ಕರ್ನಾಟಕ

karnataka

ETV Bharat / international

ಅಫ್ಘಾನಿಸ್ತಾನದಲ್ಲಿ ಹಠಾತ್ ಪ್ರವಾಹ; 33 ಮಂದಿ ಸಾವು - floods in Afghanistan

ಅಫ್ಘಾನಿಸ್ತಾನದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಮತ್ತು ಹಠಾತ್ ಪ್ರವಾಹದಿಂದ ಕನಿಷ್ಠ 33 ಜನರು ಮೃತಪಟ್ಟಿರುವುದಾಗಿ ಸರ್ಕಾರದ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.

ಅಫ್ಘಾನಿಸ್ತಾನದಲ್ಲಿ ಹಠಾತ್ ಪ್ರವಾಹ
ಅಫ್ಘಾನಿಸ್ತಾನದಲ್ಲಿ ಹಠಾತ್ ಪ್ರವಾಹ

By ANI

Published : Apr 15, 2024, 1:43 PM IST

ಕಾಬೂಲ್ [ಅಫ್ಘಾನಿಸ್ತಾನ]:ಕಳೆದ ಮೂರು ದಿನಗಳಿಂದ ದೇಶದಲ್ಲಿ ಉಂಟಾದ ಪ್ರವಾಹ, ಹಿಮ, ಮಳೆಯಿಂದ ಸುಮಾರು 33 ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಹಠಾತ್ ಪ್ರವಾಹದ ಪರಿಣಾಮ 27 ಜನರು ಗಾಯಗೊಂಡಿದ್ದಾರೆ. ಪ್ರವಾಹದಲ್ಲಿ 600ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಜನಜೀವನ ಭಾಗಶಃ ಅಸ್ತವ್ಯಸ್ತವಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಪ್ರವಾಹದಲ್ಲಿ ಕನಿಷ್ಠ 33 ಜನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಸರ್ಕಾರದ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.

ತಾಲಿಬಾನ್ ನಿಯಂತ್ರಿತ ವಿಪತ್ತು ನಿರ್ವಹಣೆಯ ರಾಜ್ಯ ಸಚಿವಾಲಯದ ವಕ್ತಾರ ಜನನ್ ಸಾಯಿಕ್ ಮಾತನಾಡಿ, "ಫರಾಹ್, ಹೆರಾತ್, ಝಬುಲ್ ಮತ್ತು ಕಂದಹಾರ್ ಪ್ರಾಂತ್ಯಗಳು ಹೆಚ್ಚಿನ ನಷ್ಟವನ್ನು ಅನುಭವಿಸಿವೆ. ಬಹುಪಾಲು ಸಾವುನೋವುಗಳು ಸಂಭವಿಸಿವೆ. ಇದಲ್ಲದೇ ರಾಜಧಾನಿ ಕಾಬೂಲ್ ಮತ್ತು ದೇಶದ ಹಲವಾರು ಪ್ರಾಂತ್ಯಗಳ ಮೇಲೆ ಹಠಾತ್ ಪ್ರವಾಹವು ಸಾಕಷ್ಟು ಪರಿಣಾಮ ಬೀರಿದೆ" ಎಂದು ಅವರು ತಿಳಿಸಿದ್ದಾರೆ.

ಹಠಾತ್ ಸಂಭವಿಸಿದ ಪ್ರವಾಹದಿಂದ ಸುಮಾರು 800 ಹೆಕ್ಟೇರ್ ಕೃಷಿ ಭೂಮಿ ಮತ್ತು 85 ಕಿಲೋಮೀಟರ್ (53 ಮೈಲು) ಗಿಂತ ಹೆಚ್ಚಿನ ರಸ್ತೆಗಳು ಸಹ ಹಾನಿಗೊಂಡಿದೆ ಎಂದು ಹೇಳಲಾಗಿದೆ. ಪಶ್ಚಿಮ ಫರಾಹ್, ಹೆರಾತ್, ದಕ್ಷಿಣ ಝಬುಲ್ ಮತ್ತು ಕಂದಹಾರ್ ಅತಿ ಹೆಚ್ಚು ಹಾನಿಗೊಳಗಾದ ಪ್ರಾಂತ್ಯಗಳಲ್ಲಿ ಸೇರಿವೆ. 200ಕ್ಕೂ ಹೆಚ್ಚು ಜಾನುವಾರುಗಳು ಅಸುನೀಗಿರುವ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನ ಸೇರಿದಂತೆ ಕೆಲವು ಪ್ರಾಂತ್ಯಗಳಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆ ಇದೆ. ಸಾವುನೋವುಗಳು ಹೆಚ್ಚಾಗುವ ಅಪಾಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಆಗಾಗ ಪ್ರವಾಹ, ಭೂಕಂಪ, ಹಿಮಕುಸಿತ, ಭೂಕುಸಿತ ಸೇರಿದಂತೆ ಹಲವು ನೈಸರ್ಗಿಕ ವಿಕೋಪಗಳು ಅಧಿಕ. ನೈಸರ್ಗಿಕ ವಿಪತ್ತುಗಳ ವಿರುದ್ಧ ಹೋರಾಡುವ ದುರ್ಬಲ ರಾಷ್ಟ್ರಗಳಲ್ಲಿ ಅಫ್ಘಾನಿಸ್ತಾನವು ಒಂದಾಗಿದೆ. 2021ರಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ಬಳಿಕ ಈ ದೇಶಕ್ಕೆ ವಿದೇಶಿ ನೆರವಿನ ಹರಿವು ಕುಸಿತಗೊಂಡಿದೆ. ಪರಿಣಾಮ ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಪ್ರತಿಕ್ರಿಯೆಗಳಿಗೂ ಕೂಡ ಅಡ್ಡಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೇಸಿಗೆ ಆರಂಭದಿಂದ ಈವರೆಗೆ 22,000ಕ್ಕೂ ಹೆಚ್ಚು ನಿರ್ಗತಿಕ ಕುಟುಂಬಗಳು ರಾಷ್ಟ್ರೀಯ ಮತ್ತು ವಿದೇಶಿ ನೆರವು ಪಡೆದಿವೆ ಎಂದು ವಿಪತ್ತು ನಿರ್ವಹಣಾ ವ್ಯವಹಾರಗಳ ರಾಜ್ಯ ಸಚಿವಾಲಯ ತಿಳಿಸಿದೆ.

ಫೆಬ್ರವರಿಯಲ್ಲಿ ಪೂರ್ವ ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತ ಮತ್ತು ಭೂಕುಸಿತ ಸಂಭವಿಸಿತ್ತು. ಆಗ ಕನಿಷ್ಠ 25 ಜನರು ಮೃತಪಟ್ಟಿದ್ದರು.

ಇದನ್ನೂ ಓದಿ: ದೆಹಲಿ ಸೇರಿ ಉತ್ತರ ಭಾರತದಲ್ಲಿ ಗುಡುಗು ಸಹಿತ ಮಳೆ: ದಕ್ಷಿಣ ಭಾರತದಲ್ಲಿ ಮುಂದಿನ 3 ದಿನ ಒಣಹವೆ - Meteorological Department

ABOUT THE AUTHOR

...view details