Lungs Health Tips:ದೇಹಕ್ಕೆ ಆಮ್ಲಜನಕ ಬಹಳ ಮುಖ್ಯ ಎಂಬುದು ನಮಗೆಲ್ಲರಿಗೂ ತಿಳಿದಿದೆ. ರಕ್ತಕ್ಕೆ ಆಮ್ಲಜನಕವನ್ನು ಪೂರೈಸುವಲ್ಲಿ ಶ್ವಾಸಕೋಶವು ವಿಶೇಷ ಪಾತ್ರವನ್ನು ವಹಿಸುತ್ತದೆ. ಆದರೆ, ಹೆಚ್ಚುತ್ತಿರುವ ಧೂಳು ಮತ್ತು ಮಾಲಿನ್ಯದಿಂದ ಶ್ವಾಸಕೋಶಕ್ಕೆ ನಿರಂತರ ಹಾನಿಯಾಗುತ್ತಿದೆ. ಈ ಕಾರಣಗಳು ಹೆಚ್ಚಾಗಿ ಶ್ವಾಸಕೋಶದ ಸೋಂಕನ್ನು ಉಂಟುಮಾಡುತ್ತವೆ ಎಂಬುದನ್ನು ಅನೇಕ ಜನರು ಗಮನಿಸುವುದೇ ಇಲ್ಲ.
ತಜ್ಞರ ಪ್ರಕಾರ, ಶ್ವಾಸಕೋಶವನ್ನು ಆರೋಗ್ಯಕರವಾಗಿಡಲು ಕೆಲವು ಆಹಾರಗಳನ್ನು ಸೇವನೆ ಮಾಡುವತ್ತ ಗಮನಹರಿಸಬೇಕಾಗುತ್ತದೆ. ಪೌಷ್ಟಿಕ ತಜ್ಞರು ಸಲಹೆಗಳನ್ನಿ ಇಲ್ಲಿ ಅರಿತುಕೊಳ್ಳೋಣ ಬನ್ನಿ.
- ಪಾಲಕ್:ಪಾಲಕ್ನಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳು ಹೇರಳವಾಗಿವೆ. ಉಸಿರಾಟದ ಸಮಯದಲ್ಲಿ ಉಂಟಾಗುವ ತೊಂದರೆಗಳನ್ನು ತೊಡೆದುಹಾಕಲು ಇದು ಉತ್ತಮ ಮಾರ್ಗವಾಗಿದೆ. ಇದರ ಜೊತೆಗೆ, ಪಾಲಕ್ನಲ್ಲಿ ವಿಟಮಿನ್-ಸಿ ಸಮೃದ್ಧವಾಗಿದೆ. ಇದು ಶ್ವಾಸಕೋಶವನ್ನು ಆರೋಗ್ಯಕರವಾಗಿರಿಸುತ್ತದೆ. ಆದ್ದರಿಂದ ನಿಮ್ಮ ದೈನಂದಿನ ಆಹಾರದಲ್ಲಿ ಪಾಲಕ್ ಸೇರಿಸುವುದು ಉತ್ತಮ, ವಿಶೇಷವಾಗಿ ಚಳಿಗಾಲದಲ್ಲಿ ಸೇವಿಸಿದರೆ ಇನ್ನು ಒಳ್ಳೆಯದು.
- ಬ್ರೊಕೊಲಿ:ನಿಮ್ಮ ಶ್ವಾಸಕೋಶವನ್ನು ಆರೋಗ್ಯದಿಂದಿರಿಸಲು ನಿಮ್ಮ ಆಹಾರದಲ್ಲಿ ಬ್ರೊಕೊಲಿಯನ್ನು ಸೇರಿಸಿಕೊಳ್ಳಬಹುದು. ಇದು ವಿಟಮಿನ್ ಸಿ, ಫೋಲೇಟ್ ಮತ್ತು ಪೋಷಕಾಂಶಗಳನ್ನು ಹೊಂದಿದೆ. ಇದು ಶ್ವಾಸಕೋಶಕ್ಕೆ ಉತ್ತಮವಾಗಿದೆ.
- ಬೆರ್ರಿ ಹಣ್ಣುಗಳು:ಬೆರ್ರಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಶ್ವಾಸಕೋಶವನ್ನು ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಶ್ವಾಸಕೋಶದ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಬೆರ್ರಿ ಹಣ್ಣುಗಳು ಆಸ್ತಮಾದಂತಹ ಗಂಭೀರ ಕಾಯಿಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಬೆಳ್ಳುಳ್ಳಿ:ಬೆಳ್ಳುಳ್ಳಿಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಲವಾರು ರೀತಿಯ ಸೋಂಕುಗಳನ್ನು ತಡೆಗಟ್ಟಲು ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸಬಹುದು. ಬೆಳ್ಳುಳ್ಳಿ ವಿವಿಧ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಬೆಳ್ಳುಳ್ಳಿ ಶ್ವಾಸಕೋಶದ ಉರಿಯೂತದ ನಿವಾರಣೆಗೆ ಉತ್ತಮವಾಗಿದೆ.
- ಅರಿಶಿನ:ಅರಿಶಿನದಲ್ಲಿ ಔಷಧೀಯ ಗುಣಗಳು ಹೇರಳವಾಗಿದೆ. ಇದು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಉರಿಯೂತದ ಸಮಸ್ಯೆಯನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ಹೊಂದಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಅರಿಶಿನವನ್ನು ಸೇರಿಸುವ ಮೂಲಕ ಶ್ವಾಸಕೋಶದ ಉರಿಯೂತದ ತೊಂದರೆಯನ್ನು ಕಡಿಮೆ ಮಾಡಬಹುದು.
- ಶುಂಠಿ:ಶುಂಠಿಯು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ದೂರಮಾಡುವ ಶಕ್ತಿಯನ್ನು ಹೊಂದಿದೆ. ನಿಮ್ಮ ಶ್ವಾಸಕೋಶವನ್ನು ಆರೋಗ್ಯಕರವಾಗಿಡಲು ನಿಮ್ಮ ಆಹಾರದಲ್ಲಿ ಶುಂಠಿಯನ್ನು ಸೇರಿಸಿಕೊಳ್ಳಬಹುದು. ಶುಂಠಿಯು ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ. ದೈನಂದಿನ ಆಹಾರದಲ್ಲಿ ಹೆಚ್ಚಿನ ಪ್ರೊಟೀನ್ ಒದಗಿಸುತ್ತದೆ. ಜೊತೆಗೆ ಆರೋಗ್ಯಕರ ಶ್ವಾಸಕೋಶಕ್ಕೆ ಶುಂಠಿ ಅತ್ಯಗತ್ಯ. ಆಹಾರದ ಜೊತೆಗೆ ವ್ಯಾಯಾಮ ಮತ್ತು ಶ್ವಾಸಕೋಶದ ಶುದ್ಧೀಕರಣವು ತುಂಬಾ ಮುಖ್ಯವಾಗಿದೆ. ಇದು ಶ್ವಾಸಕೋಶವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.