ಹೈದರಾಬಾದ್ :ಜಗತ್ತಿನಲ್ಲೆಡೆ ದ್ವಿದಳ ಧಾನ್ಯಗಳು ಶತಕೋಟಿ ಜನರಿಗೆ ಪೌಷ್ಟಿಕಾಂಶವನ್ನು ಒದಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ. ಹೀಗಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2019 ರಲ್ಲಿ ಫೆಬ್ರವರಿ 10 ಅನ್ನು ವಿಶ್ವ ದ್ವಿದಳ ಧಾನ್ಯಗಳ ದಿನವೆಂದು ಅಧಿಕೃತವಾಗಿ ಘೋಷಿಸಿದೆ. 2016 ಅನ್ನು ಅಂತಾರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷ (ಐವೈಪಿ) ಎಂದು ಘೋಷಿಸಿತು. ಸುಸ್ಥಿರ ಆಹಾರ ಉತ್ಪಾದನೆಯಲ್ಲಿ ಅವುಗಳ ಪೌಷ್ಟಿಕಾಂಶ ಮತ್ತು ಪ್ರಯೋಜನಗಳ ಬಗ್ಗೆ ಒತ್ತಿ ಹೇಳಿತು.
ದ್ವಿದಳ ಧಾನ್ಯಗಳು ಏಕೆ ಅಗತ್ಯ? :ದ್ವಿದಳ ಧ್ಯಾನಗಳು ಹೆಚ್ಚು ಪ್ರೋಟೀನ್ ಅಂಶಗಳನ್ನು ಹೊಂದಿದ್ದು, ಮಾಂಸಕ್ಕೆ ಸರಿ ಸಮಾನವಾಗಿದೆ. ಅಲ್ಲದೇ ಮಾಂಸಗಿಂತ ಕಡಿಮೆ ಕೊಬ್ಬಿನಾಂಶ ಇರುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ಬೇಗ ಜೀರ್ಣ ಕ್ರಿಯೆ ಆಗುವ ಸಮರ್ಥ್ಯ ಇರುವುದರಿಂದ ರಕ್ತದಲ್ಲಿನ ಸಕ್ಕರೆ ನಿರ್ವಹಣೆಯಲ್ಲಿ ಸಹಾಯ ಮಾಡುತ್ತವೆ. ಆರೋಗ್ಯ ಸಂಸ್ಥೆಗಳು ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ದ್ವಿದಳ ಧಾನ್ಯಗಳನ್ನು ತಿನ್ನಲು ಶಿಫಾರಸು ಮಾಡುತ್ತವೆ. ಬೊಜ್ಜು ಕರಗಿಸುವಲ್ಲಿ ದ್ವಿದಳ ಧಾನ್ಯಗಳು ಪರಿಣಾಮಕಾರಿಯಾಗಿವೆ. ದ್ವಿದಳ ಧ್ಯಾನ್ಯಗಳಲ್ಲಿ ಸಾರಜನಕ - ಫಿಕ್ಸಿಂಗ್ ಗುಣಲಕ್ಷಣಗಳಿರುತ್ತದೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಕೃಷಿ ಭೂಮಿಯ ಉತ್ಪಾದಕತೆಯನ್ನು ಉತ್ತೇಜಿಸುತ್ತವೆ.
ಪ್ರಭೇದಗಳು :ಪ್ರಮುಖವಾಗಿ ದ್ವಿದಳ ಧಾನ್ಯಗಳೆಂದರೆ, ಕಡಲೆ, ಮೂಂಗ್ ಬೀನ್ಸ್, ಉರಡ್, ಮಸೂರ್, ಬಟಾಣಿ ಮತ್ತು ವಿವಿಧ ಬೀನ್ಸ್ ಸೇರಿವೆ. ಹೆಚ್ಚಿನ ಉತ್ಪಾದಕತೆಯ ಪ್ರದೇಶಗಳಲ್ಲಿ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಬೆಳಯಲಾಗುತ್ತದೆ.