ಕರ್ನಾಟಕ

karnataka

ಸ್ಮಾರ್ಟ್​ಫೋನ್​ ನೀಲಿ ಬೆಳಕಿಂದ ಚರ್ಮಕ್ಕೂ ಹಾನಿ! - blue light harm skin

By PTI

Published : Jul 25, 2024, 2:00 PM IST

Updated : Jul 26, 2024, 5:11 PM IST

ಸ್ಮಾರ್ಟ್​ಫೋನ್​, ಲ್ಯಾಪ್​ಟಾಪ್​, ಟಿವಿ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್​ ಸಾಧನಗಳು ತ್ವಚೆ ಮೇಲೆ ಬೀರುವ ಸಮಸ್ಯೆಗಳ ಕುರಿತ ಮಾಹಿತಿ ಇಲ್ಲಿದೆ.

Yes, blue light from your phone can harm your skin. A dermatologist explains
ಸಂಗ್ರಹ ಚಿತ್ರ (Getty Images)

ಹೈದರಾಬಾದ್​: ಸ್ಮಾರ್ಟ್​ಫೋನ್​ ಸೇರಿದಂತೆ ಎಲೆಕ್ಟ್ರಾನಿಕ್​ ಸಾಧನಗಳಿಂದ ಹೊರ ಹೊಮ್ಮುವ ನೀಲಿ ಬೆಳಕು ಕಣ್ಣು ಮತ್ತು ನಿದ್ರೆ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಈಗಾಗಲೇ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಆದರೆ, ಈ ನೀಲಿ ಬೆಳಕು ಇದೀಗ ತ್ವಚೆ ಮೇಲೂ ಪರಿಣಾಮ ಬೀರಲಿದೆ ಎಂದು ಚರ್ಮವೈದ್ಯ ತಜ್ಞರು ವಿವರಿಸಿದ್ದಾರೆ.

ಪಿಗ್ಮೆಂಟೆಷನ್​ ಹೆಚ್ಚಳ: ಅಧ್ಯಯನ ಪ್ರಕಾರ, ಈ ನೀಲಿ ಬೆಳಕು ಮೆಲನಿನ್​ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ತ್ವಚೆಯ ಬಣ್ಣ ನಿರ್ಧರಿತವಾಗುವುದು ಮೆಲನಿನ್​ ಆಧಾರದ ಮೇಲೆ. ಹೆಚ್ಚಿನ ಪ್ರಮಾಣದಲ್ಲಿ ಈ ನೀಲಿ ಬೆಳಕಿಗೆ ಒಡ್ಡಿಕೊಡ್ಡಾಗ ಹೈಪರ್​ಪಿಗ್ಮೆಂಟೆಷನ್​ಗೆ ಕಾರಣವಾಗುತ್ತದೆ. ಇದರಿಂದ ಮೆಲನಿನ್​​ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗಿ ತ್ವಚೆ ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ.

ಸುಕ್ಕು: ಕೆಲವು ಅಧ್ಯಯನಗಳು ತಿಳಿಸುವಂತೆ ಈ ನೀಲಿ ಬೆಳಕು ಕೊಲಜನ್​ ಹಾನಿಗೆ ಕಾರಣಾಗುತ್ತದೆ. ತ್ವಚೆಯ ವಿನ್ಯಾಸಕ್ಕೆ ಅಗತ್ಯವಾದ ಪ್ರೋಟಿನ್​ ಇದಾಗಿದೆ. ತಜ್ಞರು ಹೇಳುವಂತೆ ನಿಮ್ಮ ತ್ವಚೆಯಿಂದ ಒಂದು ಸೆಂಟಿಮೀಟರ್​​ ದೂರದಲ್ಲಿ ಮೊಬೈಲ್​ ಫೋನ್​ ಅನ್ನು ಒಂದು ಗಂಟೆ ಕಾಲ ಹಿಡಿದರೆ, ಇದು ಕೊಲಜನ್​ ಮೇಲೆ ಪರಿಣಾಮ ಬೀರಿ, ತ್ವಚೆಯ ಅಕಾಲಿಕ ಸುಕ್ಕು ಕಟ್ಟುವಿಕೆಗೆ ಕಾರಣವಾಗುತ್ತದೆ. ಇದನ್ನು ತಡೆಯಬೇಕು ಎಂದರೆ, ಸ್ಮಾರ್ಟ್​ಫೋನ್​ಗಳನ್ನು ತ್ವಚೆಯಿಂದ 10 ಸೆಂ.ಮೀ ದೂರ ಇಡುವುದು ಅವಶ್ಯವಾಗಿದೆ.

ನಿದ್ರೆಗೆ ಭಂಗ: ನಿಮ್ಮ ಕಣ್ಣಿನ ಸುತ್ತಲಿನ ತ್ವಚೆ ಕಳಾಹೀನವಾಗಿ, ಕಪ್ಪಾಗಿದ್ದರೆ ಇದು ನೀಲಿ ಬೆಳಕಿನ ನೇರ ಪರಿಣಾಮವೂ ಆಗಿರುತ್ತದೆ. ಇದೇ ವೇಳೆ ಇದು ನಿದ್ರೆ ಮೇಲೆ ಕೂಡ ಪರಿಣಾಮ ಬೀರುತ್ತದೆ. ಮೆಲಟೊನಿನ್​ ಉತ್ಪಾದನೆಯನ್ನು ಹತ್ತಿಕ್ಕುವಲ್ಲಿ ಈ ನೀಲಿ ಬೆಳಕು ಸಹಾಯ ಮಾಡುತ್ತದೆ. ಆದರೆ ಮೆಲನಿನ್​ ಅನ್ನು ರಾತ್ರಿ ಮಲಗುವ ಸಮಯದಲ್ಲಿ ಹತ್ತಿಕ್ಕುವುದು ನಿದ್ರೆಗೆ ಭಂಗ ತರುತ್ತದೆ. ಅಲ್ಲದೇ ಇದು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.

ಮಲಗುವ ಸಮಯದಲ್ಲಿ ನೀಲಿ ಬೆಳಕಿಗೆ ಒಡ್ಡಿಕೊಂಡಾಗ ಇದು ನಿದ್ರೆಯ ಸಹಕ ಪ್ರಕ್ರಿಯೆಯನ್ನು ತೊಂದರೆ ಮಾಡುತ್ತದೆ. ಇದರಿಂದ ನಿದ್ರೆಗೆ ಜಾರುವುದು ಕಷ್ಟವಾಗುವ ಜೊತೆಗೆ ನಿದ್ರೆ ಸಾಮಾರ್ಥ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಜೊತೆಗೆ ಸಾಮಾಜಿಕ ಜಾಲತಾಣದ ಮಾಹಿತಿ, ಸುದ್ದಿ ಲೇಖನಗಳು, ವಿಡಿಯೋ ಗೇಮ್​ ಅಥವಾ ಇಮೇಲ್ ಕೆಲಸಗಳು ಮೆದುಳನ್ನು ಕ್ರಿಯಾಶೀಲವಾಗಿ ಆಲರ್ಟ್​ ಆಗಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ನಿದ್ರೆಗೆ ಮಿದುಳು ಜಾರುವ ಪ್ರಕ್ರಿಗೆ ತೊಡಕಾಗುತ್ತದೆ.

ದೀರ್ಘಕಾಲದ ನಿದ್ರೆ ಭಂಗವೂ ತ್ವಚೆಯ ಮೇಲೆ ಹೆಚ್ಚಿನ ಹಾನಿಗೆ ಕಾರಣವಾಗುತ್ತದೆ. ಇದು ಮೊಡವೆ, ಎಸ್ಜಿಮಾ ಮತ್ತು ರೊಸಾಸಿಯಾನಂತಹ ಸಮಸ್ಯೆಗೆ ಕಾರಣವಾಗುತ್ತದೆ. ನಿದ್ರೆ ಭಂಗವೂ ಕಾರ್ಟಿಸೋಲ್​ ಮಟ್ಟವನ್ನು ಅಡ್ಡಿ ಪಡಿಸುತ್ತದೆ. ಕಾರ್ಟಿಸೋಲ್​ ಒತ್ತಡದ ಹಾರ್ಮೋನ್​ ಕೊಲಜನ್​ ತುಂಡಾಗುವಿಕೆಗೆ ಕಾರಣವಾಗುತ್ತದೆ. ಕೊಲಜನ್​ ತ್ವಚೆಯ ಬಿಗಿತನ ನೀಡುವ ಪ್ರೋಟಿನ್​ ಆಗಿದ್ದು, ಇದು ಸುಕ್ಕಿಗೆ ಕಾರಣವಾಗುತ್ತದೆ. ಅಲ್ಲದೇ, ಇದು ತ್ವಚೆಯ ಹಾನಿ ಮತ್ತು ಶುಷ್ಕತೆಗೆ ಕಾರಣವಾಗುತ್ತದೆ.

ನೀಲಿ ಬೆಳಕು ತಗ್ಗಿಸುವ ಮಾರ್ಗ: ನೀಲಿ ಬೆಳಕಿನಿಂದ ತ್ವಚೆಗೆ ಹಾನಿಯಾಗದಂತೆ ಕಾಪಾಡಲ ಇರುವ ಮಾರ್ಗ ಎಂದರೆ ಇದಕ್ಕೆ ಹೆಚ್ಚು ತೆರೆದುಕೊಳ್ಳದಿರುವುದು. ಅದರಲ್ಲೂ ರಾತ್ರಿ ಸಮಯದಲ್ಲಿ ನಿದ್ರೆಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು.

  • ರಾತ್ರಿ ಸಮಯದಲ್ಲಿ ಅನಿವಾರ್ಯವಾಗಿ ನೀಲಿ ಬೆಳಕಿಗೆ ಒಡ್ಡಿಕೊಳ್ಳಲೇ ಬೇಕಾದಾಗ ನೈಟ್​ಮೂಡ್​ ಸೆಟ್ಟಿಂಗ್​ ಬಳಕೆ ಮಾಡುವುದು. ಇಲ್ಲ ಬ್ಲೂ ಲೈಟ್​ ಫಿಲ್ಟರ್​ ಆ್ಯಪ್​ ಬಳಕೆ ಮಾಡುವುದು.
  • ನಿದ್ರೆಗೆ ಮುನ್ನ ಆದಷ್ಟು ಇವುಗಳ ಬಳಕೆಯಿಂದ ದೂರ ಇರುವುದು ಸೂಕ್ತ. ಬೆಡ್​ಟೈಮ್​ ಎಂಬುದು ಸಂಪೂರ್ಣ ದೇಹ, ಮನಸ್ಸಿಗೆ ನೀಡುವ ವಿಶ್ರಾಂತಿಯಾಗಿದ್ದು, ಈ ವೇಳೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಅವಶ್ಯವಾಗಿದೆ. ಇದರಿಂದ ತ್ವಚೆಯ ಆರೋಗ್ಯದ ಮೇಲಿನ ಪರಿಣಾಮವನ್ನು ತಡೆಗಟ್ಟಬಹುದು
  • ನೀಲಿ ಬೆಳಕು ನಿಮ್ಮ ತ್ವಚೆ ಮೇಲೆ ಹೆಚ್ಚಿನ ಪರಿಣಾಮ ಬೀರದಂತೆ ಫೋನ್​ ಅಥವಾ ಇತರೆ ಸಾಧನವನ್ನು ಇರಿಸುವುದು.
  • ಸನ್​ಸ್ಕ್ರೀನ್​, ಮಿನರಲ್ಸ್​, ಟೈಟಾನಿಯಂ ಡೈಆಕ್ಸೈಡ್​ ಮತ್ತು ಐರನ್​ ಆಕ್ಸೈಡ್​ ಹೊಂದಿರುವ ಸ್ಕೀನ್​ ಕೇರ್​ಗಳ ಬಳಕೆ
  • ನೀಲಿ ಬೆಳಕಿನ ತೆರೆದುಕೊಳ್ಳುವಿಕೆ ತ್ವಚೆಯ ಕಾಳಜಿ ವಿಷಯವಾಗಿದೆ. ಅದರಲ್ಲೂ ಕಪ್ಪು ವರ್ಣದ ತ್ವಚೆ ಹೊಂದಿರುವವರಲ್ಲಿ ಇದು ಪಿಗ್ಮೆಂಟೆಷನ್​ ಸಮಸ್ಯೆಗೆ ಕಾರಣವಾಗುತ್ತದೆ ಎಂಬ ಕುರಿತು ಇನ್ನೂ ಸಂಶೋಧನೆ ನಡೆಯುತ್ತಿದೆ.

ಇದನ್ನೂ ಓದಿ: ಸ್ಮಾರ್ಟ್​ಫೋನ್ ಓವರ್ ಹೀಟ್ ಆಗ್ತಿದೆಯಾ? ತಣ್ಣಗಾಗಿಸಲು ಹೀಗೆ ಮಾಡಿ

Last Updated : Jul 26, 2024, 5:11 PM IST

ABOUT THE AUTHOR

...view details