ಕರ್ನಾಟಕ

karnataka

By ETV Bharat Karnataka Team

Published : Jun 1, 2024, 5:33 AM IST

ETV Bharat / health

ಇಂದು ವಿಶ್ವ ಕ್ಷೀರದಿನ: ಏನಿದರ ಮಹತ್ವ? ಯಾಕಾಗಿ ಇವತ್ತೇ ಈ ದಿನ ಆಚರಣೆ ಮಾಡಲಾಗುತ್ತೆ? - World Milk Day

ಪ್ರತಿವರ್ಷ ಜೂನ್​ 1 ರಂದು ವಿಶ್ವ ಕ್ಷೀರದಿನಾಚರಣೆ ಮಾಡಲಾಗುತ್ತದೆ. ಏನಿದರ ಮಹತ್ವ. ಯಾಕಾಗಿ ಈ ದಿನ ಮಹತ್ವ ಪಡೆದುಕೊಂಡಿದೆ. ಈ ಎಲ್ಲ ಬಗ್ಗೆ ಈ ಲೇಖನದಲ್ಲಿ ಅರಿತುಕೊಳ್ಳೋಣ

World Milk Day
ಇಂದು ವಿಶ್ವ ಕ್ಷೀರದಿನ: ಏನಿದರ ಮಹತ್ವ? ಯಾಕಾಗಿ ಇವತ್ತೇ ಈ ದಿನ ಆಚರಣೆ ಮಾಡಲಾಗುತ್ತೆ? (ETV Bharat)

ಬೆಂಗಳೂರು:ವಿಶ್ವಾದ್ಯಂತ ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನಾಚರಣೆಯನ್ನ ಮಾಡಲಾಗುತ್ತದೆ. ಇದು ಜಾಗತಿಕ ಆಹಾರ ವ್ಯವಸ್ಥೆಗಳಲ್ಲಿ ಡೈರಿಯ ಪ್ರಮುಖ ಪಾತ್ರವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಆಚರಿಸಲಾಗುತ್ತಿರುವ ದಿನವಾಗಿದೆ. ವಿಶ್ವದ ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ಆರ್ಥಿಕ, ಪೌಷ್ಟಿಕಾಂಶ ಮತ್ತು ಸಾಮಾಜಿಕ ಪ್ರಯೋಜನಗಳನ್ನು ಒದಗಿಸುವುದು ಈ ದಿನದ ಉದ್ದೇಶವಾಗಿದೆ.

ವಿಶ್ವ ಹಾಲು ದಿನವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ - FAO ಜಾಗತಿಕ ಆಹಾರವಾಗಿ ಹಾಲಿನ ಪ್ರಾಮುಖ್ಯತೆಯನ್ನು ಗುರುತಿಸಲು ಮತ್ತು ಡೈರಿ ವಲಯವನ್ನು ಆಚರಿಸಲು 2001ರಿಂದ ಈ ದಿನವನ್ನು ಪರಿಚಯಿಸಲಾಯಿತು.

2024 ವಿಶ್ವ ಹಾಲು ದಿನದ ಥೀಮ್: ವಿಶ್ವವನ್ನು ಪೋಷಿಸಲು ಗುಣಮಟ್ಟದ ಹಾಲು ಹಾಗೂ ಅದರ ಉತ್ಪನ್ನಗಳನ್ನು ಪೋಷಿಸುವುದೇ ಆಗಿದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳು ಮಾನವಿಗೆ ಉತ್ತಮ ಪೌಷ್ಟಿಕಾಂಶಗಳನ್ನು ನೀಡುತ್ತವೆ. ಪ್ರಪಂಚದಾದ್ಯಂತ ಸಮತೋಲಿತ ಆಹಾರದ ಅತ್ಯಗತ್ಯ ಭಾಗ ಎಂದರೆ ಹಾಲು ಮತ್ತು ಹಾಲಿನ ಉತ್ಪನ್ನಗಳಾಗಿವೆ.

ಹಾಲೋತ್ಪಾದನೆಯ ಇತಿಹಾಸ:ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬಹಳ ದೊಡ್ಡದಾದ ಇತಿಹಾಸ ಇದೆ. ನವಶಿಲಾಯುಗದ ಸುಮಾರು 9000-7000 B.Cಯಿಂದ ಈ ಬಗೆಗಿನ ಇತಿಹಾಸ ಆರಂಭವಾಗುತ್ತದೆ. ಮನುಷ್ಯರು ಹಾಲು ಕುಡಿಯಲು ಆರಂಭಿಸಿದಾಗಿನಿಂದ ಇದಕ್ಕೆ ಇತಿಹಾಸ ಇದೆ. ಮಾನವರು ಮೊದಲಿನಿಂದ ಸಾಕು ಪ್ರಾಣಿಗಳೊಂದಿಗೆ ಒಡನಾಡ ಹೊಂದಿದ್ದರು. ಆಗಿನಿಂದಲೇ ಈ ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಹಾಲಿನಿಂದ ಪೋಷಕಾಂಶಗಳನ್ನು ಹೊರತೆಗೆಯಲು ಇದುವೇ ಪ್ರೇರಣೆ ಆಗಿದೆ. ಆರಂಭದಲ್ಲಿ ಹೆಚ್ಚಿನ ಮಾನವರು ಹುದುಗಿಸಿದ ಡೈರಿ ಉತ್ಪನ್ನಗಳನ್ನು ಸೇವಿಸಿ ಬದುಕಲು ಕಲಿತುಕೊಂಡರು.

ಹಾಲು ಹೆಚ್ಚು ವ್ಯಾಪಕವಾಗಿ ಲಭ್ಯವಾಗುತ್ತಿದ್ದಂತೆ ಇದು ಮಾನವರಿಗೆ ಪೌಷ್ಟಿಕಾಂಶದ ಪ್ರಮುಖ ಮೂಲವಾಯಿತು. ಪ್ರಪಂಚದ ಕೆಲವು ಭಾಗಗಳಲ್ಲಿ, ಹಾಲನ್ನು ಮಾಂಸಕ್ಕೆ ಬದಲಿಯಾಗಿ ಬಳಸಲಾಗುತ್ತಿತ್ತು. ಸೃಷ್ಟಿಕರ್ತನು ಹಾಲನ್ನು ಭೂಮಿಗೆ ಕಳುಹಿಸಿದ್ದಾನೆ ಎಂದು ಕೆಲವರು ನಂಬಿದ್ದರಿಂದ ಇದನ್ನು ಧಾರ್ಮಿಕ ಉದ್ದೇಶಗಳಿಗಾಗಿಯೂ ಬಳಸಲು ಪ್ರಾರಂಭ ಮಾಡಲಾಯಿತು.

ಭಾರತದಲ್ಲಿ ಕ್ಷೀರ ಕ್ರಾಂತಿ: 1970 ರಲ್ಲಿ ದಿವಂಗತ ಡಾ. ವರ್ಗೀಸ್ ಕುರಿಯನ್ ನೇತೃತ್ವದಲ್ಲಿ ಭಾರತವು ವಿಶ್ವದ ಅತಿದೊಡ್ಡ ಡೈರಿ ಅಭಿವೃದ್ಧಿ ಕಾರ್ಯಕ್ರಮವಾದ 'ಶ್ವೇತ ಕ್ರಾಂತಿ'ಗೆ ಚಾಲನೆ ನೀಡಿತು. ಗ್ರಾಮೀಣ ಭಾರತದಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ, ಹಾಲಿನ ಕೃಷಿಯು ಉದ್ಯೋಗ ಮತ್ತು ಆದಾಯದ ಅತಿದೊಡ್ಡ ಮೂಲವಾಗಿದೆ.

ಹಾಲು ಕುಡಿಯುವುದರಿಂದ ಆರೋಗ್ಯಕ್ಕಿರುವ ಪ್ರಯೋಜನಗಳೇನು?

  • ಹಾಲು ಹಲವು ಪೋಷಕಾಂಶಗಳ ಆಗರ
  • ಗುಣಮಟ್ಟದ ಪ್ರೋಟೀನ್‌ನಗಳ ಮೂಲವಾಗಿದೆ.
  • ಹಾಲು ಮಾನವನ ಮೂಳೆಯ ಆರೋಗ್ಯಕ್ಕೆ ಬೇಕಾದ ಆಹಾರವಾಗಿದೆ
  • ಹಾಲು ತೂಕ ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ

ಹಾಲಿನಿಂದ ಬಹುಮುಖ ಪ್ರಯೋಜನ; ಹಾಲು ಪೌಷ್ಟಿಕ ಪಾನೀಯವಾಗಿದ್ದು ಅದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಇದಲ್ಲದೇ, ಇದು ನಿಮ್ಮ ಆಹಾರದಲ್ಲಿ ಸುಲಭವಾಗಿ ಸೇರಿಸಬಹುದಾದ ಬಹುಮುಖ ಘಟಕಾಂಶವಾಗಿದೆ

ಇದನ್ನು ಓದಿ:ಕೇಸರಿ ವಸ್ತ್ರ, ಕೈಯಲ್ಲಿ ಜಪಮಾಲೆ: ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ- ಫೋಟೋಗಳು - PM Modi Meditation

ಐಸ್​ಲ್ಯಾಂಡ್​ನಲ್ಲಿ ಮತ್ತೆ ಜ್ವಾಲಾಮುಖಿ ಆರ್ಭಟ: ಕಳೆದ 6 ತಿಂಗಳಲ್ಲಿದು 5ನೇ ಸ್ಫೋಟ - Iceland Volcano

ABOUT THE AUTHOR

...view details