ETV Bharat / lifestyle

ಸಿರಿ ಧಾನ್ಯಗಳ ವಿಶೇಷ ರೆಸಿಪಿ: ಆರೋಗ್ಯಕರ ಸಜ್ಜೆಯ ಗರಿಗರಿಯಾದ ವಡಾ, ಎಲ್ಲರಿಗೂ ಇಷ್ಟವಾಗುತ್ತೆ!

ನಾವು ನಿಮಗಾಗಿ ಸಿರಿ ಧಾನ್ಯಗಳಿಂದ ತಯಾರಿಸಲಾಗುವ ವಿಶೇಷ ರೆಸಿಪಿಯೊಂದನ್ನು ತಂದಿದ್ದೇವೆ. ಅದುವೇ.. ಆರೋಗ್ಯಕರ ಸಜ್ಜೆಯ ಗರಿಗರಿಯಾದ ವಡಾ. ಸಜ್ಜೆಯ ವಡಾ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

SWEET SAJJE VADA  SAJJE VADALU  MILLET VADA RECIPE  SWEET SAJJE VADA AT HOME
ಸಜ್ಜೆಯ ಗರಿಗರಿಯಾದ ವಡಾ (ETV Bharat)
author img

By ETV Bharat Lifestyle Team

Published : 3 hours ago

How to Make Sajje Vada: ಸಿರಿ ಧಾನ್ಯಗಳು ಆರೋಗ್ಯಕ್ಕೆ ಒಳ್ಳೆಯದು. ಬಹುತೇಕರು ಅವುಗಳನ್ನು ತಿನ್ನಲು ಕಷ್ಟಪಡುತ್ತಾರೆ. ಸಿರಿ ಧಾನ್ಯಗಳಿಂದ ರುಚಿ ರುಚಿಯಾದ ಅಡುಗೆಗಳನ್ನು ತಯಾರಿಸಬಹುದು. ನಿಮಗಾಗಿ ನಾವು ಸಜ್ಜೆಯ ವಡಾ ರೆಸಿಪಿ ತಂದಿದ್ದೇವೆ. ಇಲ್ಲಿ ತಿಳಿಸಿರುವಂತೆ ಸಜ್ಜೆ ವಡಾ ಮಾಡುವುದು ಹೇಗೆ? ಅದಕ್ಕೆ ಬೇಕಾಗುವ ಸಾಮಗ್ರಿಗಳು ಯಾವುವು ಎಂಬುದನ್ನು ತಿಳಿಯೋಣ.

ಸಜ್ಜೆಯ ವಡಾಕ್ಕೆ ಬೇಕಾಗುವ ಪದಾರ್ಥಗಳೇನು?:

  • ಸಜ್ಜೆ - ಕೆಜಿ
  • ಬೆಲ್ಲ- ಅರ್ಧ ಕೆಜಿ
  • ಏಲಕ್ಕಿ- 20
  • ಒಣ್ಣ ಕೊಬ್ಬರಿ- 1
  • ನೀರು - ಅಗತ್ಯಕ್ಕೆ ತಕ್ಕಷ್ಟು ಸಾಕಷ್ಟು
  • ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು ಸಾಕಷ್ಟು

ಸಜ್ಜೆಯ ವಡಾಕ್ಕೆ ತಯಾರಿಸೋದು ಹೇಗೆ?:

  • ಮೊದಲು ಸಜ್ಜೆಯನ್ನು ಶುದ್ಧ ನೀರಿನಲ್ಲಿ ತೊಳೆಯಿರಿ. ನಂತರ ಅವುಗಳನ್ನು ಒಣ ಬಟ್ಟೆಯ ಮೇಲೆ ಹರಡಿ. ಸಂಪೂರ್ಣವಾಗಿ ಒಣಗಲು ಬಿಡಿ.
  • ಈಗ ಸಾಮಗ್ರಿಗಳನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಎಲ್ಲ ಸಜ್ಜೆ ಹಿಟ್ಟನ್ನು ಒಂದು ತಟ್ಟೆಯಲ್ಲಿ ತೆಗೆದುಕೊಳ್ಳಿ.
  • ಈಗ ಒಣ ಕೊಬ್ಬರಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಕೊಬ್ಬರಿ ತುಂಡುಗಳು ಮತ್ತು ಏಲಕ್ಕಿ ಪುಡಿಯನ್ನು ಮಿಕ್ಸಿಂಗ್​ ಬೌಲ್​ನಲ್ಲಿ ಹಾಕಿ.
  • ಮೊದಲು ಸಿದ್ಧಪಡಿಸಿದ ಹಿಟ್ಟಿಗೆ ಕೊಬ್ಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಅದರ ಬಳಿಕ ಒಲೆಯ ಮೇಲೆ ಕಡಾಯಿ ಇಡಿ ಬೆಲ್ಲ ಸೇರಿಸಿ ಹಾಗೂ ಅದಕ್ಕೆ ಒಂದು ಲೋಟ ನೀರು ಸುರಿಯಿರಿ. ಬೆಲ್ಲ ಕರಗಿದ ನಂತರ ಪಾಕ ಸಿದ್ಧವಾದ ಬಳಿಕ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
  • ಇದಾದ ನಂತರ ಸಜ್ಜೆಯ ಹಿಟ್ಟಿಗೆ ಪಾಕವನ್ನು ಸೌಟಿನ ಸಹಾಯದಿಂದ ಸುರಿದುಕೊಂಡು, ಬಳಿಕ ಮಿಶ್ರಣವನ್ನು ಚೆನ್ನಾಗಿ ಸಿದ್ಧಪಡಿಸಿ ಇಟ್ಟುಕೊಳ್ಳಿ.
  • ಈಗ ಸಜ್ಜೆ ವಡಾಗಳನ್ನು ತಯಾರಿಸಲು ಅಗತ್ಯವಿರುವಷ್ಟು ನೀರನ್ನು ಸೇರಿಸಿ ಹಿಟ್ಟನ್ನು ಸಂಪೂರ್ಣವಾಗಿ ಮಿಶ್ರಣ ಮಾಡಿ. (ವಡಾಗಳಿಗೆ ಹಿಟ್ಟು ತುಂಬಾ ಗಟ್ಟಿಯಾಗಿರಬಾರದು, ತೆಳುವಾಗಿರಬಾರದು, ಮಧ್ಯಮ ರೀತಿಯಲ್ಲಿದ್ದರೆ ಉತ್ತಮ)
  • ಈಗ ವಡೆಯನ್ನು ಕರಿಯಲು ಒಲೆಯ ಮೇಲೆ ಬಾಣಲೆ ಇಡಿ.
  • ಅದರಲ್ಲಿ ಡೀಪ್​ ಪ್ರೈ ಮಾಡಲು ಸಾಕಷ್ಟು ಎಣ್ಣೆಯನ್ನು ಸುರಿಯಿರಿ ಹಾಗೂ ಆ ಎಣ್ಣೆ ಬಿಸಿಯಾದ ನಂತರ ಸ್ವಲ್ಪ ಗೋಲ್​ ಆಕಾರದಲ್ಲಿ ವಡಾಗಳನ್ನು ಸಿದ್ಧಪಡಿಸಿ ಅದರೊಳಗೆ ಬಿಡಬೇಕು.
  • ಅವುಗಳನ್ನು ಎರಡು ಬದಿಯಲ್ಲಿ ಸರಿಯಾಗಿ ಫ್ರೈ ಮಾಡಿ. ಸ್ಟವ್ ಅನ್ನು ಮಧ್ಯಮ ಉರಿಯಲ್ಲಿ ಇಟ್ಟು ಕಂದು ಬಣ್ಣಕ್ಕೆ ತಿರುಗುವವರಿಗೆ ಫ್ರೈ ಮಾಡಿ ಮತ್ತು ತಟ್ಟೆಯಲ್ಲಿ ತೆಗೆದುಕೊಳ್ಳಿ. ಉಳಿದ ಹಿಟ್ಟಿನೊಂದಿಗೆ ಇದೇ ರೀತಿಯಲ್ಲಿ ವಡಾಗಳನ್ನು ಸಿದ್ಧಪಡಿಸಿ.
  • ಈ ವಡಾಗಳು ತುಂಬಾ ರುಚಿಯಾಗಿರುತ್ತವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇವುಗಳನ್ನು ಇಷ್ಟಪಟ್ಟು ಸೇವಿಸುತ್ತಾರೆ. ಇವುಗಳನ್ನು ತಿನ್ನುವುದರಿಂದ ನಾಲಿಗೆಗೆ ರುಚಿ ಜೊತೆಗೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
  • ನಿಮಗೆ ಇಷ್ಟವಾದರೆ ಆರೋಗ್ಯಕರ ಸಜ್ಜೆಯ ವಡಾಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ.

ಇವುಗಳನ್ನೂ ಓದಿ:

ಕ್ರಿಸ್ಪಿ & ಟೇಸ್ಟಿಯಾದ ಈರುಳ್ಳಿ ಬಜ್ಜಿ ಹತ್ತೇ ನಿಮಿಷದಲ್ಲಿ ರೆಡಿ: ಟೀ ಜೊತೆಗೆ ಬಿಸಿ ಬಿಸಿ ಬಜ್ಜಿ ತಿನ್ನುವ ಮಜವೇ ಬೇರೆ!

ಹೋಟೆಲ್ ಸ್ಟೈಲ್ ಕ್ರಿಸ್ಪಿಯಾದ ಮೈಸೂರು ಬಜ್ಜಿ ಮಾಡುವುದು ಹೇಗೆ? ನೀವು ಈ ಟಿಪ್ಸ್ ಅನುಸರಿಸಿದರೆ ಸಖತ್​ ಟೇಸ್ಟಿ.. ಟೇಸ್ಟಿ..

ನೀವು ಉಡುಪಿ ಇಡ್ಲಿ- ವಡಾ ಸಾಂಬಾರ್​ ಪ್ರಿಯರೇ?: ಹಾಗಾದರೆ ಮನೆಯಲ್ಲೇ ಮಾಡಿ ಹೋಟೆಲ್ ಶೈಲಿಯ ಘಮ ಘಮ​ ಸಾಂಬಾರ್​

ಹೋಟೆಲ್ ಸ್ಟೈಲ್​ನ 'ಮೊಸರು ವಡೆ': ಮನೆಯಲ್ಲಿ ತಯಾರಿಸೋದು ತುಂಬಾ ಸುಲಭ, ರುಚಿಯೂ ಅದ್ಭುತ!

ಗರಿ ಗರಿ "ಮಸಾಲೆ ವಡೆ" ತಯಾರಿಸಿ; ಈ ರೀತಿ ಮಾಡಿದರೆ ತುಂಬಾ ರುಚಿ!

ಮತ್ತೆ ಮತ್ತೆ ತಿನ್ನಬೇಕೆನಿಸುವ ಆಂಧ್ರ ಸ್ಪೆಷಲ್​ 'ದಿಬ್ಬರೊಟ್ಟಿ': ಇದು ಆರೋಗ್ಯಕರ ಮತ್ತು ಟೇಸ್ಟಿ ಬ್ರೇಕ್​ಫಾಸ್ಟ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.