೆ ನುಗ್ಗಿ ಅದರ ಭದ್ರತಾ ಮುಖ್ಯಸ್ಥನನ್ನು ಕೊಂದು ಇಬ್ಬರು ಕಾವಲುಗಾರರನ್ನು ಗಾಯಗೊಳಿಸಿದ್ದ. ಈ ಘಟನೆಯ ನಂತರ ದೀರ್ಘಕಾಲದಿಂದ ಉದ್ವಿಗ್ನವಾಗಿರುವ ಇರಾನ್ ಮತ್ತು ಅಜರ್​ಬೈಜಾನ್ ಸಂಬಂಧಗಳು ಮತ್ತಷ್ಟು ಹದಗೆಟ್ಟಿವೆ.

ವೈಯಕ್ತಿಕ ಕಾರಣದಿಂದ ದಾಳಿ ನಡೆದಿದೆ ಎಂದು ಇರಾನ್ ಹೇಳಿದೆ. ಅಲ್ಲದೆ ದಾಳಿ ನಡೆಸಿದ ಬಂದೂಕುಧಾರಿಯ ಪತ್ನಿಯು ಅಜರ್​ ಬೈಜಾನ್ ರಾಯಭಾರ ಕಚೇರಿಗೆ ಭೇಟಿ ನೀಡಿದ ನಂತರ ಆಕೆ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿದೆ. ಆದರೆ ಅಜೆರಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಈ ದಾಳಿಯನ್ನು ಭಯೋತ್ಪಾದಕ ದಾಳಿ ಎಂದು ಕರೆದಿದ್ದಾರೆ.

ತನ್ನ ದೇಶದಲ್ಲಿನ ಸರ್ಕಾರವನ್ನು ಪತನಗೊಳಿಸಲು ಮುಸ್ಲಿಂ ಮೂಲಭೂತವಾದಿಗಳಿಗೆ ಇರಾನ್ ಬೆಂಬಲ ನೀಡುತ್ತಿದೆ ಎಂದು ಅಜರ್​ಬೈಜಾನ್ ಆರೋಪಿಸಿತ್ತು. ಆದರೆ ಈ ಆರೋಪವನ್ನು ಟೆಹ್ರಾನ್ ನಿರಾಕರಿಸಿದೆ. ಏಪ್ರಿಲ್ 2023 ರಲ್ಲಿ, ಅಜರ್​ಬೈಜಾನ್​ ಇರಾನಿನ ನಾಲ್ವರು ರಾಜತಾಂತ್ರಿಕರನ್ನು ರಾಜಧಾನಿ ಬಾಕುದಿಂದ ಹೊರಹಾಕಿತು. ಒಂದು ತಿಂಗಳ ನಂತರ, ಟೆಹ್ರಾನ್​ನಲ್ಲಿರುವ ಅಜರ್​ಬೈಜಾನ್ ರಾಯಭಾರ ಕಚೇರಿ ಮತ್ತು ವಾಯುವ್ಯ ನಗರ ತಬ್ರಿಜ್​ನಲ್ಲಿರುವ ಅದರ ದೂತಾವಾಸದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಅಜೆರಿ ರಾಜತಾಂತ್ರಿಕರನ್ನು ಇರಾನ್ ಹೊರಹಾಕಿತು.

ಮಾರ್ಚ್ 2023 ರಲ್ಲಿ ಅಜರ್​ಬೈಜಾನ್ ಇಸ್ರೇಲ್​ನಲ್ಲಿ ರಾಯಭಾರ ಕಚೇರಿಯನ್ನು ತೆರೆದಿದ್ದರಿಂದ ಉಭಯ ದೇಶಗಳ ನಡುವಿನ ಸಂಬಂಧಗಳು ಉದ್ವಿಗ್ನಗೊಂಡಿವೆ. ಅಜರ್​ಬೈಜಾನ್​ ಇಸ್ರೇಲ್​ನೊಂದಿಗೆ ನಿಕಟ ಸಂಬಂಧ ಹೊಂದಿದೆ. ಆದರೆ ಟೆಹ್ರಾನ್ ಇಸ್ರೇಲ್​ ಅನ್ನು ತನ್ನ ನಂಬರ್ ಒನ್ ಶತ್ರು ಎಂದು ಪರಿಗಣಿಸುತ್ತದೆ. ಅಜರ್​ಬೈಜಾನ್ ಮತ್ತು ಇಸ್ರೇಲ್ ನಡುವಿನ ಸಂಬಂಧಗಳ ಬಲವರ್ಧನೆಯನ್ನು ಇರಾನ್ ಪದೇ ಪದೆ ವಿರೋಧಿಸಿದೆ.

ಇದನ್ನೂ ಓದಿ : ಆಧುನಿಕ ಗುಲಾಮಗಿರಿ: ಇಟಲಿಯಲ್ಲಿ ಇಬ್ಬರು ಭಾರತೀಯರ ಬಂಧನ - Indian nationals arrested in Italy

ABOUT THE AUTHOR

...view details