ETV Bharat / state

ಯಾವುದೇ ಕಾರಣಕ್ಕೂ ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಬಾರದು: ಸಿಎಂ ಸಿದ್ದರಾಮಯ್ಯ

ಸರ್ಕಾರಿ ನೌಕರರು ಬಿಪಿಎಲ್​ಗೆ ಅರ್ಹರಲ್ಲ. ಅವರಿಗೆ ಎಪಿಎಲ್ ಕೊಡಿ. ಯಾರಾದರೂ ಬಿಪಿಎಲ್​ನವರು ಇದ್ದರೆ ಅರ್ಜಿ ಹಾಕಿ. ಅಂತಹವರಿಗೆ ಮತ್ತೆ ಕಾರ್ಡ್ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

CM CLARIFIES ON BPL CARD
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : 3 hours ago

ಬೆಂಗಳೂರು: ಯಾವುದೇ ಕಾರಣಕ್ಕೂ ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಬಾರದು. ಒಂದಿಬ್ಬರು ಅನರ್ಹರು ಸೇರಿಕೊಂಡರೂ ಪರವಾಗಿಲ್ಲ, ಅರ್ಹರಿಗೆ ಮಾತ್ರ ತಪ್ಪಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ್ ಜೋಡೊ ಭವನದಲ್ಲಿ ಮಂಗಳವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಪಿಎಲ್, ಎಪಿಎಲ್ ಅಂದರೇನು?. ಬಡತನ ರೇಖೆಗಿಂತ ಕೆಳಗಿರುವವರು. ಮೇಲಿರುವವರು ಎಂದರ್ಥ. ಬಡವರಿಗೆ ಬಿಪಿಎಲ್ ಕಾರ್ಡ್ ಬಿಟ್ಟು ಹೋಗಬಾರದೆಂದು ಆಹಾರ ಸಚಿವ ಕೆ.ಹೆಚ್​ ಮುನಿಯಪ್ಪಗೆ ಸೂಚಿಸಿದರು. ಶ್ರೀಮಂತರು, ಆದಾಯ ತೆರಿಗೆ ಕಟ್ಟುವವರು, ಸರ್ಕಾರಿ ನೌಕರರು ಬಿಪಿಎಲ್​ಗೆ ಅರ್ಹರಲ್ಲ. ಅವರಿಗೆ ಎಪಿಎಲ್ ಕೊಡಿ. ಯಾರಾದರೂ ಬಿಪಿಎಲ್​ನವರು ಇದ್ದರೆ ಅರ್ಜಿ ಹಾಕಿ. ಅಂತಹವರಿಗೆ ಮತ್ತೆ ಕಾರ್ಡ್ ಕೊಡುತ್ತೇವೆ. ಈ ವಿಚಾರದಲ್ಲಿ ಬಿಜೆಪಿಯವರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದರು.

ಯಾವ ಸರ್ಕಾರದಿಂದಲೂ ನಿಲ್ಲಿಸಲು ಆಗವುದಿಲ್ಲ: ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಸರ್ಕಾರ ಹಾಗೂ ಇಂದಿರಾ ಗಾಂಧಿ ಅವರು ಜಾರಿಗೆ ತಂದಿರುವ ಉಳುವವನೇ ಭೂಮಿಯ ಒಡೆಯ, ಪಿಂಚಣಿ, ಮಧ್ಯಾಹ್ನದ ಬಿಸಿಯೂಟ, ಪಡಿತರ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳನ್ನು ಯಾರಿಂದಲೂ ಹಾಗೂ ಯಾವುದೇ ಸರ್ಕಾರಗಳಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಜವಾಹರ​ಲಾಲ್ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್ ಅವರ ಕಾಲದ ತನಕ ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತಂದ ಒಂದೇ ಒಂದು ಯೋಜನೆಗಳನ್ನು ನಿಲ್ಲಿಸುವ ಶಕ್ತಿ, ಧೈರ್ಯ ಯಾರಿಗೂ ಬರಲಿಲ್ಲ ಎಂದರು.

ರಾಜ್ಯದ ಜನರಿಗೆ ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಹೊಸ ಯೋಜನೆಗಳನ್ನು ನೀಡುತ್ತದೆ. ಮತ್ತೆ ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಮ್ಮ ಬಳಿ ತಂತ್ರ, ಮಂತ್ರ, ಒಗ್ಗಟ್ಟು, ನಾಯಕತ್ವ ಹಾಗೂ ಶಕ್ತಿಯಿದೆ. ಕಾರ್ಯಕರ್ತರು ಆಶಾಭಾವನೆ ಮತ್ತು ಒಗ್ಗಟ್ಟಿನಿಂದ ನಮ್ಮ ಜೊತೆ ಇದ್ದರೆ ಸಾಕು ಎಂದು ಹೇಳಿದರು.

ಇದನ್ನೂ ಓದಿ:

ರಾಜ್ಯದಲ್ಲಿ ಪಡಿತರ ಚೀಟಿ ಗದ್ದಲ: ಬಿಪಿಎಲ್​ ಕಾರ್ಡ್​ಗೆ ಯಾರು ಅನರ್ಹರು, ಈವರೆಗೆ ರದ್ದಾಗಿದ್ದೆಷ್ಟು? ಸಮಗ್ರ ವರದಿ

ಅನರ್ಹ ರೇಷನ್​​ ಕಾರ್ಡ್​ಗಳು ಮಾತ್ರ ರದ್ದು, ಅರ್ಹ ಬಡವರಿಗೆ ಕಾರ್ಡ್​ ತಪ್ಪಿಸುವುದಿಲ್ಲ: ಸಿಎಂ ಭರವಸೆ

ಶಿವಮೊಗ್ಗ: 50 ಸಾವಿರಕ್ಕೂ ಹೆಚ್ಚು ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ, ಸರ್ಕಾರಿ ನೌಕರರಿಂದಲೂ ಬಳಕೆ! - BPL Card

ETV Bharat Logo

Copyright © 2024 Ushodaya Enterprises Pvt. Ltd., All Rights Reserved.