ETV Bharat / health

ತೂಕ ಇಳಿಸಲು ದಿನಕ್ಕೆ ಎಷ್ಟು ಸ್ಟೆಪ್​ಗಳನ್ನು ಹತ್ತಬೇಕು ಗೊತ್ತಾ? ನಿಮಗಿದು ತಿಳಿದರೆ ಮೆಟ್ಟಿಲುಗಳನ್ನೇ ಹೆಚ್ಚು ಬಳಸುತ್ತೀರಿ

ಮೆಟ್ಟಿಲುಗಳನ್ನು ಹತ್ತುವ ಮೂಲಕ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ. ದಿನದಲ್ಲಿ ಹೀಗೆ ಹೆಚ್ಚು ಬಾರಿ ಸ್ಟೆಪ್​ಗಳನ್ನು ಹತ್ತಿ ಇಳಿದರೆ ಬೇಗ ವೇಟ್ ಬೇಗ ಕಡಿಮೆಯಾಗುತ್ತದೆ. ಜೊತೆಗೆ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ವೈದ್ಯರು ತಿಳಿಸುತ್ತಾರೆ.

HOW MANY STAIRS CLIMB A DAY  HOW MANY STEPS SHOULD I CLIMB A DAY  STAIRS CLIMBING CALORIES BURN  STEP CLIMBING FOR WEIGHT LOSS
ಸಾಂರ್ದಭಿಕ ಚಿತ್ರ (Getty Images)
author img

By ETV Bharat Health Team

Published : 3 hours ago

Stairs Climbing for Weight Loss: ಇತ್ತೀಚಿನ ದಿನಗಳಲ್ಲಿ ದೈಹಿಕವಾಗಿ ಫಿಟ್ ಆಗಿ ಮತ್ತು ಕ್ರಿಯಾಶೀಲರಾಗಿರಲು ಮೆಟ್ಟಿಲುಗಳನ್ನು ಹತ್ತುವುದು ಜನಪ್ರಿಯವಾಗಿದೆ. ವ್ಯಾಯಾಮ ಮಾಡಲು ಸಮಯವಿಲ್ಲದವರಿಗೆ ಹಾಗೂ ಜಿಮ್‌ಗೆ ಹೋಗಲು ಸಮಯವಿಲ್ಲದವರಿಗೆ ಇದು ತುಂಬಾ ಉಪಯುಕ್ತವಾಗಿದೆ.

ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವವರೂ ಮೆಟ್ಟಿಲು ಹತ್ತಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಆದರೆ, ಮೆಟ್ಟಿಲು ಹತ್ತುವುದರಿಂದ ಎಷ್ಟು ತೂಕ ಕಡಿಮೆ ಮಾಡಿಕೊಳ್ಳುಬಹುದು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನಾ ವರದಿಯನ್ನು ಇಂಟರ್ನ್ಯಾಷನಲ್ ಜರ್ನಲ್ ಆಫ್ ಫಿಸಿಕಲ್ ಎಜುಕೇಶನ್, ಸ್ಪೋರ್ಟ್ಸ್, ಹೆಲ್ತ್ ಪ್ರಕಟಿಸಿದೆ.

ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ. ಮನೋಜ್ ಕುಮಾರ್ ಧಡ್ವಾಲ್ ಅವರು "Effect of Stair Climbing on Cardiovascular Risk Factors in Young Adults" ಎಂಬ ಅಧ್ಯಯನದಲ್ಲಿ ಪಾಲ್ಗೊಂಡರು. ಮೆಟ್ಟಿಲುಗಳನ್ನು ಹತ್ತುವುದು ಕ್ಯಾಲೊರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ ಹಾಗೂ ತೂಕವನ್ನು ಕಳೆದುಕೊಳ್ಳಲು, ಜೊತೆಗೆ ನಿಮ್ಮ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಈ ಸಂಶೋಧನೆಯು ತೋರಿಸುತ್ತದೆ. ಮೆಟ್ಟಿಲುಗಳನ್ನು ಹತ್ತುವುದು ದೇಹದ ಪ್ರಮುಖ ಸ್ನಾಯುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ.

ನಡಿಗೆಯಂತಹ ಚಟುವಟಿಕೆಗಳಿಗೆ ಹೋಲಿಸಿದರೆ ಮೆಟ್ಟಿಲುಗಳನ್ನು ಹತ್ತುವುದು ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತದೆ. ಮೆಟ್ಟಿಲುಗಳನ್ನು ಹತ್ತುವುದರಿಂದ ಪ್ರತಿ ನಿಮಿಷಕ್ಕೆ ಸುಮಾರು 8 ರಿಂದ 11 ಕ್ಯಾಲೊರಿಗಳನ್ನು ಕರಗಿಸಬಹುದು. ಪ್ರತಿದಿನ ಮೆಟ್ಟಿಲುಗಳನ್ನು ಹತ್ತುವುದರಿಂದ ತೂಕವನ್ನು ಸುಲಭವಾಗಿ ಕಳೆದುಕೊಳ್ಳು ಸಾಧ್ಯವಾಗುತ್ತದೆ.

ದಿನಕ್ಕೆ ಎಷ್ಟು ಮೆಟ್ಟಿಲು ಹತ್ತಿದರೆ ಉತ್ತಮ? ವಾರದಲ್ಲಿ ಐದು ದಿನ ಸುಮಾರು 30 ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತುವುದು ನಿಮ್ಮ ತೂಕವನ್ನು ಕಳೆದುಕೊಳ್ಳಲು ತುಂಬಾ ಸಹಾಯ ಮಾಡುತ್ತದೆ. ಇದು ಸುಮಾರು 500ರಿಂದ 700 ಕ್ಯಾಲೋರಿ ಕರಗಿಸಲು ಸಮನಾಗಿರುತ್ತದೆ. ಮೊದಲು ಕಡಿಮೆ ಮೆಟ್ಟಿಲುಗಳಿಂದ ಪ್ರಾರಂಭಿಸಿದರೆ ಒಳ್ಳೆಯದು. ಒಂದು ಸಮಯದಲ್ಲಿ ಹೆಚ್ಚು ಮೆಟ್ಟಿಲುಗಳನ್ನು ಹತ್ತಬೇಡಿ.

ಇಲ್ಲದಿದ್ದರೆ, ದೇಹದ ತೂಕ ಸೇರಿದಂತೆ ವಿವಿಧ ಅನೇಕ ವಿಷಯಗಳು, ಕ್ಯಾಲೊರಿಗಳನ್ನು ಕರಗಿಸುವುದರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಸಮತೋಲಿತ ಆಹಾರವನ್ನು ಸೇವಿಸುವವರು ಮೆಟ್ಟಿಲುಗಳನ್ನು ಹತ್ತುವ ಮೂಲಕ ದಿನಕ್ಕೆ 200ರಿಂದ 300 ಕ್ಯಾಲೊರಿಗಳನ್ನು ಕರಗಿಸುತ್ತಾರೆ. ಇದರಿಂದ ವಾರಕ್ಕೆ ಸುಮಾರು 200 ಗ್ರಾಂ ತೂಕ ಕಡಿಮೆಯಾಗಲಿದೆ ಎಂದು ತಜ್ಞರು ವಿವರಿಸುತ್ತಾರೆ.

ಮೆಟ್ಟಿಲುಗಳನ್ನು ಉತ್ತಮವಾಗಿ ಹತ್ತುವುದು ಹೇಗೆ? ಯಾವುದೇ ಯೋಜನೆ ಇಲ್ಲದೆ ಮೆಟ್ಟಿಲುಗಳನ್ನು ಹತ್ತುವುದು ಕಡಿಮೆ ಫಲಿತಾಂಶವನ್ನು ನೀಡುತ್ತದೆ. ತೂಕ ನಷ್ಟವು ತಂತ್ರ ಮತ್ತು ಸ್ಥಿರತೆಯನ್ನು ಅವಲಂಬಿಸಿರುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮೆಟ್ಟಿಲು ಹತ್ತುವಾಗ ತೆಗೆದುಕೊಳ್ಳಬೇಕಾದ ಸಲಹೆಗಳ ಬಗ್ಗೆ ತಿಳಿಯೋಣ.

  • ಮೂರು ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತಿದ ನಂತರ ವಿಶ್ರಾಂತಿ ಪಡೆಯಿರಿ. ಅದರ ನಂತರ ಮತ್ತೆ ಮೆಟ್ಟಿಲುಗಳನ್ನು ಹತ್ತಲು ಪ್ರಾರಂಭಿಸಿ. ಒಟ್ಟು 30 ನಿಮಿಷಗಳ ಕಾಲ ಇದನ್ನು ಪುನರಾವರ್ತಿಸಿ.
  • ಮೆಟ್ಟಿಲು ಹತ್ತುವ ವೇಗವನ್ನು ಹೆಚ್ಚಿಸುವುದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್​ ಮಾಡಲು ಸಾಧ್ಯವಾಗುತ್ತದೆ.
  • ಮೆಟ್ಟಿಲುಗಳನ್ನು ಹತ್ತುವಾಗ ಬೆನ್ನು ನೇರವಾಗಿ ಇರುವಂತೆ ನೋಡಿಕೊಳ್ಳಿ. ಅಲ್ಲದೆ, ಸಮತೋಲನವು ಸ್ನಾಯುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
  • ಸ್ನಾಯುಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬಯಸುವವರು ಭಾರವನ್ನು ಹೊತ್ತುಕೊಂಡು ಮೆಟ್ಟಿಲುಗಳ ಹತ್ತಬಹುದು. ಜೊತೆಗೆ ಒಂದು ಮೆಟ್ಟಿಲು ಬಿಟ್ಟು ಇನ್ನೊಂದು ಮೆಟ್ಟಿಲು ಹತ್ತಬಹುದು ಎನ್ನುತ್ತಾರೆ ಸಂಶೋಧಕರು.

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನ, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ.

ಇವುಗಳನ್ನು ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.