ಸಿಂಗಾಪುರ್: ಮೇ 21ರಂದು ಪ್ರತಿಕೂಲ ಹವಾಮಾನದಿಂದ ತುರ್ತು ಭೂ ಸ್ಪರ್ಶಿಸಿದ ಸಿಂಗಾಪುರ್ ಏರ್ಲೈನ್ನಲ್ಲಿದ್ದ ಪ್ರಯಾಣಿಕರ ಪೈಕಿ ಓರ್ವ ಮೃತಪಟ್ಟು, ಹಲವರು ಗಾಯಗೊಂಡಿದ್ದರು. 22 ಮಂದಿ ಬೆನ್ನುಹುರಿ ಗಾಯಕ್ಕೊಳಗಾದರೆ, 6 ಮಂದಿಯ ತಲೆಬುರುಡೆಗಳಿಗೆ ಗಾಯವಾಗಿತ್ತು. 22 ಪ್ರಯಾಣಿಕರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಇಲ್ಲ ಎಂದು ವರದಿಯಾಗಿದೆ.
ಲಂಡನ್-ಸಿಂಗಾಪುರ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಈ ವಿಮಾನ ಪ್ರತಿಕೂಲ ಹವಾಮಾನದಿಂದಾಗಿ ಬ್ಯಾಂಕಾಕ್ನಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು. ಸುಮಾರು 37 ಸಾವಿರ ಅಡಿ ಎತ್ತರದಿಂದ ಕೇವಲ ಮೂರೇ ನಿಮಿಷದಲ್ಲಿ ಕೆಳಗಿಳಿದ ಪರಿಣಾಮ ಅನೇಕ ಪ್ರಯಾಣಿಕರು ಗಾಯಗೊಂಡಿದ್ದರು.
ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ 46 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆಗಾಗಿ ಥಾಯ್ಲೆಂಡ್ನಲ್ಲಿದ್ದರೆ, 65 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಬ್ಯಾಂಕಾಕ್ನಲ್ಲಿದ್ದಾರೆ ಎಂಬ ಮಾಹಿತಿಯನ್ನು ಸಿಂಗಾಪೂರ್ ಏರ್ಲೈನ್ಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.